ಜಗನ್ ಗೆ ಬೆಂಬಲ ಸೂಚಿಸಿದ ಒವೈಸಿ, ಮಾರ್ಚ್ 16ರಿಂದ ಪ್ರಚಾರ ಶುರು
ಹೈದರಾಬಾದ್, ಮಾರ್ಚ್ 14: ವೈಎಸ್ಸಾರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಮಾರ್ಚ್ 16ರಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ದಿವಂಗತ ವೈ.ಎಸ್ ರಾಜಶೇಖರ ರೆಡ್ಡಿ ಅವರ ಸಮಾಧಿ ಸ್ಥಳವಿರುವ ಕಡಪ ಜಿಲ್ಲೆಯ ಇಡುಪಲಪಾಳ್ಯದಲ್ಲಿ ಜಗನ್ ಅವರು ಪೂಜೆ ಸಲ್ಲಿಸಲಿದ್ದಾರೆ.
ಮಾರ್ಚ್ 16ರಂದು ಗುಂಟೂರಿನ ಗುರಾಜಾಲದಲ್ಲಿ ಮೊದಲ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ನರ್ಸಿಪಟ್ಟಣಂ, ನೆಲ್ಲಿಮೆರ್ಲಾ ಹಾಗೂ ಪಿ ಗನ್ನಾವರಂನಲ್ಲಿ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳನ್ನು ಮಾರ್ಚ್ 24ರ ತನಕ ಸುತ್ತಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ತಳಸಿಲ ರಘುರಾಮ್ ಹೇಳಿದರು.
ಜಗನ್ ಅವರ ತಾಯಿ ವೈಎಸ್ ವಿಜಯಲಕ್ಷ್ಮಿ, ಸೋದರಿ ವೈಎಸ್ ಶರ್ಮಿಳಾ ಅವರು ಚುನಾವಣಾ ಪ್ರಚಾರದಲ್ಲಿ ಜಗನ್ ಗೆ ಸಾಥ್ ನೀಡಲಿದ್ದಾರೆ. ರಾಜಶೇಖರ ರೆಡ್ಡಿ ಅವರಂತೆ ಪ್ರಜಾ ಸಂಕಲ್ಪ ಯಾತ್ರೆ ನಡೆಸಿದ್ದ ಜಗನ್ ಅವರು 134 ವಿಧಾನಸಭಾ ಕ್ಷೇತ್ರಗಳನ್ನು ಕ್ರಮಿಸಿದ್ದರು. ಬುಧವಾರದಂದು ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಬೇಕಿತ್ತು. ಆದರೆ, ಅಂತಿಮ ಹಂತದ ಬದಲಾವಣೆಗಳಿಗೆ ಒಳಪಟ್ಟಿದ್ದು, ಇನ್ನೆರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗಲಿದೆ ಎಂದರು.

ಜಗನ್ ಗೆ ಸಿಕ್ಕಿದೆ ಅಸಾಸುದ್ದೀನ್ ಒವೈಸಿ
ಈ ಲೋಕಸಭೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್-ಇ-ಇತ್ತೇದುಲ್ ಮುಸ್ಲೀಮಿನ್(ಎಐಎಂಐಎಂ) ಪಕ್ಷದ ಅಧ್ಯಕ್ಷ, ಸಂಸದ ಅಸಾದುದ್ದೀನ್ ಒವೈಸಿ ಅವರು ವೈ ಎಸ್ಜಗನ್ಮೋಹನ್ರೆಡ್ಡಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶದ 25 ಲೋಕಸಭಾ ಕ್ಷೇತ್ರಗಳಲ್ಲಿ ವೈಎಸ್ಜಗನ್ ಮೋಹನ್ ರೆಡ್ಡಿ ಅವರ ಪಕ್ಷವನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ. ಆಂಧ್ರದಲ್ಲಿ ಎಲ್ಲರೂ ವೈಎಸ್ಆರ್ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡುತ್ತೇನೆ. ತೆಲಂಗಾಣದಲ್ಲಿ ಎಲ್ಲರೂ ಎಐಎಂಐಎಂಗೆ ಬೆಂಬಲಿಸಬೇಕು ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ಮುಸ್ಲಿಮರೇ ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿ
ಪ್ರತಿ ಬಾರಿಯ ಚುನಾವಣೆಯಲ್ಲೂ ಮುಸ್ಲೀಂ ಸಮುದಾಯದ ಮತದಾನ ಪ್ರಮಾಣ ಕುಸಿಯುತ್ತದೆ ಎಂದು ಚುನಾವಣೆ ಆಯೋಗ ಹೇಳುತ್ತಲೇ ಇರುತ್ತದೆ. ಆದ್ದರಿಂದ ಈ ಬಾರಿ ಮುಸ್ಲೀಮರು ಬೆಳಗ್ಗೆಯೇ ಬಂದು ತಮ್ಮ ಮತವನ್ನು ಸೂಕ್ತವಾದವರಿಗೆ ನೀಡಬೇಕು, ರಂಜಾನ್ ಮಾಸ ಮೇ 5ರಂದು ಬರಲಿದೆ, ಜೂನ್ 03ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಯಬೇಕಿದೆ.ರಂಜಾನ್ ಗೆ ಚುನಾವಣೆ ಅಡ್ಡಿಯಾಗಿದೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ ಎಂದರು.

ಜಗನ್ ಗೆ ಟಿಡಿಪಿ ಮಣಿಸುವ ಗುರಿ
ಏಪ್ರಿಲ್ 11ರಿಂದ ಏಳು ಹಂತಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಮೇ 19ಕ್ಕೆ ಮತದಾನ ಪ್ರಕ್ರಿಯೆ ಮುಗಿಯಲಿದೆ. ಮೇ 23ರಂದು ಫಲಿತಾಂಶ ಹೊರಬರಲಿದೆ. ಕಾಂಗ್ರೆಸ್ಸೇತರ, ಬಿಜೆಪಿಯೇತರ ಪಕ್ಷಗಳು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಒವೈಸಿ ಹೇಳಿದ್ದಾರೆ. ವೈಎಸ್ಸಾರ್ ಪಕ್ಷವು ಈ ಬಾರಿ ಟಿಡಿಪಿಯನ್ನು ಮಣಿಸಿ ಆಂಧ್ರಪ್ರದೇಶದಲ್ಲಿ ರಾಜ್ಯಭಾರ ಮಾಡಲು ಉತ್ಸುಕವಾಗಿದೆ.
| Array |
ಬೂತ್ ಮಟ್ಟದ ಕಾರ್ಯಕರ್ತರಿಗೆ ಜಗನ್ ಸಂದೇಶ
ಮುಂದಿನ 27 ದಿನಗಳ ಕಾಲ ನಿಮ್ಮ ಬೆಂಬಲ ನನಗೆ ಅಗತ್ಯ, ಪ್ರತಿ ವೋಟಿನ ಮಹತ್ವ ಈಗ ತಿಳಿಯಲಿದೆ. ಕಳೆದ ನಾಲ್ಕು ವರ್ಷಗಳಿಂದ ನೀವು ಪಟ್ಟ ಶ್ರಮಕ್ಕೆ ಬೆಲೆ ಈಗ ಸಿಗಲಿದೆ ಎಂದು ವೈಎಸ್ಸಾರ್ಟ್ ಕಾಂಗ್ರೆಸ್ಸಿನ ಬೂತ್ ಮಟ್ಟದ ಕಾರ್ಯಕರ್ತರನ್ನು ಉದ್ದೇಶಿಸಿ ಟ್ವೀಟ್ ಮಾಡಿದ ಜಗನ್.












Click it and Unblock the Notifications