ಬಾಲಿವುಡ್ ನಟ ಹೃತಿಕ್ ರೋಷನ್ ಮೇಲೆ ಹೈದರಾಬಾದ್ ನಲ್ಲಿ ವಂಚನೆ ಕೇಸು

ಹೈದರಾಬಾದ್ (ತೆಲಂಗಾಣ), ಜುಲೈ 4: ಹೈದರಾಬಾದ್ ಪೊಲೀಸರು ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಕಲ್ಟ್.ಫಿಟ್ ನ ರಾಯಭಾರಿ ಹೃತಿಕ್ ಹಾಗೂ ಇತರ ಮೂವರ ವಿರುದ್ಧ ಜಿಮ್ ಗ್ರಾಹಕರೊಬ್ಬರು ದೂರು ದಾಖಲಿಸಿದ್ದಾರೆ.

ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿಯನ್ನು ಜಿಮ್ ನಲ್ಲಿ ಸೇರ್ಪಡೆ ಮಾಡಿಕೊಂಡು, ನೋಂದಣಿ ನೀಡಿದ ಭರವಸೆ ನೀಡಿದಂತೆ ಸಮಯಾವಕಾಶ ನೀಡುತ್ತಿಲ್ಲ. ಯಾವಾಗ ಇಂಥ ಧೋರಣೆಗೆ ಪ್ರತಿರೋಧ ವ್ಯಕ್ತಪಡಿಸಿದೆನೋ ಆಗಿನಿಂದ ಜಿಮ್ ಗೆ ಬರುವ ವೇಳೆಯನ್ನು ಅಪ್ಲಿಕೇಷನ್ ಮೂಲಕ ಬುಕ್ ಮಾಡುವ ಸೌಲಭ್ಯವನ್ನೇ ತನಗೆ ರದ್ದು ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

ವಂಚನೆ ಹಾಗೂ ವಿಶ್ವಾಸಾರ್ಹತೆಗೆ ಧಕ್ಕೆ ಆರೋಪದ ಅಡಿಯಲ್ಲಿ ನಟ ಹೃತಿಕ್ ರೋಷನ್ ಮತ್ತು ಇತರ ಮೂವರ ವಿರುದ್ಧ ದೂರು ದಾಖಲಾಗಿದೆ. ಶಶಿಕಾಂತ್ ಎಂಬುವವರು ದೂರು ನೀಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ 17,490 ರುಪಾಯಿ ಶುಲ್ಕ ಪಾವತಿಸಿದ್ದರೂ ಜಿಮ್ ನಲ್ಲಿ ವರ್ಕೌಟ್ ಮಾಡಲು ಬಿಡುತ್ತಿಲ್ಲ ಎಂದಿದ್ದಾರೆ.

Cheating case registered against actor Hritik Roshan in Hyderabad

ಈ ಜಿಮ್ ನಿಂದ ತೂಕ ಇಳಿಸಿಕೊಳ್ಳುವ ಪ್ಯಾಕೇಜ್ ಒಂದು ವರ್ಷಕ್ಕೆ 17,490 ರುಪಾಯಿಯಿಂದ 36,400 ರುಪಾಯಿ ತನಕ ನೀಡುತ್ತಿದೆ. ಹೊಸದಾಗಿ ಪ್ಯಾಕೇಜ್ ಶುರು ಮಾಡಿದಾಗ ಕೇಂದ್ರದಿಂದ ಶಶಿಕಾಂತ್ ಗೆ ರಿಯಾಯಿತಿ ನೀಡಲಾಗಿತ್ತು. "ಆ ವೇಳೆ ಕಂಪೆನಿಯ ಜಾಹೀರಾತಿನಲ್ಲಿ ದಿನವೂ ವರ್ಕೌಟ್ ಸೆಷನ್, ತೂಕ ಇಳಿಕೆ ಖಾತ್ರಿ ಪಡಿಸಿತ್ತು. ಹೃತಿಕ್ ರೋಷನ್ ಬ್ರ್ಯಾಂಡ್ ಅಂಬಾಸಡರ್ ಆಗಿ ಅಭಿನಯಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಜನರು ತಾವಾಗಿಯೇ ನೋಂದಣಿ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+