ಕೊರೊನಾದಿಂದ ನಡೆಯಿತು ಆನ್ ಲೈನ್ ವಿಡಿಯೋ ಕಾಲ್ ಮದುವೆ

ಹೈದರಾಬಾದ್, ಮಾರ್ಚ್ 17: ಕೊರೊನಾ ಭೀತಿ ವಿಶ್ವಾದ್ಯಂತ ಹಬ್ಬಿದೆ. ಇದರಿಂದ ಜನ ಜೀವನ ಉಲ್ಪಾ ಆಗಿದೆ. ಕೊರೊನಾ ವೈರಸ್‌ನಿಂದ ಇಲ್ಲೊಂದು ಜೋಡಿಯ ಮದುವೆ ಆನ್ ಲೈನ್‌ನಲ್ಲಿಯೇ ನಡೆದು ಹೋಗಿದೆ.

ಈ ಜನರೇಷನ್‌ನವರು ಮುಂದೆ ಆನ್ ಲೈನ್‌ನಲ್ಲಿಯೇ ಮದುವೆ ಆಗಿಬಿಡುತ್ತಾರೆ ಎಂದು ತಮಾಷೆಗೆ ಆಡುವ ಮಾತು ನಿಜವಾಗಿ ಬಿಟ್ಟಿದೆ. ತೆಲಂಗಾಣದಲ್ಲಿ ಆನ್ ಲೈನ್ ವಿಡಿಯೋ ಕಾಲ್ ಮೂಲಕ ಮದುವೆ ನಡೆದಿದೆ. ಕೊರೊನಾ ವೈರಸ್ ಭೀತಿಯಿಂದ ಈ ರೀತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮೊಹಮ್ಮದ್ ಅಡ್ನಾನ್ ಖಾನ್ ಕಳೆದ ಐದು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಕೆಲಸ ಮಾಡಿಕೊಂಡಿರುವ ಇವರ ವಿವಾಹ ಹೈದರಾಬಾದ್‌ನಲ್ಲಿ ಇತ್ತು. ಮದುವೆ ಕಾರ್ಯಕ್ರಮಕ್ಕಾಗಿ ಶುಕ್ರವಾರ ತಮ್ಮ ಕುಟುಂಬದೊಂದಿಗೆ ಹೈದರಾಬಾದ್‌ಗೆ ಅವರು ಬರಬೇಕಾಗಿತ್ತು. ಆದರೆ, ಅದು ಸಾಧ್ಯ ಆಗಲಿಲ್ಲ.

Coronavirus: Telangana Couple Got Married In Video Call

ಮಧ್ಯಪ್ರಾಚ್ಯ ದೇಶಗಳಲ್ಲಿ ಇರುವ ನಿರ್ಭಂಧದಿಂದ ಮೊಹಮ್ಮದ್ ಅಡ್ನಾನ್ ಖಾನ್ ಭಾರತಕ್ಕೆ ಮರಳಲು ಆಗಲಿಲ್ಲ. ಹೀಗಾಗಿ, ದಾರಿ ಕಾಣದೆ ಕೊನೆಗೆ ವಿಡಿಯೋ ಕಾಲ್ ಮೂಲಕ ನಿಕಾ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ವಧು, ದುಬೈನಲ್ಲಿ ವರ ಕೂತು ಆನ್ ಲೈನ್ ನಲ್ಲಿ ಮದುವೆಯಾಗಿದ್ದಾರೆ.

ದುಬೈನಿಂದ ಬಂದ ವ್ಯಕ್ತಿ ಕೊರೊನಾ ವೈರಸ್‌ನಿಂದ ಮುಂಬೈನಲ್ಲಿ ಮೃತರಾಗಿದ್ದರು. ವಿದೇಶದಿಂದ ಭಾರತಕ್ಕೆ ಬರುವ ಜನರ ಮೇಲೆ ನಿರ್ಭಂಧ ಹೇರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+