ಐಎಸ್‌ಐಎಸ್ ಉಗ್ರರಿಂದ ಹೈದರಾಬಾದ್‌ನ ಇಬ್ಬರ ಬಿಡುಗಡೆ

ಹೈದರಾಬಾದ್, ಆಗಸ್ಟ್ 5 : ಐಎಸ್‌ಐಎಸ್ ಉಗ್ರರು ಅಪಹರಣ ಮಾಡಿದ್ದ ಇಬ್ಬರು ಭಾರತೀಯನ್ನು ಬಿಡುಗಡೆ ಮಾಡಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಇಬ್ಬರು ಸೇರಿ ನಾಲ್ವರು ಭಾರತೀಯರನ್ನು ಉಗ್ರರು ಶುಕ್ರವಾರ ಅಪಹರಿಸಿದ್ದರು.

ಉಗ್ರರ ವಶದಲ್ಲಿದ್ದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಬಲರಾಮ್ ಹಾಗೂ ಗೋಪಿಕೃಷ್ಣ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಕಂಬಪಾಟಿ ರಾಮಮೋಹನ್ ರಾವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಇಬ್ಬರು ಗುರುವಾರ ಸಂಜೆ ಅಥವ ಶುಕ್ರವಾರ ಭಾರತಕ್ಕೆ ವಾಪಸ್ ಆಗಲಿದ್ದಾರೆ. [ಉಗ್ರರ ವಶದಲ್ಲಿದ್ದ ಕನ್ನಡಿಗರ ಬಿಡುಗಡೆ]

hyderabad

ಕೋಲಾರದ ವಿಜಯ್‍ ಕುಮಾರ್, ರಾಯಚೂರಿನ ಲಕ್ಷ್ಮೀಕಾಂತ್ ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದ ಬಲರಾಮ್ ಹಾಗೂ ಗೋಪಿಕೃಷ್ಣ ಅವರನ್ನು ಉಗ್ರರು ಅಪಹರಣ ಮಾಡಿದ್ದರು. ಇವರಲ್ಲಿ ಕರ್ನಾಟಕದ ಇಬ್ಬರನ್ನು ಶನಿವಾರವೇ ಬಿಡುಗಡೆ ಮಾಡಲಾಗಿತ್ತು. [ISIS ಸೇರಿದ ಕೇರಳದ ಪತ್ರಕರ್ತ]

ಬಲರಾಮ್ ಹಾಗೂ ಗೋಪಿಕೃಷ್ಣ ಅವರು ಶಿರ್ತೆ ವಿವಿಯಲ್ಲಿ ಉಪನ್ಯಾಸಕರಾಗಿದ್ದರು ಎಂದು ಆಂಧ್ರ ಪ್ರದೇಶ ಸರ್ಕಾರದ ದೆಹಲಿ ಪ್ರತಿನಿಧಿ ಕಂಬಪಾಟಿ ರಾಮಮೋಹನ್ ರಾವ್ ಹೇಳಿದ್ದಾರೆ. ಭಾರತಕ್ಕೆ ವಾಪಸ್ ಆಗುವಾಗ ಇವರಿಬ್ಬರನ್ನು ಉಗ್ರರು ಅಪಹರಣ ಮಾಡಿದ್ದರು.

ಉಗ್ರರ ವಶದಿಂದ ಬಿಡುಗಡೆಗೊಂಡಿದ್ದ ಕೋಲಾರದ ವಿಜಯ್‍ ಕುಮಾರ್, ರಾಯಚೂರಿನ ಲಕ್ಷ್ಮೀಕಾಂತ್ ಅವರು ಮಂಗಳವಾರ ಕರ್ನಾಟಕ್ಕೆ ಆಗಮಿಸಿದ್ದರು. ಗೋಪಿಕೃಷ್ಣ ಮತ್ತು ಬಲರಾವ್ ಅವರು ಗುರುವಾರ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+