ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಕಣ್ಣು ಈಗ ದೇವಾಲಯದ ಮೇಲೆ: ಅಸಾದುದ್ದಿನ್ ಓವೈಸಿ

|
Google Oneindia Kannada News

ಹೈದರಾಬಾದ್, ಆಗಸ್ಟ್ 21: 'ಬಿಜೆಪಿಗೆ ತನ್ನ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕೆ ಏನೂ ಇಲ್ಲ. ಆದ್ದರಿಂದಲೇ ಅದೀಗ ದೇವಾಲಯಗಳ ಬಗ್ಗೆ ಮಾತನಾಡುತ್ತಿದೆ' ಎಂದು ಎಐಎಂಐಎಂ(All India Majlis-E-Ittehadul Muslimeen ) ಮುಖಂಡ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, 'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಈಗ ಮಾತನಾಡುತ್ತಿದೆ' ಎಂದಿದ್ದಾರೆ.

ಮುಸ್ಲಿಮರು ಮುಸ್ಲಿಮರಿಗೇ ಮತ ಹಾಕಿ: ಓವೈಸಿ ವಿವಾದಾತ್ಮಕ ಹೇಳಿಕೆಮುಸ್ಲಿಮರು ಮುಸ್ಲಿಮರಿಗೇ ಮತ ಹಾಕಿ: ಓವೈಸಿ ವಿವಾದಾತ್ಮಕ ಹೇಳಿಕೆ

ಕೇಶವ್ ಪ್ರಸಾದ್ ಅವರು, "ಜನರಿಗೆ ಸುಪ್ರೀಂ ಕೋರ್ಟಿನ ತೀರ್ಪಿನ ಮೇಲೆ ಭರವಸೆ ಇದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡುವ ವಿಶ್ವಾಸವಿದೆ. ಅಕಸ್ಮಾತ್ ತೀರ್ಪು ಬೇಗ ಬಾರದೇ ಇದ್ದಲ್ಲಿ, ಮಾತುಕತೆಯ ಮೂಲಕ ಅಥವಾ ಲೋಕಸಭೆಯಲ್ಲಿ ಶಾಸನ ಮಂಡಿಸುವ ಮೂಲಕ ರಾಮಮಂದಿರ ನಿರ್ಮಾಣ ಆರಂಭಿಸಲಾಗುವುದು" ಎಂದಿದ್ದರು.

BJP failed on real issues hence talking of Temple, says Owaisi

ರಾಮಮಂದಿರ ಕುರಿತ ಶಾ ಹೇಳಿಕೆ: ಮಾಧ್ಯಮ ವರದಿ ಸುಳ್ಳು ಎಂದ ಬಿಜೆಪಿರಾಮಮಂದಿರ ಕುರಿತ ಶಾ ಹೇಳಿಕೆ: ಮಾಧ್ಯಮ ವರದಿ ಸುಳ್ಳು ಎಂದ ಬಿಜೆಪಿ

'ಬಿಜೆಪಿಗೆ ಆರ್ಥಿಕತೆಯ ವೈಫಲ್ಯ, ನಿರುದ್ಯೋಗ, ರಾಷ್ಟ್ರೀಯ ಭದ್ರತೆಗಳ ಕುರಿತು ಮಾತನಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದಲೇ ಅದು ರಾಮಮಂದಿರದ ಬಗ್ಗೆ, ದೇವಾಲಯಗಳ ಬಗ್ಗೆ ಮಾತನಾಡುತ್ತಿದೆ' ಎಂದು ಓವೈಸಿ ಲೇವಡಿ ಮಾಡಿದ್ದಾರೆ.

English summary
All India Majlis-E-Ittehadul Muslimeen (AIMIM) party president Asaduddin Owaisi on Monday said, unless the Supreme Court decides on the Ayodhya issue, the Bharatiya Janata Party (BJP) cannot do anything about it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X