ವೇಶ್ಯಾವಾಟಿಕೆ ಬಲೆಯಲ್ಲಿ ಮತ್ತೊಬ್ಬ ತೆಲುಗು ನಟಿ
ಹೈದರಾಬಾದ್, ಸೆ.9: ವೇಶ್ಯಾವಾಟಿಕೆ ಜಾಲದಲ್ಲಿ ಬಹುಭಾಷಾ ನಟಿ ಶ್ವೇತಾ ಬಸು ಸ್ವಯಂಪ್ರೇರಿತಳಾಗಿ ಸಿಲುಕಿಕೊಂಡಿರುವ ಸುದ್ದಿ ಬಂದ ಬೆನ್ನಲ್ಲೇ ಮತ್ತೊಬ್ಬ ನಟಿ ಬಂಧನವಾಗಿದೆ. ಬಿಟೆಕ್ ಬಾಬು ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದ ದಿವ್ಯಾ ಶ್ರೀ ಬಂಧಿತ ನಟಿ.
ಪೊಲೀಸರಿಗೆ ಗುಂಟೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ.ನಂತರ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ವೇಶ್ಯಾರೂಪದಲ್ಲಿ ನಟಿ ದಿವ್ಯಾ ಶ್ರೀ ಇರುವುದು ಪತ್ತೆಯಾಗಿದೆ.[ವೇಶ್ಯಾಕೂಪದಲ್ಲಿ ಸಿಲುಕಿದ ಮೀನು ನಾನು]
ದಿವ್ಯಾಶ್ರೀ ಜೊತೆಗೆ ನಟ ಪವನ್ ಕುಮಾರ್, ಚಂದು ಅಲ್ಲದೆ ಇನ್ನೂ ಕೆಲವು ರೂಪದರ್ಶಿ ಕಮ್ ನಟಿಯರು ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೂ ಶ್ವೇತಾ ಬಸು ಸೆರೆ ಸಿಕ್ಕ ಹೈದರಾಬಾದಿನ ಹೈಟೆಕ್ ವೇಶ್ಯಾವಾಟಿಕೆ ಪ್ರಕರಣಕ್ಕೂ ಸಂಬಂಧ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇಂಡಸ್ಟ್ರಿಯಲ್ಲಿ ಇನ್ನೂ ಅನೇಕ ಹೀರೋಯಿನ್ ಗಳ ಕಥೆಯೂ ಇದೇ ರೀತಿ ಇದೆ. ನನ್ನಂತೆ ಹಲವಾರು ಮಂದಿ ಸಂಕಷ್ಟದಲ್ಲಿದ್ದಾರೆ. ತೊಂದರೆ ಹೇಳಿಕೊಳ್ಳುವಂತಿಲ್ಲ. ಪರಿಸ್ಥಿತಿ ಒಪ್ಪಿಕೊಳ್ಳುವಂತಿಲ್ಲ ಎಂದಿದ್ದಾರೆ.[ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ]
ಬಾಲನಟಿಯಾಗಿ ಗಮನ ಸೆಳೆದ ಶ್ವೇತಾ ಪ್ರಸಾದ್ ಮಕ್ಡಿ, ಇಕ್ಬಾಲ್ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಮಕ್ಡಿ ಚಿತ್ರದ ಚುನ್ನಿ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ, ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಗಳಿಸಿದ್ದರು. ನಂತರ ಡರ್ನಾ ಜರೂರಿ ಹೈ(ಹಿಂದಿ), ಕೊತ್ತ ಬಂಗಾರು ಲೋಕಂ(ತೆಲುಗು), ಎಕ್ ನದೀರ್ ಗೊಲ್ಪೋ(ಬೆಂಗಾಳಿ) ಚಿತ್ರಗಳಲ್ಲಿ ನಟಿಸಿದ್ದರು.
ವಿಚಾರಣೆ ಶ್ವೇತಾ ಬಸು ಮಾತನಾಡುತ್ತಾ, ನನ್ನಂತೆ ಅನೇಕ ನಟಿಯರು ಈ ಜಾಲದಲ್ಲಿ ಸಿಲುಕಿದ್ದಾರೆ. ಇಲ್ಲಿ ಹಣವೇ ಪ್ರಧಾನ. ನಮ್ಮ ಅಸಹಾಯಕತೆಯನ್ನು ಬಳಸಿಕೊಂಡು ದುಡ್ಡು ಮಾಡಲು ಯತ್ನಿಸುತ್ತಿರುವ ಸಿನಿಮಾ ಮಂದಿಗಳು ಅನೇಕರಿದ್ದಾರೆ. ಇವರ ಹೆಸರು ನಾನು ಬಹಿರಂಗಪಡಿಸುತ್ತೇನೆ ಎಂದಿದ್ದರು.












Click it and Unblock the Notifications