• search

ಎಸಿಬಿ ಬಲೆಗೆ ಬಿದ್ದ ಈ ಲೈನ್ ಇನ್ಸ್ ಪೆಕ್ಟರ್ ಆಸ್ತಿ ಜಸ್ಟ್ 100 ಕೋಟಿ ರೂ.!

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ನೆಲ್ಲೋರ್, ಜೂನ್ 22: ಆಂಧ್ರ ಪ್ರದೇಶದಲ್ಲಿ ಕೆಳಗಿನ ದರ್ಜೆಯ ಅಧಿಕಾರಿಯೊಬ್ಬರ ಮೇಲೆ ಗುರುವಾರ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅವರ ಆಸ್ತಿ ನೋಡಿ ಅರೆ ಕ್ಷಣ ಅವಕ್ಕಾಗಿದ್ದಾರೆ. ಎಪಿ ಟ್ರಾನ್ಸ್ಕೋ ದಲ್ಲಿ ಅಧಿಕಾರಿಯಾಗಿರುವ ಎಸ್. ಲಕ್ಷ್ಮೀ ರೆಡ್ಡಿ ಸುಮಾರು 100 ಕೋಟಿ ರೂಪಾಯಿಗೂ ಮೀರಿ ಅಕ್ರಮ ಆಸ್ತಿ ಸಂಪಾದಿಸಿದ್ದು ದಾಳಿ ವೇಳೆ ಪತ್ತೆಯಾಗಿದೆ.

  56 ವರ್ಷದ ಲಕ್ಷ್ಮೀ ರೆಡ್ಡಿ ಎಪಿ ಟ್ರಾನ್ಸ್ಕೋದ ಅಸಿಸ್ಟೆಂಟ್ ಇಂಜಿನಿಯರ್ ಕಚೇರಿಯಲ್ಲಿ ಲೈನ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಇವರಿಗೆ ಸೇರಿದ ನೆಲ್ಲೋರ್ ಮತ್ತು ಪ್ರಕಾಶಂ ನಲ್ಲಿರುವ ಐದು ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದ್ದರು.

  ಶಾಲೆ ಮೇಲೆ ರೇಡ್ ಮಾಡಿ ಪೊಲೀಸರ ಅತಿಥಿಯಾದ ನಕಲಿ ಎಸಿಬಿ ಅಧಿಕಾರಿ!

  ಎರಡೂ ಜಿಲ್ಲೆಗಳಲ್ಲಿ ಲಕ್ಷ್ಮೀ ರೆಡ್ಡಿಯವರಿಗೆ ಭಾರೀ ಕೃಷಿ ಭೂಮಿ ಇದೆ. ಜೊತೆಗೆ ಐಶಾರಾಮಿ ಮನೆಗಳನ್ನು ಹೊಂದಿದ್ದಾರೆ. ಪ್ರಾಥಮಿಕ ಲೆಕ್ಕಾಚಾರಗಳ ಪ್ರಕಾರ ಅವರ ಒಟ್ಟು ಆಸ್ತಿ 100 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ ಎಂಬುದಾಗಿ ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

  ACB found 100 crore asset in Andhra Pradesh line inspectors name

  ಆರೋಪಿಯು 1993ರಲ್ಲಿ ಕವಾಲಿ ಸಬ್ ಸ್ಟೇಷನ್ ನಲ್ಲಿ ಸಹಾಯಕರಾಗಿ ಸೇರಿಕೊಂಡಿದ್ದರು. ನಂತರ 1996ರಲ್ಲಿ ಅಸಿಸ್ಟೆಂಟ್ ಲೈನ್ ಮನ್ ಆಗಿ ಪದೋನ್ನತಿ ಪಡೆದಿದ್ದರು. ಮುಂದೆ 1997ರಲ್ಲಿ ಲೈನ್ ಮನ್ ಆಗಿ ನೇಮಕೊಂಡಿದ್ದರು. 2014 ರ ನಂತರ ಅವರು ಮುಂಗಮೂರು ಗ್ರಾಮದಲ್ಲಿ ಲೈನ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

  ಅವರ ಬಳಿ ಒಟ್ಟಾರೆ 57.50 ಎಕರೆ ಕೃಷಿ ಭೂಮಿ, 6 ಐಶಾರಾಮಿ ಬಂಗಲೆಗಳು, 2 ನಿವೇಶನದ ಜಾಗ, 9.95 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹಲವು ವಾಹನಗಳು ಸಿಕ್ಕಿವೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  ACB sleuths on Thursday caught lower-ranking official, working at AP Transco, for possessing disproportionate assets worth close to Rs 100 crore as per conservative estimates.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more