ಹುಬ್ಬಳ್ಳಿಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್, ಹೇಳೋರಿಲ್ಲ ಕೇಳೋರಿಲ್ಲ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಅಕ್ಟೋಬರ್, 14 : ನಗರದ ಹಲವಾರು ರಸ್ತೆಗಳಲ್ಲಿ ಸಮರ್ಪಕ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲವಾಗಿದ್ದರಿಂದ ಬೈಕ್ ಸವಾರರು ತಮ್ಮ ವಾಹನಗಳನ್ನು ಪಾದಚಾರಿ ಮಾರ್ಗದಲ್ಲಿಯೇ ಪಾರ್ಕಿಂಗ್ ಮಾಡುತ್ತಿರುವುದರಿಂದ ಜನರು ಅಡ್ಡಾಡಲು ಕಷ್ಟಪಡುವಂತಾಗಿದೆ.

ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಎಂದೇ ಖ್ಯಾತಿ ಹೊಂದಿರುವ ಹುಬ್ಬಳ್ಳಿ ಮಹಾನಗರಕ್ಕೆ ಸಹಜವಾಗಿ ವಹಿವಾಟು ಇನ್ನಿತರ ಕೆಲಸ ಕಾರ್ಯಗಳಿಗೆ ಪರಸ್ಥಳದ ಜನರೂ ಬರುತ್ತಾರೆ. ಆದರೆ ಇಲ್ಲಿ ವಾಹನಗಳನ್ನು ಫುಟ್‌ಪಾತ್ ಮೇಲೆಯೇ ನಿಲ್ಲಿಸುವುದರಿಂದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವಂತಾಗಿದೆ.

Two wheeler parking on footpath in Hubballi

ವೇಗವಾಗಿ ಚಲಿಸುವ ವಾಹನಗಳಿಗೆ ಸಿಕ್ಕಿ ಎಲ್ಲಿ ಅಪಘಾತಕ್ಕೊಳಗಾಗುತ್ತೇವೆಯೋ ಎಂದು ಮಹಿಳೆಯರು, ವೃದ್ಧರು, ಶಾಲಾ ಮಕ್ಕಳು ದಿನನಿತ್ಯ ಗೋಳು ಅನುಭವಿಸುತ್ತ ಓಡಾಡುತ್ತಿದ್ದಾರೆ.

ನಗರದ ಕೆಲವೆಡೆ ಪಾರ್ಕಿಂಗ್ ವ್ಯವಸ್ಥೆಯನ್ನು ಒಂದು ದಿನ ರಸ್ತೆಯ ಎಡಬದಿ, ಮತ್ತೊಂದು ದಿನ ಬಲಬದಿಗೆ ವಾಹನ ನಿಲ್ಲಿಸಲು ಟ್ರಾಫಿಕ್ ಪೊಲೀಸರು ನಾಮಫಲಕಗಳನ್ನು ಹಾಕಿದ್ದಾರೆ. ಆದರೆ ಕೆಲವರು ಇದ್ಯಾವುದನ್ನೂ ಲೆಕ್ಕಿಸದೇ ಬೇಕಾಬಿಟ್ಟಿಯಾಗಿ ವಾಹನಗಳನ್ನು ಎಲ್ಲಿ ಬೇಕೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತಿದೆ.

Two wheeler parking on footpath in Hubballi

ನಗರದ ಹಲವಾರು ರಸ್ತೆಗಳಲ್ಲಿ ವಿದ್ಯುತ್ ತಂತಿ ಅಳವಡಿಕೆಗೆ ತಗ್ಗು ತೋಡಿರುವುದರಿಂದ ರಸ್ತೆಗಳೂ ಇಕ್ಕಟ್ಟಾಗಿವೆ. ಮೇಲಾಗಿ ಪಾದಚಾರಿಗಳಿಗೆ ಧೂಳಿನ ಝಳಕ ಬೇರೆ. ಇಂಥದರ ಜೊತೆ ಪಾರ್ಕಿಂಗ್ ಸಮಸ್ಯೆಯಿಂದಾಗಿ ಸಾರ್ವಜನಿಕರು ನಿಯಮ ಉಲ್ಲಂಘಿಸುವವರ ವಿರುದ್ಧ, ಕ್ರಮ ತೆಗೆದುಕೊಳ್ಳದ ಪೊಲೀಸರ ವಿರುದ್ಧ ಬೈದುಕೊಳ್ಳುತ್ತ ಓಡಾಡುತ್ತಿದ್ದಾರೆ.
Two wheeler parking on footpath in Hubballi

ಟ್ರಾಫಿಕ್ ಪೊಲೀಸರು ವಾರಕ್ಕೊಮ್ಮೆ ಅಥವಾ ತಮಗೆ ಅನುಕೂಲವಾದಾಗ ನಿಷೇಧಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳನ್ನು ಎತ್ತಿಕೊಂಡು ಹೋಗಿ ದಂಡ ತುಂಬಿಸಿಕೊಳ್ಳುತ್ತಾರೆ. ಉಳಿದ ದಿನ ಎಂದಿನಂತೆ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಮಹಾನಗರ ಪಾಲಿಕೆಯು ಪಾರ್ಕಿಂಗ್ ಟೆಂಡರ್ ಕರೆದಿದೆ. ಅದು ಇನ್ನೂ ಪೂರ್ತಿಗೊಂಡಿಲ್ಲ. ಹೀಗಾಗಿ ತೊಂದರೆ ಆಗುತ್ತಿದೆ ಎಂದು ಹೇಳುತ್ತಾರೆ ಟ್ರಾಫಿಕ್ ಪೇದೆಯೊಬ್ಬರು.
Two wheeler parking on footpath in Hubballi

ಇಷ್ಟಕ್ಕೆಲ್ಲಾ ರಸ್ತೆಗಳು ಚಿಕ್ಕದಾಗಿರುವುದೇ ಕಾರಣ, ಹಾಗೂ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಮತ್ತು ಪಾರ್ಕಿಂಗ್ ಸಮಸ್ಯೆ ಉಲ್ಭಣಿಸಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ದೀಪಕ ಶಿರೋಳಕರ. ಒಟ್ಟಿನಲ್ಲಿ ಪಾಲಿಕೆಯು ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೂ ಜನರಿಗೆ ಪಡಿಪಾಡಲು ತಪ್ಪಿದ್ದಲ್ಲ ಎಂಬುದು ಮಾತ್ರ ಸತ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two wheelers are least bothered about problem they are causing to pedestrians by parking on footpaths in Hubballi. Due to this menace walker are forced to walk on roads. Even city police is not taking any action against violators.
Please Wait while comments are loading...