Special Trains list Here: ರಾಜ್ಯದಲ್ಲಿ ಬೇಸಿಗೆ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ
ಹುಬ್ಬಳ್ಳಿ, ಏಪ್ರಿಲ್ 27: ಭಾರತೀಯ ರೈಲ್ವೆಯ ವ್ಯಾಪ್ತಿಯಲ್ಲಿ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೈಋತ್ಯ ರೈಲ್ವೆ ವಲಯವು (South Western Railway) ಬೇಸಿಗೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ. ಈ ವಿಶೇಷ ರೈಲು ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ, ಸಮಯ, ವೇಳಾಪಟ್ಟಿ ಮಾಹಿತಿ ಇಲ್ಲಿ ತಿಳಿಯಿರಿ.
ಶ್ರೀ ಸಿದ್ಧಾರೂಢ ಸ್ವಾಮೀ ಹುಬ್ಬಳ್ಳಿ ಜಂಕ್ಷನ್‌ನಿಂದ ಈ ವಿಶೇಷ ರೈಲುಗಳು ಸಂಚರಿಸಲಿವೆ. ಮುಝಾಫರಪಸ್- ಎಸ್‌ಎಸ್‌ಎಸ್ ಹುಬ್ಬಳ್ಳಿ ಬೇಸಿಗೆ ವಿಶೇಷ ಸಾಪ್ತಾಹಿಕ ರೈಲು ಇದೇ ಏಪ್ರಿಲ್ 30 ರಿಂದ ಮೇ 28ರವರೆಗೆ ಸಂಚರಿಸಲಿದೆ. ಈ ರೈಲು ವಾರದಲ್ಲಿ ಪ್ರತಿ ಮಂಗಳವಾರ ಸಂಜೆ 5.20ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಗುರುವಾರ ಮಧ್ಯಾಹ್ನ 1.40ಕ್ಕೆ ಮುಜಾಫರಪಸ್ ನಿಲ್ದಾಣ ತಲುಪಲಿದೆ.

ಮೇ 3 ರಿಂದ 31ರವರೆಗೆ ಪ್ರತಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮುಝಾಫರಪಸ್‌ನಿಂದ ಹೊರಡುವ ಇದೇ ರೈಲು ಭಾನುವಾರ ಬೆಳಗ್ಗೆ 7 ಗಂಟೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬರಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರ ಏಪ್ರಿಲ್ 29 ರಿಂದ ಮೇ 27ರವರೆಗೆ ವಾರದಲ್ಲಿ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ ನಿಲ್ದಾಣ ಸಾಪ್ತಾಹಿಕ ರೈಲು ಸಂಚರಿಸಲಿದೆ. ಈ ರೈಲು ಪ್ರತಿ ಸೋಮವಾರ ರಾತ್ರಿ 9.45ಕ್ಕೆ ಎಸ್ ಎಸ್‌ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಹೊರಡುತ್ತಿದೆ. ಬುಧವಾರ ಸಂಜೆ 6.45ಕ್ಕೆ ಯೋಗ ನಗರಿ ರಿಷಿಕೇಶ ನಿಲ್ದಾಣ ತಲುಪಲಿದೆ.
ಮರಳಿ ಅಲ್ಲಿಂದ ಮೇ 2 ರಿಂದ 30ರವರೆಗೆ ಪ್ರತಿ ಗುರುವಾರ ಸಂಜೆ 5.55ಕ್ಕೆ ಯೋಗ ನಗರಿ ರಿಶಿಕೇಶ ನಿಲ್ದಾಣದಿಂದ ಹೊರಟು ಶನಿವಾರ ಸಂಜೆ 5.30ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಿಸಲಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.












Click it and Unblock the Notifications