Hubballi Chennamma Circle: ಮೇಲ್ಸೇತುವೆ ಕೆಲಸ ಆರಂಭ: ಸಂಚಾರ ಮಾರ್ಗ ಬದಲಾವಣೆ, ಮಾಹಿತಿ ತಿಳಿಯಿರಿ
ಬೆಂಗಳೂರು, ಫೆಬ್ರವರಿ 08: ವಾಣಿಜ್ಯ ನಗರಿ ಹುಬ್ಬಳ್ಳಿ ಎಂದ ಕೂಡಲೇ ನೆನಪಾಗುವುದು ಇಲ್ಲಿನ ಚನ್ನಮ್ಮ ವೃತ್ತ. ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ಸಂಬಂಧ ಈ ಚನ್ನಮ್ಮ ಸರ್ಕಲ್ ನಲ್ಲಿ ಬೃಹತ್ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಈ ಸಂಬಂಧ ನಿರ್ಮಾಣ ಕೆಲಸಗಳು ಆರಂಭವಾಗಿದ್ದರಿಂದ ಈ ಭಾಗದ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ. ಪರ್ಯಾರ್ಯ ಮಾರ್ಗದ ಮಾಹಿತಿ ತಿಳಿಯಲು ಮುಂದೆ ಓದಿ.
ಚನ್ನಮ್ಮ ಸರ್ಕಲ್ ಹತ್ತಿರ ಫ್ಲೈ ಓವರ್ ಕಾಮಗಾರಿ ಆರಂಭಗೊಂಡಿದೆ. ಸುಗಮ ವಾಹನ ಸಂಚಾರದ ಹಿತದೃಷ್ಟಿಯಿಂದ ಹುಬ್ಬಳ್ಳಿ ಶಹರದಲ್ಲಿ ಸಂಚರಿಸುವ ವಾಹನಗಳಿಗೆ ಪ್ರತ್ಯೇಕವಾಗಿ ಮಾರ್ಗ ವ್ಯವಸ್ಥೆಯನ್ನು ಫೆಬ್ರವರಿ 10 ರಿಂದ ಮಾಡಲಾಗಿದೆ. ಮಾರ್ಗ ಬದಲಾವಣೆ ಪಟ್ಟಿ ಇಲ್ಲಿದೆ.

ಬದಲಾದ ಮಾರ್ಗಗಳ ಪಟ್ಟಿ
* ಹೊಸೂರು ಸರ್ಕಲ್ ದಿಂದ ಗದಗ ಕಡೆಗೆ ಸಂಚರಿಸುವ ಬಸ್, ಭಾರಿ ಗಾತ್ರದ ವಾಹನಗಳು, ಹಾಗೂ ಇತರೆ ವಾಹನಗಳು ಹೊಸೂರು ಸರ್ಕಲ್‌ದಿಂದ ಬಸವವನ, ಹಳೇ ಬಸ್ ನಿಲ್ದಾಣದಿಂದ ಹೋಟಲ್ ಮುಂದೆ ಹಾಯ್ದು, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಗದಗ ರಸ್ತೆಗೆ ಹೋಗಬೇಕು.
* ಹೊಸೂರು ಸರ್ಕಲ್ ನಿಂದ ವಿಜಯಪೂರ ರಸ್ತೆಗೆ ಸಂಚರಿಸುವ ಬಸ್ ಹಾಗೂ ಲಘು ವಾಹನಗಳು, ಹೊಸೂರು ಸರ್ಕಲ್‌ದಿಂದ, ಬೆಂಬಳಗಿ ಕ್ರಾಸ್, ಬಾಳಿಗಾ ಕ್ರಾಸ್, ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್ ಹತ್ತಿರ ಎಡಕ್ಕೆ ತಿರುಗಿ ದೇಸಾಯಿ ಓವರ್ ಬ್ರಿಡ್ಜ್ ಮುಖೇನ ವಿಜಾಪುರ ರಸ್ತೆಗೆ ಕಡೆಗೆ ಸಾಗಬೇಕು.
* ಹೊಸೂರು ಸರ್ಕಲ್‌ದಿಂದ ವಿಜಯಪುರ ರಸ್ತೆಗೆ ಸಂಚರಿಸುವ ಭಾರಿ ಗಾತ್ರದ ವಾಹನಗಳು, ಹೊಸೂರು ವೃತ್ತದಿಂದ ಹಳೇ ಬಸ್ಟ್ಯಾಂಡ ಅಯೋಧ್ಯೆ ಹೋಟಲ್ ಮುಂದೆ ಸಾಗಿ ಚನ್ನಮ್ಮ ಸರ್ಕಲ್, ಸಂಗೋಳ್ಳಿ ರಾಯಣ್ಣ ವೃತ್ತ ಮುಖೇನ, ಪಿಂಟೋ ಸರ್ಕಲ್ ಮುಖಾಂತರ ಗದಗ ರಸ್ತೆ ಮೂಲಕ ವಿಜಯಪೂರ ರಸ್ತೆಗೆ ತೆರಳಬೇಕಿದೆ.
