ಹುಬ್ಬಳ್ಳಿ : ಪತಿಯನ್ನು ಕೊಂದು ನಾಟಕವಾಡಿದ್ದ ಮಹಿಳೆ ಬಂಧನ
ಹುಬ್ಬಳ್ಳಿ, ಜೂನ್ 05 : ಪತಿಯನ್ನು ಕೊಂದು ಸಹಜ ಸಾವು ಎಂದು ನಾಟಕವಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ಕೊಂದವರು ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಕಾವ್ಯಾ.
ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರು ಕಾವ್ಯಾ (40)ಳನ್ನು ಪತಿ ಶಿವಯೋಗಿ ಹಳೆಮನೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಮೇ 2ರಂದು ಶಿವಯೋಗಿ ಅವರ ಹತ್ಯೆ ನಡೆದಿತ್ತು.
ಕಾವ್ಯಾ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಪತಿ ಶಿವಯೋಗಿಯನ್ನು ಮೇ 2ರಂದು ಕೊಲೆ ಮಾಡಿದ್ದರು. ಬಳಿಕ ಮಂಚದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರ ಬಳಿ ಹೇಳಿದ್ದರು.

ಶಿವಯೋಗಿ ಅವರ ಸಹೋದರಿ ರಾಜೇಶ್ವರಿ ಅವರು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದರು. ಈ ಸಾವಿನ ಬಗ್ಗೆ ಅನುಮಾನವಿದೆ. ಸೂಕ್ತವಾದ ತನಿಖೆ ನಡೆಸಬೇಕು ಎಂದು ಕೋರಿದ್ದರು. ಪೊಲೀಸರು ಕಾವ್ಯಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿಯನ್ನು ಕೊಲೆ ಮಾಡಿರುವುದಾಗಿ ಕಾವ್ಯಾ ಅವರು ತಪ್ಪೊಪ್ಪಿಕೊಂಡಿದ್ದಾರೆ. ಕಾವ್ಯಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications