ವೈದ್ಯರ ಕೆನ್ನೆಗೆ ಹೊಡೆದು ಕೊವಿಡ್ 19 ರೋಗಿಯ ಪುತ್ರನಿಂದ ಹಲ್ಲೆ
ಹೈದರಾಬಾದ್, ಏಪ್ರಿಲ್ 15: ವೈದ್ಯರ ಕೆನ್ನೆಗೆ ಹೊಡೆದು ಕೊವಿಡ್ 19 ರೋಗಿಯ ಪುತ್ರ ಹಲ್ಲೆ ನಡೆಸಿರುವ ಘಟನ ಹೈದರಾಬಾದಿನಲ್ಲಿ ನಡೆದಿದೆ.
ಒಸ್ಮಾನಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಜೂನಿಯರ್ ಡಾಕ್ಟರ್ ನಿಖಿಲ್ ಹಲ್ಲೆಗೆ ಒಳಗಾಗಿದ್ದಾರೆ. ಐಸೊಲೇಷನ್ ವಾರ್ಡ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ತಮ್ಮ ತಂದೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಡುವಂತೆ ಆತ ಕೇಳಿದ್ದ, ಆದರೆ ರೋಗಿಯ ಮೊದಲ ಪರೀಕ್ಷೆಯನ್ನು ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ರೋಗಿಯನ್ನು ಮನೆಗೆ ಕರೆದೊಯ್ಯುವಂತಿಲ್ಲ ಎಂದು ವೈದ್ಯರು ತಿಳಿಸಿದ್ದರು.

ಅದಕ್ಕೆ ಕೋಪಗೊಂಡು ರೋಗಿಯ ಪುತ್ರ ವೈದ್ಯರ ಕೆನ್ನೆಗೆ ಹೊಡೆದದ್ದು, ಕಿವಿಯಿಂದ ರಕ್ತಸ್ರಾವವಾಗಿದೆ. ವೈದ್ಯರ ಆರೋಗ್ಯ ಈಗ ಸ್ಥಿರವಾಗಿದೆ.
ವೈದ್ಯರ ಮೇಲೆ ಹಲ್ಲೆ ನಡೆಸಿದವನ ವಿರುದ್ಧ ಅಫ್ಜಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ವೈದ್ಯರಿಗೆ ರಕ್ಷಣೆ ನೀಡುವಂತೆ ತೆಲಂಗಾಣ ಜ್ಯೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.
ಕೆಲವು ದಿನಗಳ ಹಿಂದೆ ಗಾಂಧಿ ಆಸ್ಪತ್ರೆಯಲ್ಲೂ ಇದೇ ರೀತಿ ಘಟನೆ ನಡೆದಿದ್ದು, ಈಗ ಮರುಕಳಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದೆಡೆ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕು ಎನ್ನುವ ಮಾತುಗಳು ಕೇಳಿಬರುತ್ತಿದ್ದರೆ ಇನ್ನೊಂದೆಡೆ ಹಲ್ಲೆಗಳು ಹೆಚ್ಚಾಗಿವೆ.












Click it and Unblock the Notifications