Waqf Row: ಜಮೀರ್ ಒಬ್ಬ ಮತಾಂಧ: ಜನರ ಕನ್ಫ್ಯೂಸ್ ಮಾಡೋ ಡಿಎನ್‌ಎ ಕಾಂಗ್ರೆಸ್‌ನಲ್ಲಿದೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ನವೆಂಬರ್ 09: ವಕ್ಫ್ ಬೋರ್ಡ್ ಮೂಲಕ ರಾಜ್ಯದ ರೈತರು, ಬಡವರು, ಮಠಗಳ ಆಸ್ತಿಯನ್ನು ಅಕ್ರಮವಾಗಿ ತಮ್ಮದಾಸಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಕೇಳಿ ಬಂದಿದೆ. ಆದರೆ ಕಾಂಗ್ರೆಸ್‌ನವರು ಬಿಜೆಪಿಯವರು ವಕ್ಫ ಆಸ್ತಿ ಸಂರಕ್ಷಣೆ ಮಾಡತ್ತಿದ್ದಾರೆ ಎಂದು ಹೇಳಿದ್ದಾರೆ. ಇವೆಲ್ಲ ಬುದ್ಧಿಹೀನ ಮಾತುಗಳು ಎಂದು ಕೇಂದ್ರ ಸಚಿ ವ ಪ್ರಹ್ಲಾದ್ ಜೋಶಿಯವರು ತಿಳಿಸಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಬುದ್ಧಿ ಇದ್ದು ಮಾಡ್ತೀದಾರೋ, ಬುದ್ಧಿ ಇಲ್ಲದೆ ಮಾತಾಡುತ್ತಿದ್ದಾರೆಯೋ ಗೊತ್ತಿಲ್ಲ.. ಅವರು ದುರುಳ ಬುದ್ಧಿಯಿಂದ ವಕ್ಫ್ ವಿಚಾರದಲ್ಲಿ ಹೀಗೆಲ್ಲ ಮಾಡುತ್ತಿದ್ದಾರೆ ಮತ್ತು ಮಾತನಾಡುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ಕಾಂಗ್ರೆಸ್ ನವರು ಬಿಜೆಪಿ ವಕ್ಫ ಆಸ್ತಿ ಸಂರಕ್ಷಣೆ ಮಾಡುತ್ತಿದ್ದಾರೆ ಎಂದೊಮ್ಮೆ ಹೇಳುತ್ತಾರೆ. ಅನ್ವರ ಮಾನಪಾಡಿ ವರದಿ ಪ್ರಕಾರ ಕಾಂಗ್ರೆಸ್ ನವರೇ ವಕ್ಫ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜನರನ್ನು ಕನ್ಫ್ಯೂಸ್ ಮಾಡುವ ಡಿಎನ್‌ನ ಕಾಂಗ್ರೆಸ್‌ನವರಲ್ಲಿದೆ ಎಂದು ಟೀಕಿಸಿದರು.
'ವಕ್ಫ' ನಮೂದು ಆಗಿರುವುದು ನಿಜವೇ?
ದ್ವಿಮುಖ ನೀತಿಯಿಂದಲೇ ಕಾಂಗ್ರೆಸ್ ಸರ್ವನಾಶ ಆಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾತಾಡುತ್ತಲೇ ಅಂಬೇಡ್ಕರ ಅವರಿಗೆ ಘೋರ ಅಪಮಾನ ಮಾಡಿದ್ದಾರೆ. ಜಮೀನಿನ ಪಹಣಿಯಲ್ಲಿ ವಕ್ಫ ಎಂದು ಬಂದ ಬಳಿಕ ಆತ್ಮಹತ್ಯೆ ಮಾಡಿಕೊಂಡ ರೈತ ಸಾಲ ಮಾಡಿ ಸತ್ತಿರಬಹುದು ಎನ್ನುತ್ತಾರೆ. ಹಾಗಾದರೆ ವಕ್ಫ ಎಂದು ನಮೂದು ಆಗಿರುವುದು ನಿಜವೇ?
ಸಚಿವ ಜಮೀರ್ ಅಹ್ಮದ್ ಖಾನ್ ಒಬ್ಬ ಮತಾಂಧ ಮಂತ್ರಿ. ವಕ್ಫ್ ಬಗ್ಗೆ ಮಾತನಾಡಿದ್ದಕ್ಕೆ ಸಂಸದ ತೇಜಸ್ವೀ ಸೂರ್ಯ ಮೇಲೆ FIR ದಾಖಲು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನು ಈ ಬಗ್ಗೆ ಪ್ರಶ್ನಿಸುತ್ತೇನೆ. ಮಾತನಾಡುತ್ತೇನೆ. ನನ್ನ ಮೇಲೆಯೂ ಕೇಸ್ ಹಾಕಿ ಎಂದು ಅವರು ಸವಾಲೆಸೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ವಕ್ಫ ಗೆಜೆಟ್ ರದ್ದು ಮಾಡಿದ್ದಾರೆ. ನೀವು ನೋಟಿಸ್ ವಾಪಸ್ ಪಡೆಯಲು ಆದೇಶ ಮಾಡುವಂತೆ ಸೂಚಿಸಿದ್ದಾರೆ. ಇದುವರೆಗೆ ನೋಟಿಸ್ ವಾಪಸ್ ಪಡೆಯಲು ಅಧಿಕೃತ ಆದೇಶ ಆಗಿಲ್ಲ ಎಂದು ಅವರು ಕಿಡಿ ಕಾರಿದರು.
ಕಾಂಗ್ರೆಸ್ ಎಷ್ಟೇ ಟೋಕನ್ ಕೊಟ್ರೂ ಗೆಲ್ಲೋದು NDA
ಕರ್ನಾಟಕ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ "ಟೋಕನ್" ಮೊರೆ ಹೋಗಿದೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ. ಶತಾಯ ಗತಾಯ ಉಪ ಚುನಾವಣೆ ಗೆಲ್ಲಬೇಕೆಂಬ ಭರದಲ್ಲಿ ಕಾಂಗ್ರೆಸ್ ಪಕ್ಷ ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ ಎಂದು ಕುಟುಕಿದರು.
ಟೋಕನ್ ಹಂಚಿದ ಕಾಂಗ್ರೆಸ್ ಅದನ್ನು ತೋರಿಸಿದವರಿಗೆ ಹಣ ಕೊಟ್ಟು ಕಳಿಸುವ ವ್ಯವಸ್ಥೆ ಮಾಡಿದೆ ಎಂಬುದು ಮಾದ್ಯಮಗಳಲ್ಲಿ ವರದಿಯಾಗಿದೆ. ಕಾಂಗ್ರೆಸ್ ಲೂಟಿ ಮಾಡಿದ್ದನ್ನು ಹೀಗೆ ಹಂಚುತ್ತಿದೆ. ಕಾಂಗ್ರೆಸ್ ಅದೆಷ್ಟೇ ಟೋಕನ್ ಕೊಟ್ರೂ ಗೆಲ್ಲೋದು ಬಿಜೆಪಿ ನೇತೃತ್ವದ ಎನ್‌ಡಿಎ. ರಾಜ್ಯದಲ್ಲಿ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅದೆಷ್ಟೇ ಟೋಕನ್, ಹಣ ಹಂಚಿದರೂ ಗೆಲುವು ಬಿಜೆಪಿಗೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications