Waqf Bill: ಇದೇ ಕಾರಣಕ್ಕೆ ಕೇಂದ್ರ ವಕ್ಪ್ ಕಾನೂನು ಜಾರಿ ತಂದಿದೆ: ಸಚಿವ
ಹುಬ್ಬಳ್ಳಿ, ಏಪ್ರಿಲ್ 07: ಕರ್ನಾಟಕ ವಿವಿಧ ಜಿಲ್ಲೆಗಳು ಸೇರಿದಂತೆ ದೇಶದ ಅನೇಕ ಕಡೆಗಳಲ್ಲಿ 'ವಕ್ಫ್ ಮಂಡಳಿ'ಯಿಂದ ಹಿಂದೂ ದೇವಾಲಯಗಳು, ಸರ್ಕಾರಿ ಜಮೀನು, ರೈತರ ಭೂಮಿ ಕಬ್ಜಾ ಮಾಡಿಕೊಂಡಿದೆ. ಪಹಣಿಯಲ್ಲಿ ವಕ್ಫ್ ಎಂದು ನಮೂದಿಸಿದ್ದ ಭಾರೀ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೆ ಕೇಂದ್ರ ಸರ್ಕಾರ ಶನಿವಾರ ವಕ್ಫ್ ಮಂಡಳಿ ಪರಮಾಧಿಕಾರ ವಿರುದ್ಧ 'ವಕ್ಫ್ ತಿದ್ದುಪಡಿ ವಿಧೇಯಕ' ಜಾರಿ ಮಾಡಿದೆ. ಈ ಬಗ್ಗೆ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಪ್ರತಿಕ್ರಿಯಿಸಿದ್ದು, ಈ ಹೊಸ ಕಾನೂನು ಇದೇ ಕಾರಣಕ್ಕೆ ತಂದಿದ್ದಾರೆ ಎಂದು ಕೆಲವು ವಿಷಯ ಪ್ರಸ್ತಾಪಿಸಿದ್ದಾರೆ.
ಹುಬ್ಬಳ್ಳಿ ಸುದ್ದಿಗಾರರ ಜೊತೆಗೆ ಸೋಮವಾರ ಮಾತನಾಡಿದ ಅವರು, ಚೀನಾದವರು ಭಾರತದ ದೇಶದ ಗಡಿಯೊಳಗೆ ಬಂದ್ದಿದ್ದಾರೆ. ಇದನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರ ವಕ್ಫ್ ವಿಚಾರ ಮುಂದಿಟ್ಟುಕೊಂಡಿದೆ. ಚೀನಾ ಭಾರತದ 175 ಕಿಮೀ ವರೆಗೂ ಗಡಿಯೊಳಗೆ ಬಂದಿದೆ. 600 ಕ್ಕೂ ಹೆಚ್ಚು ಹಳ್ಳಿಗಳನ್ನು ಹತೋಟಿಗೆ ಪಡೆದಿದೆ. ಅವರು ಎರಡು ಪೋಸ್ಟ್ ಕ್ರಿಯೆಟ್ ಮಾಡಿದ್ದಾರೆ. ಈ ವಿಷಯ ಬಹಿರಂಗವಾಗದಂತೆ ತಡೆಯಲು ಕೇಂದ್ರ ಸರ್ಕಾರ ವಕ್ಫ್ ವಿಚಾರ ಮುನ್ನೆಲೆಗೆ ತಂದಿದೆ ಎಂದು ಧಾರವಾಡ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಗಂಭೀರ ಆರೋಪ ಮಾಡಿದರು.

