ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಸಾನದತ್ತ ಸಾಗುತ್ತಿದೆ 110 ವರ್ಷಗಳ ಇತಿಹಾಸವುಳ್ಳ ಉಣಕಲ್ ಕೆರೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 28 : ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಇರುವ ಉಣಕಲ್ ಪ್ರದೇಶದಲ್ಲಿ 262 ಎಕರೆಗಳಲ್ಲಿ ಹರಡಿರುವ ಉಣಕಲ್ ಕೆರೆ ಅಥವಾ ಚನ್ನಬಸವ ಸಾಗರ ಅತ್ಯುತ್ತಮ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಪ್ರತಿದಿನ ನೂರಾರು ಜನರನ್ನು ಆಕರ್ಷಿಸುತ್ತದೆ. ಆದರೆ ಸರಿಯಾದ ಮೂಲಸೌಕರ್ಯಗಳ ಕೊರತೆಯಿಂದ ಅವಸಾನದತ್ತ ಸಾಗುತ್ತಿದೆ.

ಪ್ರವಾಸಿಗರು , ಶಾಂತಿಯುತ ಮತ್ತು ಸುಂದರ ಪರಿಸರವನ್ನು ಆಸ್ವಾಧಿಸುವುದಕ್ಕಾಗಿ 110 ವರ್ಷಗಳಷ್ಟು ಹಳೆಯದಾದ ಜನಪ್ರಿಯ ಉಣಕಲ್ ಕೆರೆಗೊಮ್ಮೆ ಭೇಟಿ ಕೊಡಬೇಕು. ಈ ಕೆರೆ ಹುಬ್ಬಳ್ಳಿಯ ಅತ್ಯಂತ ಆಕರ್ಷಣೆಗಳಲ್ಲಿ ಒಂದಾಗಿದೆ. ಮನರಂಜನಾ ಚಟುವಟಿಕೆಗಳಿಲ್ಲದೇ, ಪ್ರವಾಸಿಗರು ಸಂಜೆ ಸಮಯದಲ್ಲಿ ಸುಂದರ ಸೂರ್ಯಸ್ತವನ್ನು ವೀಕ್ಷಿಸಲು ಅವಕಾಶವಿದೆ. ಸರೋವರದ ಮಧ್ಯದಲ್ಲಿ ಇರಿಸಲಾಗಿರುವ ಸ್ವಾಮಿ ವಿವೇಕಾನಂದರ ವಿಗ್ರಹ ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ.

ಮೈಸೂರು ದಸರಾ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮೈಸೂರು ದಸರಾ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ "ದಸರಾ ದರ್ಶನ"

ಆದರೆ, ಹಲವು ದಿನಗಳಿಂದ ಕೆರೆ ಅಭಿವೃದ್ಧಿ ಕಾಣದೆ ಅವಸಾನದ ಅಂಚನ್ನು ತಲುಪಲು ಸಮೀಸುತ್ತಿದೆ. ಹಿಂದೆ, ಹುಬ್ಬಳ್ಳಿ ನಗರಕ್ಕೆ ಈ ಜಲಮೂಲದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು, ಮಲಪ್ರಭಾ ನದಿ ನೀರಿನ ಯೋಜನೆ ಪ್ರಾರಂಭವಾದ ನಂತರ, ಉಣಕಲ್ ಸರೋವರವನ್ನು ಪಿಕ್ನಿಕ್ ತಾಣವಾಗಿ ಅಭಿವೃದ್ಧಿ ಮಾಡಲಾಯಿತು. ಆದರೆ, ಸ್ಥಳೀಯ ಜನ ಪ್ರತಿನಿಧಿಗಳ ಹಾಗೂ ಅಧಿಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಈಗ ಕೆರೆ ಸಂಪೂರ್ಣ ಹಾಳಾಗಿದೆ.

 ಕೆರೆ ಅಭಿವೃದ್ದಿ ಹಣ ದುರ್ಬಳಕೆ ಆರೋಪ

ಕೆರೆ ಅಭಿವೃದ್ದಿ ಹಣ ದುರ್ಬಳಕೆ ಆರೋಪ

ಜನ ಪ್ರತಿನಿಧಿಗಳು,ಅಧಿಕಾರಿಗಳು ಉಣಕಲ್ ಕೆರೆ ಅಭಿವೃದ್ಧಿ ಕೆಲಸಕ್ಕಾಗಿ ಬಿಡುಗಡೆ ಮಾಡಿರುವ ಕೋಟ್ಯಂತರ ರೂ. ಹಣವನ್ನು ಗುಳುಂ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಧಾರವಾಡ ಸೌಂದರ್ಯ ಹೆಚ್ಚಿಸಲು ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೆರೆ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳಲಾಗಿತ್ತು. ಆದರೆ, ಇದುವರೆಗೆ ಯಾವುದೇ ಅಭಿವೃದ್ಧಿಯನ್ನು ಹೊಂದಿಲ್ಲ.

