South Western Railway: ಹುಬ್ಬಳ್ಳಿಯ ಕೆಲ ರೈಲುಗಳ ಸಂಚಾರ ರದ್ದು, ಬೆಂಗಳೂರಿನ ರೈಲುಗಳು ಸಮಯ, ಮಾರ್ಗ ಬದಲು

ಹುಬ್ಬಳ್ಳಿ, ಜುಲೈ 17: ವಿಜಯವಾಡ ವಿಭಾಗದ ನ್ಯೂ ವೆಸ್ಟ್ ಕ್ಯಾಬಿನ್-ವಿಜಯವಾಡ ನಿಲ್ದಾಣಗಳ ನಡುವೆ 3ನೇ ಲೈನ್‌ನ ಸಿವಿಲ್ ಕೆಲಸಗಳು ಇರುವ ಕಾರಣದಿಂದ ಹುಬ್ಬಳ್ಳಿ ಸಂಪರ್ಕಿಸುವ ಕೆಲವು ರೈಲುಗಳು ರದ್ದುಗೊಳಿಸಲಾಗಿದೆ.

ರದ್ದುಗೊಂಡ ರೈಲುಗಳು ಯಾವುವು, ಮಾರ್ಗ ಬದಲಾವಣೆ, ರೈಲುಗಳ ಸಂಖ್ಯೆ ಇನ್ನಿತರ ಅಪ್ಡೇಟ್ ಮಾಹಿತಿ ತಿಳಿದು ರೈಲ್ವೆ ಪ್ರಯಾಣಿಕರು ಪ್ರಯಾಣಿಸಬೇಕು ಎಂದು ನೈಋತ್ಯ ರೈಲ್ವೆ ವಲಯ (SWR) ಹುಬ್ಬಳ್ಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Train Cancellations and Route Changes in South Western Railway Zone to Civil Works

ಈ ಕುರಿತು ಟ್ವೀಟ್ ಮಾಡಿರುವ ನೈಋತ್ಯ ರೈಲ್ವೆ ವಲಯ (SWR) ಸೆಂಟ್ರಲ್ ರೈಲ್ವೆಯ ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17329) ಮುಂದಿನ ತಿಂಗಳ ಆಗಸ್ಟ್ 1 ರಿಂದ 10 ರವರೆಗೆ ರದ್ದುಗೊಂಡಿದೆ ಎಂದು ತಿಳಿಸಿದೆ.

ಮರಳಿ ವಿಜಯವಾಡ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17330) ಆಗಸ್ಟ್ 2 ರಿಂದ 11ರವರೆಗೆ ರದ್ದುಗೊಳಿಸಲಿದೆ.

ಮಾರ್ಗ ಬದಲಾವಣೆ

ಇದೇ ಜುಲೈ 2 ರಂದು ಹೌರಾದಿಂದ ಬೆಂಗಳೂರಿಗೆ ಹೊರಡುವ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22863) ಮಾರ್ಗ ಬದಲಾವಣೆ ಆಗಿದ್ದು, ಕೃಷ್ಣಾ ಕಾಲುವೆ, ಗುಂಟೂರು, ನಂದ್ಯಾಲ್, ಯರ್ರಗುಂಟ್ಲಾ ಮತ್ತು ರೇಣಿಗುಂಟಾ ನಿಲ್ದಾಣಗಳ ಮೂಲಕ ಓಡಿಸಲು ಸೂಚಿಸಲಾಗಿದೆ.

Train Cancellations and Route Changes in South Western Railway Zone to Civil Works

ಇನ್ನೂ ಜುಲೈ 21 ರಂದು ಮಾಲ್ಡಾ ಟೌನ್-SMVT ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹಾಗೂಜುಲೈ 21 ಹೌರಾದಿಂದ ಹೊರಡುವ ಹೌರಾ-ಮೈಸೂರು ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22817) ಅನ್ನು 90 ನಿಮಿಷಗಳ ಕಾಲ ಮರು ಹೊಂದಿಸಲಾಗಿದೆ.

ನಿಯಂತ್ರಣಗೊಂಡ ರೈಲುಗಳ ಮಾಹಿತಿ

* SMVT ಬೆಂಗಳೂರು-ಹತಿಯಾ ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 18638) ಜುಲೈ 16 ಮತ್ತು 30 ರಂದು ಬೆಂಗಳೂರಿನಿಂದಲೇ ಕ್ರಮವಾಗಿ ಸುಮಾರು 210 ನಿಮಿಷಗಳು ಮತ್ತು 150 ನಿಮಿಷಗಳವರೆಗೆ ತಡವಾಗಿ ಚಲಿಸಲಿದೆ.

* SMVT ಬೆಂಗಳೂರು-ನ್ಯೂ ಟಿನ್ಸುಕಿಯಾ ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22501) ಜುಲೈ 16, 23 ಮತ್ತು 30ರಂದು ಕ್ರಮವಾಗಿ ಬೆಂಗಳೂರಿನಲ್ಲೇ 120 ನಿಮಿಷಗಳ ತಡವಾಗಿ ಚಲಿಸಲಿದೆ.

ರೈಲು ನಿಲುಗಡೆ ವಿವರ

* ಆಗಸ್ಟ್ 4ರಂದು ಯಶವಂತಪುರ-ಟಾಟಾನಗರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 18112) ಅನ್ನು ವಿಜಯವಾಡ ನಿಲ್ದಾಣದಲ್ಲಿ ನಿಲ್ಲಿಸುವುದನ್ನು ಬಿಟ್ಟು ರಾಯನಪಾಡು, ಗುಣದಾಳ ನಿಲ್ದಾಣಗಳ ಮೂಲಕ ಚಲಿಸಲಿದೆ. ಈ ರೈಲು ರಾಯನಪಾಡುವಿನಲ್ಲಿ ಹೆಚ್ಚುವರಿ ತಾತ್ಕಾಲಿಕ ನಿಲುಗಡೆ ಹೊಂದಿದೆ.

ಬೆಂಗಳೂರಿನಿಂದ ಹೊರಡುವ ರೈಲುಗಳು, ಬದಲಾವಣೆ

* ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಗುವಾಹಟಿ ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12509) ಜುಲೈ 31, ಆಗಸ್ಟ್ 2, 7, 9, 14, 16, 21, 23, 28 ಮತ್ತು 30, 2024 ರಂದು SMVT ಬೆಂಗಳೂರಿ ರೈಲು ನಿಲ್ದಾಣದಿಂದ ಹೊರಡಲಿದೆ. ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್ ಮತ್ತು ನಿಡದವೋಲು ನಿಲ್ದಾಣಗಳ ಮೂಲಕ ಬದಲಾದ ಮಾರ್ಗದಲ್ಲಿ ಸಂಚರಿಸಲಿದೆ.

* ಟಾಟಾನಗರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 18111) ಆಗಸ್ಟ್ 1, 15, 22 ಮತ್ತು 29, 2024 ರಂದು ಟಾಟಾನಗರದಿಂದ ಹೊರಡಲಿದೆ. ಈ ರೈಲು ನಿಡದವೋಲು, ಭೀಮಾವರಂ ಟೌನ್, ಗುಡಿವಾಡ ಮತ್ತು ವಿಜಯವಾಡ ನಿಲ್ದಾಣಗಳ ಮೂಲಕ ಚಲಿಸಲಿದೆ. ಏಲೂರು ನಿಲ್ದಾಣದಲ್ಲಿ ನಿಲುಗಡೆ ರದ್ದುಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+