ದೇಶದ ಬಡತನ, ನಿರುದ್ಯೋಗ ವಿಷಯದಲ್ಲಿ ಚರ್ಚೆ ಆಗಬಾರದು ಎಂಬ ಉದ್ದೇಶ ಕೇಂದ್ರ ಹೊಂದಿದಂತಿದೆ. ಇದೆಲ್ಲ ಕಾರಣಗಳಿಂದ ಕೇಂದ್ರ ಸರ್ಕಾರ ನಾಟವಾಡುತ್ತಿದೆ. ಅಲ್ಪಸಂಖ್ಯಾತರಿಗೆ ಅವರದ್ದೆಯಾದ ಒಂದು ವ್ಯವಸ್ಥೆ ಇದೆ. ಅವರಿಗೆ ಆದೆ ಕಾಯಿದೆ ಕಾನೂನು ಇವೆ. ಇದು ಸಂವಿಧಾನದ ಆರ್ಟಿಕಲ್ 26 ರಲ್ಲಿದೆ. ಅದನ್ನು ಕೇಂದ್ರ ಉಲ್ಲಂಘನೆ ಮಾಡಿದೆ.
ಈ ಸಂಬಂಧ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ. ಇದೆಲ್ಲ ಗೊತ್ತಿದ್ದರೂ ಕೇಂದ್ರ ನಾಯಕರು ವಕ್ಫ್ ಬಿಲ್ ಪಾಸ್ ಮಾಡಿದ್ದಾರೆ. ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಏನು ಅಭಿವೃದ್ಧಿ ಆಗುತ್ತಿಲ್ಲ. 30 ವರ್ಷಗಳ ಆಡಳಿತದ್ದಲ್ಲಿರೂ ಅಲ್ಲಿನ ವ್ಯವಸ್ಥೆ ಹದಗೆಟ್ಟಿದೆ ಆದರೆ ಬಿಜೆಪಿ ವೈಫಲ್ಯ ಹೇಳಲು ಆಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿ ನೆರೆಟ್ ಮಾಡಿ ಕೊಟ್ಟಿದ್ದನ್ನೇ ಮಾಧ್ಯಮಗಳು ಹೇಳುತ್ತವೆ. ಪ್ರಧಾನಿ ಕಚೇರಿಯಿಂದಲೇ ಮಾಧ್ಯಮಗಳಲ್ಲಿ ಅಜೆಂಡ್ ತಯಾರಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಇನ್ನೂ ಕರ್ನಾಟಕದಲ್ಲಿ ಬೆಲೆ ಏರಿಕೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ರಾಜ್ಯ ಬಿಜೆಪಿ ನಾಯಕರು ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದಾರೆ. ಬಿಜೆಪಿ ನಾಯಕರು ಮಾಡುತ್ತಿರುವುದು ಪ್ರಧಾನಿ ಮೋದಿ ವಿರುದ್ಧವೇ ಹೊರತು ಕರ್ನಾಟಕ ಕಾಂಗ್ರೆಸ್ ವಿರುದ್ಧ ಅಲ್ಲ. ದೇಶದಲ್ಲಿ ಬೆಲೆ ಏರಿಕೆಗೆ ಪ್ರಧಾನಿ ಮೋದಿಯವರೇ ಕಾರಣ. ಅವರ ಹೆಸರು ಹೇಳಲಾರದೇ ಕಾಂಗ್ರೆಸ್ ಹೆಸರು ಹೇಳಿಕೊಂಡು ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು.
ವಿಮಾನ ದುರಂತ ಮುಚ್ಚಿ ಹಾಕಲು ಯತ್ನ
ಬಿಜೆಪಿ ಅವಧಿಯಲ್ಲೂ ಬೆಲೆ ಏರಿಕೆ ಆಗಿದೆ. ಶೇಕಡಾವಾರು ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಮಾಧ್ಯಮದಲ್ಲಿನ ಪ್ರಚಾರಕ್ಕಾಗಿ ಈ ಹೋರಾಟ ಮಾಡುತ್ತಿದ್ದಾರೆ. ಗುಜರಾತ್ ಜಾಮ್ ನಗರದಲ್ಲಿ ವಿಮಾನ ಕ್ರಾಶ್ ಆಗಿದೆ. ಸಿದ್ಧಾರ್ಥ ಎಂಬ ಯುವಕ ವಿಮಾನ ಹಾರಿಸುವಾಗ ಅವಘಡ ಆಗಿದ್ದು, ಅದು 70 ವರ್ಷ ಹಿಂದಿನ ವಿಮಾನ ಹಾಗಾಗಿ ದುರಂತ ಸಂಭವಿಸಿದೆ. ಆದರೆ ಈ ಬಗ್ಗೆ ಎಲ್ಲಿಯೂ ಚರ್ಚೆ ಆಗುತ್ತಿಲ್ಲ. ಇದೆಲ್ಲವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದರು.
