ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ರೈಲು; ವೇಳಾಪಟ್ಟಿ
ಹುಬ್ಬಳ್ಳಿ, ಏಪ್ರಿಲ್ 06; ನೈಋತ್ಯ ರೈಲ್ವೆ ಹುಬ್ಬಳ್ಳಿ-ಚಿತ್ರದುರ್ಗ ನಡುವೆ ಕಾಯ್ದಿರಿಸದ ಸಾಮಾನ್ಯ ದರದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ. ಚಿಕ್ಕಜಾಜೂರು ಮೂಲಕ ಸಾಗುವ ರೈಲು ಏಪ್ರಿಲ್ 10ರಿಂದ ಸಂಚಾರವನ್ನು ಆರಂಭಿಸಲಿದೆ.
ಪತ್ರಿಕಾ ಪ್ರಕಟಣೆಯಲ್ಲಿ ನೈಋತ್ಯ ರೈಲ್ವೆ ಕಾಯ್ದಿರಿಸದ ಸಾಮಾನ್ಯ ದರದ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಚಾರದ ಬಗ್ಗೆ ಮಾಹಿತಿ ನೀಡಿದೆ. ಹುಬ್ಬಳ್ಳಿ-ಚಿತ್ರದುರ್ಗ ನಡುವೆ ಈ ರೈಲು ಸಂಚಾರ ನಡೆಸಲಿದ್ದು, ಪ್ರತಿದಿನ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರು-ಮಂಗಳೂರು ನಡುವೆ ಏ.10 ರಿಂದ 3 ರೈಲು
ರೈಲು ನಂಬರ್ 07347/07348 ರೈಲಯಗಳು ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ವಯಾ ಚಿಕ್ಕಜಾಜೂರು ನಡುವೆ ಸಂಚಾರ ನಡೆಸಲಿವೆ. ಈ ರೈಲು 12 ಬೋಗಿಗಳನ್ನು ಒಳಗೊಂಡಿದೆ.
ರೈಲು ಪ್ರಯಾಣಿಕರಿಗೆ ಒಂದು ಸೌಲಭ್ಯ ಕಡಿತಗೊಳಿಸಿದ ಇಲಾಖೆ
ರೈಲಿನ ವೇಳಾಪಟ್ಟಿ
ರೈಲು ನಂಬರ್ 07347 ಹುಬ್ಬಳ್ಳಿ-ಚಿತ್ರುದುರ್ಗ ಪ್ರತಿದಿನ ಹುಬ್ಬಳ್ಳಿಯಿಂದ 7.15ಕ್ಕೆ ಹೊರಡಲಿದ್ದು, ಚಿತ್ರದುರ್ಗಕ್ಕೆ 13.35ಕ್ಕೆ ತಲುಪಲಿದೆ. ಏಪ್ರಿಲ್ 10ರಿಂದ ಮುಂದಿನ ಆದೇಶದ ತನಕ ಈ ರೈಲು ಸಂಚಾರ ನಡೆಸಲಿದೆ.
ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ
ರೈಲು ನಂಬರ್ 07348 ಚಿತ್ರದುರ್ಗ-ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿದೆ. ಚಿತ್ರದುರ್ಗದಿಂದ 14 ಗಂಟೆಗೆ ಹೊರಡಲಿರುವ ರೈಲು ಹುಬ್ಬಳ್ಳಿ ನಿಲ್ದಾಣವನ್ನು 21:30ಕ್ಕೆ ತಲುಪಲಿದೆ. ಏಪ್ರಿಲ್ 10ರಿಂದ ಈ ರೈಲು ಸಂಚಾರ ನಡೆಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ನಿಲ್ದಾಣಗಳ ವಿವರ
ನೈರುತ್ಯ ರೈಲ್ವೆಯು 10.04.2021ರಿಂದ ರೈ. ಸಂ. 07347/07348 ಹುಬ್ಬಳ್ಳಿ- ಚಿತ್ರದುರ್ಗ- ಹುಬ್ಬಳ್ಳಿ ಆರಕ್ಷಣಾರಹಿತ ಎಕ್ಸ್ ಪ್ರೆಸ್ ವಿಶೇಷ ರೈಲನ್ನು ಓಡಿಸಲಿದೆ.@SWRRLY will run T. No. 07347/07348 #Hubballi- #Chitradurga- Hubballi Unreserved Express Special with normal fare with effect from 10.04.2021. pic.twitter.com/qJAQ5wdVdL
— DRM Hubballi (@drmubl) April 5, 2021