• search
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಬ್ಲಿಕ್ ಟಾಯ್ಲೆಟ್ ನಲ್ಲಿ ಮಹಿಳೆಯ ಫೋನ್ ನಂಬರ್ ಬರೆದಿದ್ದ ಚಾಲಕ ಅಂದರ್

|

ಹೈದರಾಬಾದ್, ಜುಲೈ 19: ಹಣ ಪಾವತಿ ವಿಚಾರವಾಗಿ ಮಹಿಳೆಯೊಬ್ಬರ ಜತೆ ಮನಸ್ತಾಪ ಆಯಿತು ಎಂಬ ಕಾರಣಕ್ಕೆ ಕ್ಯಾಬ್ ಸೇವೆ ಒದಗಿಸುವ ಸಂಸ್ಥೆಯೊಂದರ ಚಾಲಕ ಆಕೆಯ ಮೊಬೈಲ್ ನಂಬರ್ ಅನ್ನು ಸಾರ್ವಜನಿಕ ಶೌಚಾಲಯದಲ್ಲಿ ಬರೆದು, ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಆ ನಂತರ ಮಹಿಳೆಗೆ ಯಾರ್ಯಾರೋ ಅಪರಿಚಿತರು ಕರೆ ಮಾಡಿ, ತೀರಾ ಅಸಭ್ಯವಾಗಿ ಮಾತನಾಡಲು ಆರಂಭಿಸಿದ್ದಾರೆ. ಬೇಸತ್ತ ಆಕೆ ಸೈಬರಾಬಾದ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ನಿಲ್ಲದ ಟ್ಯಾಕ್ಸಿ ಚಾಲಕರ ಆಟಾಟೋಪ: ಮಹಿಳಾ ಟಿಕ್ಕಿ ಮೇಲೆ ದೌರ್ಜನ್ಯ

ಜುಲೈ ಎಂಟರಂದು ಮಹಿಳೆಯು ಕ್ಯಾಬ್ ಅಪ್ಲಿಕೇಷನ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಆಗ ಅಂದಾಜು ಪ್ರಯಾಣ ದರ ಇನ್ನೂರು ರುಪಾಯಿ ತೋರಿಸಿತ್ತು. ಆ ನಂತರ ಚಾಲಕ ಸುತ್ತಿಬಳಸಿ ಕರೆದುಕೊಂಡು ಹೋಗಿದ್ದರಿಂದ ಆ ದರ ಎಂಟುನೂರು ರುಪಾಯಿ ಆಗಿದೆ. ಆದ್ದರಿಂದ ಮೊದಲು ತೋರಿಸಿದಷ್ಟೇ ಪ್ರಯಾಣ ದರ ನೀಡುವುದಾಗಿ ಪಟ್ಟು ಹಿಡಿದು, ಅದೇ ಮೊತ್ತ ನೀಡಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಚಾಲಕ ಆಕೆ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ತೀರ್ಮಾನಿಸಿ, ಸಾರ್ವಜನಿಕ ಶೌಚಾಲಯದ ಗೋಡೆ ಮೇಲೆ ಕೆಟ್ಟದಾಗಿ ಕಾಮೆಂಟ್ ಹಾಕಿ, ಮಹಿಳೆಯ ಫೋನ್ ನಂಬರ್ ಬರೆದಿದ್ದಾನೆ. ಆ ನಂತರ ಅಪರಿಚಿತರಿಂದ ಕರೆಗಳು ಬರಲಾರಂಭಿಸಿವೆ. ಆಗ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಫೇಸ್ ಬುಕ್ ನ ಫ್ರೆಂಡ್ ಲಿಸ್ಟ್ ನಿಂದ ತೆಗೆದುಹಾಕಿದ ಕಾರಣಕ್ಕೆ ವ್ಯಕ್ತಿಯೊಬ್ಬ ಹಿಂಸೆ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಫೇಸ್ ಬುಕ್ ಮೂಲಕ ಸ್ನೆಹಿತನಾದ ವ್ಯಕ್ತಿ ಜತೆಗೆ ತಮ್ಮ ಆರ್ಥಿಕ ಸಮಸ್ಯೆ ಬಗ್ಗೆ ದೂರುದಾರರು ಹೇಳಿಕೊಂಡಿದ್ದರು. ಆ ವೇಳೆ ಆತ ತನ್ನದೇ ಸಂಸ್ಥೆಯಲ್ಲಿ ಆಕೆಗೊಂದು ಉದ್ಯೋಗ ನೀಡಿದ್ದ.

ಆ ನಂತರ ಕೆಲಸ ನೀಡಿದ್ದಕ್ಕೆ ಪ್ರತಿಯಾಗಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ ಎಂದು ಸೈಬರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಹೈದರಾಬಾದ್ ಸುದ್ದಿಗಳುView All

English summary
A cab driver for a major taxi aggregator in Hyderabad decided to take out his grudge against a woman passenger over a payment dispute by allegedly writing her phone number on the wall of a public toilet.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more