ವಕ್ಫ್ ಬಿಲ್ ಚರ್ಚೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರು ಗೈರಾಗಿದ್ದರು ಎಂಬ ಪ್ರಶ್ನೆಗೆ ಅವರು, ಕಾಂಗ್ರೆಸ್ ಇಬ್ಬರು ನಾಯಕರ ಗೈರಿನ ಬಗ್ಗೆ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆಂದು ಅವರಿಗೆ ಸಂತೋಷ ಲಾಡ್ ತೀರುಗೇಟು ಕೊಟ್ಟರು. ಜೋಶಿಯವರು ಎಷ್ಟು ದಿನ ಸದನಕ್ಕೆ ಹಾಜರಾಗಿದ್ದಾರೆ?. ಲೋಕಸಭೆಯ ಯಾವ ಯಾವ ಚರ್ಚೆಯಲ್ಲಿ ಭಾಗಿಯಾಗಿದ್ದಾರೇ? ಎಂದು ಪ್ರಶ್ನಿಸಿದರು.
ವಕ್ಫ್ ಬಿಲ್ ಉದ್ದೇಶ ಏನು ಗೊತ್ತಾ?
ಯಾರಾದರೂ ತಮ್ಮ ಆಸ್ತಿಯನ್ನು ಅವರು ವಕ್ಫ್ ಗೆ ಕೊಡಬಹುದು. ತಮ್ಮ ಆಸ್ತಿ ಮಂದಿರ, ಮಸೀದಿಗೆ ಕೊಡಬಹುದು. ಇದಕ್ಕೆ ಭಾರತದಲ್ಲಿ ಅಧಿಕಾರ ಇದೆ. ಆದರೆ ಅದನ್ನು ಕೊಡಬಾರದು ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಯ 10 ವರ್ಷದ ಅವಧಿಯಲ್ಲಿಯೇ ಹಿಂದೂ ತೊಂದರೆಯಲ್ಲಿದ್ದಾರೆ. ನಾವು ತಲೆ ತಲಾಂತರದಿಂದ ಹಿಂದೂಗಳು. ಯಾವಾಗಲೂ ಆತಂಕದಲ್ಲಿ ಇಲ್ಲ. ಬಿಜೆಪಿ ಅವಧಿಯಲ್ಲೇ ಹಿಂದೂಗಳು ತೊಂದರೆಯಲ್ಲಿದ್ದು, ಈ ನಾಯಕರು ರಾಜೀನಾಮೆ ಕೊಟ್ಟು ಹೋಗಲಿ. ದೇಶದಲ್ಲಿ ಹಿಂದೂ ಮುಸ್ಲಿಂ ಬಿಟ್ಟರೆ ಬೇರೆ ಏನು ಇಲ್ಲವಾ. ಧರ್ಮದ ಹೆಸರಿನಲ್ಲಿ ಬಿಜೆಪಿಯವರು ದೇಶವನ್ನು ಅಧೋಗತಿಗೆ ಒಯ್ಯಬಾರದ ಎಂದು ಆಗ್ರಹಿಸಿದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿಲ್ಲ. ಅಲ್ಲಿ ಯಾಕೆ ಹೀಗಿದೆ. ಇವರು ತಮ್ಮ ಐಡಿಯಾಲಾಜಿಯನ್ನು ಸಂವಿಧಾನ ಮೀರಿ ಜನರ ಮೇಲೆ ಹಾಕುತ್ತಿದ್ದಾರೆ ಎಂದು ಸಚಿವರು ದೂರಿದರು.












Click it and Unblock the Notifications