* ಇನ್ನೂ ನವಲಗುಂದ, ವಿಜಯಪೂರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್‌ಗಳು, ಸರ್ವೋದಯ ಸರ್ಕಲ್, ಕೆ.ಎಚ್.ಪಾಟೀಲ್ ರಸ್ತೆ, ಶೃಂಗಾರ ಹೋಟೆಲ್ ಕ್ರಾಸನಲ್ಲಿ ಎಡ ತಿರುವು ಪಡೆದು ನಂತರ ಮುಂದೆ ಗದಗ ರಸ್ತೆಗೆ ಬಂದು ಕೂಡಬೇಕು.
* ಕೋರ್ಟ್ ಸರ್ಕಲ್ ಕಡೆಯಿಂದ ಚನ್ನಮ್ಮ ಸರ್ಕಲ್ ಕಡೆಗೆ ಬರುವ ವಾಹನಗಳು 'ಸಂಗೊಳ್ಳಿ ರಾಯಣ್ಣ ಸರ್ಕಲ್‌ದಲ್ಲಿ ಎಡಕ್ಕೆ ತಿರುಗಿ ಚಿಟಗುಪ್ಪಿ ಸರ್ಕಲ್‌ನಲ್ಲಿ ಯು-ಟರ್ನ್ ಮಾಡಿಕೊಂಡು ಚನ್ನಮ್ಮ ಸರ್ಕಲ್ ಹತ್ತಿರ ಬರಬೇಕಿದೆ.
* ಇನ್ನೂ ಸರ್ವೋದಯ ಸರ್ಕಲ್ ಕಡೆಯಿಂದ ಕಾರವಾರ ರಸ್ತೆಯ ಕಡೆಗೆ ಹೋಗುವ ವಾಹನಗಳು, ದೇಸಾಯಿ ಅಂಡರ್ ಬ್ರಿಡ್ಜ್ ಬಾಳಿಗಾ ಕ್ರಾಸ್, ಉತ್ತರ ಸಂಚಾರ ಪೊಲೀಸ್ ಠಾಣೆ ಮುಂದೆ ಹಾಯ್ದು, ಗ್ಲಾಸ್ ಹೌಸ್ ರಸ್ತೆ ಮೂಲಕ ಕಾರವಾರ ರಸ್ತೆಗೆ ತೆರಳಬಹುದಾಗಿದೆ.
* ನವಲಗುಂದ ಕಡೆಯಿಂದ ಮತ್ತು ಗದಗ ಕಡೆಯಿಂದ ಬರುವ ಭಾರಿ ಮತ್ತು ಸರಕು ವಾಹನಗಳು, ಹುಬ್ಬಳ್ಳಿ ನಗರವನ್ನು ಪ್ರವೇಶಿಸದೆ ರಿಂಗ್ ರಸ್ತೆ ಮುಖೇನ ಬೆಂಗಳೂರು ಹಾಗೂ ಕಾರವಾರ ಕಡೆಗೆ ಹೋಗಬೇಕು.
* ಅದೇ ರೀತಿ ನವಲಗುಂದ ಕಡೆಯಿಂದ ಮತ್ತು ಗದಗ ಕಡೆಯಿಂದ ಬಂದು ಹುಬ್ಬಳ್ಳಿ ನಗರವನ್ನು ಪ್ರವೇಶಿಸುವ ಭಾರಿ ಮತ್ತು ಸರಕು ವಾಹನಗಳು, ರಿಂಗ್ ರಸ್ತೆ ಮುಖಾಂತರ ಗಟ್ಟೂರ ಸರ್ಕಲ್‌ಗೆ ಹೋಗಿ ಅಲ್ಲಿಂದ ಹಳೇ ಪಿಬಿ ರಸ್ತೆ ಇಲ್ಲವೇ ಕಾರವಾರ ರಸ್ತೆ ಮೂಲಕ ನಗರ ಪ್ರವೇಶಿಸಬೇಕು ಎಂದು ತಿಳಿಸಲಾಗಿದೆ.
ಸವಾರರು, ಸಾರ್ವಜನಿಕರ ಹಿತದೃಷ್ಟಿಯಿಂದ ಬದಲೀ ವಾಹನ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ವಜನಿಕರು ಸಹಕರಿಸುವಂತೆ ಹುಬ್ಬಳ್ಳಿ ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ಈ ಭಾಗದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ವರೆಗೂ ಈ ರೀತಿಯ ಸಂಚಾರ ಬದಲಾವಣೆಗಳು ಸಹಜ ಎನ್ನುತ್ತಿವೆ ಮೂಲಗಳು....












Click it and Unblock the Notifications