ಗೆದ್ದ ಬೆನ್ನಲ್ಲೆ ರಾತ್ರೋ ರಾತ್ರಿ ಪ್ರಹ್ಲಾದ್ ಜೋಶಿ ದೆಹಲಿಗೆ ದೌಡಾಯಿಸಿದ್ದು ಏಕೆ?

ಹುಬ್ಬಳ್ಳಿ, ಜೂನ್ 05: ಧಾರವಾಡ ಲೋಕಸಭಾ ಚುಣಾವಣೆಯಲ್ಲಿ ಐದನೇ ಭಾರಿಗೆ ಪ್ರಹ್ಲಾದ್ ಜೋಶಿಯವರು ಗೆದ್ದು ಬೀಗಿದ್ದಾರೆ. ಕಾಂಗ್ರೆಸ್‌ನ ವಿನೋದ್ ಅಸೂಟಿ ಅವರಿಗೆ ಸೋಲಾಗಿದೆ. ಹೀಗೆ ಗೆಲುವಿನ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೆ ಮಂಗಳವಾರ ರಾತ್ರೋ ರಾತ್ರಿ ಪ್ರಹ್ಲಾದ್ ಜೋಶಿಯವರು ದೆಹಲಿಗೆ ದೌಡಾಯಿಸಿದ್ದಾರೆ. ಇಷ್ಟು ಅವಸವರಸರವಾಗಿ ತೆರಳಿದ್ದು ಏಕೆ? ಹೈಕಮಾಂಡ್ ಬುಲಾವ್ ನೀಡಿತ್ತೆ? ಇಲ್ಲಿದೆ ಮಾಹಿತಿ

ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆದ್ದಿದ್ದು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚುನಾವಣೆ ಮತ ಎಣಿಕೆ ಮುಕ್ತಾಯದ ಬಳಿಕ ರಾತ್ರಿಯೇ ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿರುವುದು ಬಾರೀ ಕುತೂಹಲ ಸೃಷ್ಟಿಸಿದೆ.

Why Pralhad Joshi Sudden Fly to Delhi after Won in Dharwad Lok Sabha Election 2024

ಕ್ಷೇತ್ರದಲ್ಲಿ ಬಿಜೆಪಿ ಗೆದ್ದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಿಂದ ಪ್ರಮಾಣ ಪತ್ರ ಪಡೆದು ಪ್ರಹ್ಲಾದ್ ಜೋಶಿ, ಬೆಂಬಲಿಗರು, ಮುಖಂಡರು ಹಾಗೂ ಜೋಶಿಕುಟುಂಬದ ಸದಸ್ಯರು, ಧಾರವಾಡ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಧಾರವಾಡ ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಪಕ್ಷದ ಪ್ರಮುಖರು ಇಲ್ಲಿನ ಮುರುಘಾಮಠಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದರು. ಬೃಹತ್ ಮೆರವಣಿಗೆ ಮೂಲಕ ಗೆಲುವನ್ನು ಸಂಭ್ರಮಿಸಿದರು.

ಕೇಂದ್ರ ಸಚಿವ ಸಂಪುಟ ಸಭೆ

ಇದಾದ ಬಳಿಕ ಅವರು ನವದೆದೆಹಲಿಗೆ ತೆರಳಿದ್ದಾರೆ. ಅಲ್ಲಿ ಇಂದು ಬಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಇಂದಿನ ಈ ಮಹತ್ವದ ಸಭೆಯಲ್ಲಿ ಪ್ರಹ್ಲಾದ್ ಜೋಶಿಯವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Why Pralhad Joshi Sudden Fly to Delhi after Won in Dharwad Lok Sabha Election 2024

ದೆಹಲಿಗೆ ತೆರಳುವ ಮೊದಲು ಅವರು ಹುಬ್ಬಳ್ಳಿಗೆ ಆಗಮಿಸಿ ಹುಬ್ಬಳ್ಳಿಯ ಬೈರಿದೇವರಕೊಪ್ಪದ ಶ್ರೀ ಶಿವಾನಂದ ಮಠ, ಉಣಕಲ್ ನ ಶ್ರೀ ಸಿದ್ದೇಶ್ವರ ಮಠ ಸಿದ್ದಾರೂಢಮಠ, ಮೂರು ಸಾವಿರ ಮಠ ಸೇರಿದಂತೆ ವಿವಿಧ ಮಠ, ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿ ದೇವರ ದರ್ಶನ ಪಡೆದರು.

ನಂತರ ಗೋಕುಲ ರಸ್ತೆ ಮಾರ್ಗವಾಗಿ ಆರ್‌ಎಸ್‌ ಎಸ್ ಕಾರ್ಯಾಲಯ ಕೇಶವ ಕುಂಜ, ಅರವಿಂದ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ನಂತರ ಕೇಶ್ವಾಪುರದ ಮಯೂರಿ ಎಸ್ಟೇಟ್ ನಲ್ಲಿರುವ ತಮ್ಮ ಮನೆಗೆ ತೆರಳಿ ನಂತರ ಮನೆಯಿಂದ ಹೊರಟು, ವಿಮಾನ ನಿಲ್ದಾಣ ಮೂಲಕ ದೇಹಲಿಗೆ ಹೋದರು ತಿಳದು ಬಂದಿದೆ.

ಸದ್ಯ ಧಾರವಾಡದಲ್ಲಿ ಪ್ರಹ್ಲಾದ್ ಜೋಶಿಯವರು ಎದುರಾಳಿ ಪಕ್ಷದ ಅಭ್ಯರ್ಥಿ ವಿನೋದ್ ಅಸೋಟಿ ಗೆಲ್ಲಿಸಲು ಪಣ ತೊಟ್ಟಿದ್ದ ಸಚಿವ ಸಂತೋಷ್ ಲಾಡ್ ಅವರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತಗಳನ್ನು ಪಡೆದಿರುವುದು ಮತ್ತೊಂದು ವಿಶೇಷ ಎನ್ನಬಹುದು. ಇದರಿಂದ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+