ದೇಶದ ಮೂರು ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಕೇಂದ್ರದ ಅನುಮೋದನೆದೇಶದ ಮೂರು ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಕೇಂದ್ರದ ಅನುಮೋದನೆ

 ಕೆರೆ ಅಂದವನ್ನು ಕಸಿಕೊಳ್ಳುತ್ತಿರುವ ಕಸದ ರಾಶಿ

ಕೆರೆ ಅಂದವನ್ನು ಕಸಿಕೊಳ್ಳುತ್ತಿರುವ ಕಸದ ರಾಶಿ

ಕೆರೆಯಲ್ಲಿ ಸಂಪೂರ್ಣವಾಗಿ ಜಲ ಕಳೆ ಬೆಳೆದಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಲ್ಲಿ ಅನುಕೂಲ ಆಗುವಂತ ಕಿಂಚಿತ್ತೂ ಅಭಿವೃದ್ಧಿ ಕೂಡ ಆಗಿಲ್ಲ. ಎಲ್ಲೆಂದರಲ್ಲಿ ಬಿದ್ದಿರುವ ಫ್ಲೋಟಿಂಗ್ ಪ್ಲಾಂಟ್ ಉಪಕರಣ, ಬೇಕಾಬಿಟ್ಟಿಯಾಗಿ ಬಿದ್ದಿರುವ ಕಾರಂಜಿ ಮಷಿನ್, ನಿರ್ವಹಣೆ ಆಗದೇ ಉಳಿದಿರುವ ಕಸಗಳು ಕೆರೆಯ ಕಡೆಗಣನೆಯನ್ನು ಎತ್ತಿ ತೋರಿಸುತ್ತವೆ.

 ಚನ್ನಬಸವಣ್ಣ ಭೇಟಿ ನೀಡಿದ್ದ ಸ್ಥಳ

ಚನ್ನಬಸವಣ್ಣ ಭೇಟಿ ನೀಡಿದ್ದ ಸ್ಥಳ

ಕೆರೆ ದಂಡೆಯ ಮೇಲಿರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ . ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ಜಾತ್ರೆ, ರಥೋತ್ಸವ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆಯುತ್ತವೆ. 12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ನಂತರ ಬಸವಣ್ಣನ ಸೋದರಳಿಯ ಚನ್ನಬಸವಣ್ಣ ನೇತೃತ್ವದ ಶರಣರ ತಂಡ ಸಹ್ಯಾದ್ರಿಯ ಅರಣ್ಯ ಪ್ರದೇಶದ ಮಧ್ಯದ ಉಳ್ಳಾವಿಯತ್ತ ಸಾಗುತ್ತಿತ್ತು. ಈ ಪಯಣದ ನಡುವೆ ಉಣಕಲ್ ಕೆರೆ ದಂಡೆ ಮೇಲೆ ಕೆಲಕಾಲ ಉಳಿದು ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿದ್ದರು, ಈ ಹಿನ್ನೆಲೆಯಲ್ಲಿ ಉಣಕಲ್ ಕೆರೆ ದಂಡೆಯ ಮೇಲೆ ರೂಪಗೊಂಡಿರುವ ದೇವಸ್ಥಾನ ಬಸವ ಭಕ್ತರ ಪವಿತ್ರ ಯಾತ್ರಾ ಸ್ಥಳವಾಗಿಯೂ ಪ್ರಸಿದ್ಧಿ ಪಡೆದುಕೊಂಡಿದೆ.

 ಕಳೆದ ವರ್ಷ ಚನ್ನಬಸವ ಸಾಗರ ಎಂದು ಮುರು ನಾಮಕರಣ

ಕಳೆದ ವರ್ಷ ಚನ್ನಬಸವ ಸಾಗರ ಎಂದು ಮುರು ನಾಮಕರಣ

ಚನ್ನಬಸವೇಶ್ವರರು ವಿಶ್ರಾಂತಿ ಪಡೆದು ಹೋಗಿದ್ದ ಈ ಪ್ರದೇಶಕ್ಕೆ ಚನ್ನಬಸವ ಸಾಗರ ಎಂದು ನಾಮಕರಣ ಮಾಡಬೇಕೆಂದು ಭಕ್ತರ ಆಶಯವಾಗಿತ್ತು. ಪಾಲಿಕೆಯಲ್ಲಿಯೂ ಈ ಕುರಿತು ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ ಎಂಟು ವರ್ಷ ಗತಿಸಿದರೂ ಮರು ನಾಮಕರಣ ಮಾಡದ ಹಿನ್ನಲೆ ಹುಬ್ಬಳ್ಳಿಯ ಶಂಕ್ರಗೌಡ ಪಾಟೀಲ, ವಿನಯ ಪರಮಾದಿ, ಶಿವಪ್ಪ ಪಟ್ಟಣಶೆಟ್ಟಿ ಅವರು ಸೇರಿ ಒಟ್ಟ 7 ಜನರು ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ ಕೆರೆಗೆ ಚನ್ನಬಸವಸಾಗರ ಎಂದು 2021ರ ಆಗಸ್ಟ್‌ನಲ್ಲಿ ಮರು ನಾಮಕರಣ ಮಾಡಲಾಗಿತ್ತು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೆಚ್ಚಿನ ತಾಣಗಳಲ್ಲಿ ಉಣಕಲ್ ಕರೆಯು ಒಂದಾಗಿದ್ದು, ಕೆರೆ ಮಾಲಿನ್ಯದಿಂದ ಹಾಳಾಗುವುದನ್ನು ತಪ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

English summary
Unakal Lake or Channabasava Sagara is one of the best picnic spots spread across 262 acres in the Unakal area, situated between the twin cities of Hubli-Dharwad. But nowadays lack of development work lost its charm day by day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X