ಹುಬ್ಬಳ್ಳಿಯಲ್ಲೂ ಅಬ್ಬರಿಸುತ್ತಿಲ್ಲ ಕರ್ನಾಟಕ ಬಂದ್!
ಹುಬ್ಬಳ್ಳಿ, ಜೂನ್ 12: ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹೆಚ್ಚಿನ ಬೆಂಬಲ ಕಂಡುಬಂದಿಲ್ಲ. ನಗರದಲ್ಲಿ ಎಂದಿನಂತೆ ಬಸ್ ಮತ್ತು ಆಟೋ ಸಂಚಾರ ಕಂಡುಬರುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರಕುವ ನಿರೀಕ್ಷೆ ಇತ್ತು.
ಆದರೂ ಅಲ್ಲಲ್ಲಿ ಬಂದ್ ಗೆ ಬೆಂಬಲ ದೊರೆಯುತ್ತಿದ್ದು, ಹೊಸೂರು ಡಿಪೋ ಬಳಿ ಸಂಗ್ರಾಮ ಸೇನಾ ಕಾರ್ಯಕರ್ತರಿಂದ ಟಾಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆನಡೆದಿದೆ. ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರ ಒತ್ತಾಯಿಸಿದ್ದು, ನಗರದ ತುಂಬೆಲ್ಲಾ ಪೊಲೀಸ್ ಬಿಗಿಭದ್ರತೆಯಿದೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯಿಂದ ಉರಳು ಸೇವೆ ಸಹ ನಡೆದಿದೆ.

ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿರುವ ದೃಶ್ಯವೂ ಕಂಡುಬರುತ್ತಿದೆ. ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆಯೂ ನಡೆಯುತ್ತಿದೆ.
ಇನ್ನು ಕಲಘಟಗಿಯಲ್ಲಿ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೋ, ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. ಶಾಲಾ-ಕಾಲೇಜುಗಳಿಗೂ ರಜಾ ಘೋಷಣೆಯಿಲ್ಲ.












Click it and Unblock the Notifications