ತೆಲಂಗಾಣ: ಸೀಟು ಹಂಚಿಕೆ ರಾಜಕೀಯ, ಕಾಂಗ್ರೆಸ್ 90ರಲ್ಲಿ ಸ್ಪರ್ಧೆ
ಹೈದರಾಬಾದ್, ಅಕ್ಟೋಬರ್ 28: ತೆಲಂಗಾಣದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಕೊನೆಗೂ ಮುಕ್ತಾಯ ಕಂಡಿದೆ. ಕಾಂಗ್ರೆಸ್ 90 ಕ್ಷೇತಗಳಲ್ಲಿ ಸ್ಪರ್ಧೆಗಿಳಿಯಲಿದೆ.
ಮೈತ್ರಿಕೂಟದ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದರ ಜತೆಗೆ, ಅಧಿಕಾರಕ್ಕೆ ಬಂದರೆ ಕ್ಯಾಬಿನೆಟ್, ಎಂಎಲ್ಸಿ ಸ್ಥಾನಗಳ ಹಂಚಿಕೆ ಬಗ್ಗೆ ಕೂಡಾ ವಿಸ್ತಾರವಾಗಿ ಚರ್ಚಿಸಲಾಗಿದೆ.
119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷವು 90 ಕ್ಷೇತ್ರ ಹಾಗೂ ತೆಲುಗು ದೇಶಂ ಪಾರ್ಟಿ 16, ಟಿಜೆಎಸ್ 10 ಹಾಗೂ ಸಿಪಿಐ 3 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಮೈತ್ರಿಕೂಟಕ್ಕೆ ಗೆಲುವು ಲಭಿಸಿ, ಅಧಿಕಾರಕ್ಕೆ ಬಂದರೆ ಟಿಡಿಪಿ, ಟಿಜೆಎಸ್, ಸಿಪಿಐನ ಸದಸ್ಯರಿಗೆ ಕ್ಯಾಬಿನೆಟ್ ದರ್ಜೆ ಹಾಗೂ ಎಂಎಲ್ಸಿ ಸ್ಥಾನಗಳನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ.
ಟಿಪಿಸಿಸಿ ಮುಖ್ಯಸ್ಥ ಉತ್ತಮ್ ಕುಮಾರ್ ರೆಡ್ಡಿ ಅವರು ದಿಢೀರ್ ಆಗಿ ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. ನವೆಂಬರ್ 01ಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಲು ಕಾಂಗ್ರೆಸ್ ಮುಂದಾಗಿದೆ.
ತೆಲಂಗಾಣದಲ್ಲಿ ಡಿಸೆಂಬರ್ 07ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬರಲಿದೆ.












Click it and Unblock the Notifications