ವಿದ್ವತ್ ಮೇಲಿನ ಹಲ್ಲೆ ಹಿಂದೆ ಬಹುಕೋಟಿ ಹಗರಣದ ನಂಟು: ಎಚ್ ಡಿಕೆ

Recommended Video

      ಎಚ್ ಡಿ ಕುಮಾರಸ್ವಾಮಿ ಆರೋಪ : ವಿದ್ವತ್ ಮೇಲಿನ ಹಲ್ಲೆಗೂ ಬಹುಕೋಟಿ ಹಗರಣಕ್ಕೂ ನಂಟಿದೆ | Oneindia Kannada

      ಹುಬ್ಬಳ್ಳಿ, ಫೆಬ್ರವರಿ 21 : ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹೊತ್ತಿರುವ ಹಲ್ಲೆ ಆರೋಪ ಮೇಲ್ನೋಟಕ್ಕೆ ಕಂಡಷ್ಟು ಸ್ಪಷ್ಟವಿಲ್ಲ. ಅದಕ್ಕೆ ಹಲವಾರು ಕೊವೆಗಳಿವೆ. ಬಿಟ್ ಕಾಯಿನ್, ಹವಾಲಾ ದಂಧೆ ಹೀಗೆ ನಾನಾ ಆಯಾಮಗಳಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಆರೋಪಿಸಿದ್ದಾರೆ.

      ವಿದ್ವತ್ ಹಲ್ಲೆ ಹಿಂದೆ ಬಹುಕೋಟಿ ಹಗರಣದ ನಂಟಿದೆ. ಆದ್ದರಿಂದ ಈ ಹಲ್ಲೆ ಪ್ರಕರಣದ ತನಿಖೆ ಸಮಗ್ರವಾಗಿ ಆಗಬೇಕು. ಆದರೆ ಮುಖ್ಯ ವಿಚಾರವನ್ನೇ ಬದಿಗೆ ಸರಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ನಾಯಕರ ಗೂಂಡಾಗಿರಿ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕೂಡ ಅವರು ಹೇಳಿದರು.

      Vidwat assault related to a multi-crore scam, says HD Kumaraswamy

      ಇನ್ನು ವಿದ್ವತ್ ಬಿಜೆಪಿ ಕಾರ್ಯಕರ್ತ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತಿಗೆ ಪ್ರತಿಕ್ರಿಯಿಸಿದ ಎಚ್ ಡಿಕೆ, ಕರ್ನಾಟಕದಲ್ಲಿ ಮಾತನಾಡುವುದಕ್ಕೆ ಬಿಜೆಪಿ ಅವರಿಗೆ ವಿಷಯಗಳೇ ಇಲ್ಲ. ಆದ್ದರಿಂದ ಯಾರ ಮೇಲೆಲ್ಲ ಹಲ್ಲೆ ಆಗುತ್ತದೋ ಅವರೆಲ್ಲ ಬಿಜೆಪಿ ಕಾರ್ಯಕರ್ತರು ಎನ್ನುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

      Vidwat assault related to a multi-crore scam, says HD Kumaraswamy

      ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಹೇಳಿಕೊಳ್ಳಲು ಯಾವುದೇ ಸಾಧನೆ ಮಾಡಿಲ್ಲ. ಆದ್ದರಿಂದ ರಾಜ್ಯದ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+