ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ: ಅತ್ಯಾಚಾರ ಸಂತ್ರಸ್ತೆ ತಂದೆ

ಹೈದರಾಬಾದ್, ಡಿಸೆಂಬರ್ 06: ತೆಲಂಗಾಣ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಜೀವತ್ತ ಸುಟ್ಟಿದ್ದ ಕಾಮುಕರನ್ನು ಕೃತ್ಯ ಎಸಗಿದ ಸ್ಥಳದಲ್ಲಿಯೇ ಎನ್‌ಕೌಂಟರ್ ಮಾಡಲಾಗಿದೆ.

ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ ನಲ್ಲಿ ಹೊಡೆದು ಉರುಳಿಸಿರುವ ಬಗ್ಗೆ ಅತ್ಯಾಚಾರ ಸಂತ್ರಸ್ತೆ ದಿಶಾ (ಹೆಸರು ಬದಲಿಸಲಾಗಿದೆ) ತಂದೆ ಮಾತನಾಡಿದ್ದು, 'ಮಗಳ ಆತ್ಮಕ್ಕೆ ಈಗ ನ್ಯಾಯ ಸಿಕ್ಕಿದೆ' ಎಂದು ಹೇಳಿದ್ದಾರೆ.

'ನನ್ನ ಮಗಳು ಸಾವನ್ನಪ್ಪಿ ಹತ್ತು ದಿನವಾಯ್ತು ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ದೊರಕಿದೆ. ನಾನು ಪೊಲೀಸ್ ಇಲಾಖೆಗೆ ಹಾಗೂ ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ' ಎಂದು ಹೇಳಿದರು.

My Daughters Soul At Peace Now: Dishas Father

ದೆಹಲಿಯ ನಿರ್ಭಯಾ ತಾಯಿ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಒಬ್ಬ ಸಂತ್ರಸ್ತೆಗಾದರೂ ನ್ಯಾಯ ದೊರಕಿದೆ' ಎಂದು ಹೇಳಿದ್ದಾರೆ.

ಇಂದು ಬೆಳಿಗ್ಗೆ ಚತ್ತನಪಲ್ಲಿ ಬಳಿ ನಾಲ್ವರು ಆರೋಪಿಗಳಾದ ನವೀನ್, ಮೊಹಮ್ಮದ್ ಆರೀಫ್, ಚೆನ್ನಕೇಶವುಲು, ಶಿವಾ ಅವರನ್ನು ಎನ್‌ಕೌಂಟರ್‌ ನಲ್ಲಿ ಕೊಲ್ಲಲಾಗಿದೆ. ಆರೋಪಿಗಳನ್ನು ಸ್ಥಳ ಮಹಜರ್ ಮಾಡಲು ಕರೆದುಕೊಂಡು ಹೋಗಲಾಗಿತ್ತು. ಆ ವೇಳೆ ಆರೋಪಿಗಳು ಪೊಲೀಸರ ಮೇಲೆ ಕಲ್ಲು ತೂರಿ ಪರಾರಿ ಆಗಲು ಯತ್ನಿಸಿದರು ಹಾಗಾಗಿ ಅವರನ್ನು ಗುಂಡು ಹೊಡೆದು ಕೊಲ್ಲಲಾಗಿದೆ.

ನವೆಂಬರ್ 27 ರಂದು ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆ ಬದುಕಿರುವಾಗಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+