• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ: ಆನ್‌ಲೈನ್‌ ಗೇಮ್ಸ್‌ನಲ್ಲಿ 11 ಕೋಟಿ ರೂ ಗೆದ್ದವನನ್ನೂ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್‌ 10: ಆನ್‌ಲೈನ್ ಗೇಮ್‌ಗಳು ಇಂದು ಸಾಕಷ್ಟು ಯುವಕರಿಗೆ ಗೀಳಾಗಿದೆ. ಸುಲಭವಾಗಿ ಹಣ ಮಾಡಬಹುದು ಎಂಬ ದುರಾಸೆಯಿಂದ ಇಂದಿನ ಯುವ ಪೀಳಿಗೆ ಈಗ ಆನ್ ಲೈನ್ ಗೇಮ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಇನ್ನೂ, ಆನ್ ಲೈನ್ ಗೇಮ್ ಗಳಲ್ಲಿ ಹಣ ಗೆದ್ದವರಿಗಿಂತ ಹಣ ಕಳೆದುಕೊಂಡವರೆ ಹೆಚ್ಚು. ಎಷ್ಟೋ ಯುವಕರು ಈ ಆನ್ ಲೈನ್ ಗೇಮ್ ನಿಂದ ಲಕ್ಷಾಂತರ ರೂಪಾಯಿ ದುಡ್ಡು ಕಳೆದುಕೊಂಡು ಬೀದಿ ಪಾಲಾದರೆ, ಕೆಲವರು ಆತ್ಮಹತ್ಯೆಯ ದಾರಿ ಕೂಡ ಹಿಡಿದಿದ್ದಾರೆ.

Recommended Video

   ಇವರೇನಾ ಪ್ರವೀಣ್ ಗೆ ಹತ್ಯೆ ಮಾಡಿದ ಆ 3 ಕೊಲೆಗಡುಕರು | *Karnataka | OneIndia Kannada

   ಹಿಂದೆ ಆನ್ ಲೈನ್ ಗೇಮ್ ಗಳಿಗೆ ಸರ್ಕಾರವೇ ನಿಷೇಧವೇರಿತ್ತು. ಆದರೆ, ಈಗ ಆನ್ ಲೈನ್ ಗೇಮ್ ಗಳನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಆಗುತ್ತಿಲ್ಲ. ಅದರಲ್ಲೂ ಕೋವಿಡ್ ಸಮಯದಲ್ಲಿ ಈ ಆನ್ ಲೈನ್ ಗೇಮ್ ನ ಹಾವಳಿ ಜೋರಾಗತ್ತು. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತು ಕುಳಿತು ಬೇಸರಗೊಂಡಿದ್ದ ಎಷ್ಟೋ ಯುವಕರು ಈ ಆನ್ ಲೈನ್ ಗೇಮ್ ಕ್ಯಾಸಿನೋದ ದಾಸರಾಗಿದ್ದರು. ಆ ಆನ್ ಲೈನ್ ಗೇಮ್ ನ ಗೀಳಿನಿಂದ ಯುವಕರು ಇಂದಿಗೂ ಹೊರ ಬಂದಿಲ್ಲ.

   ಕೆಎಎಸ್ ಅಭ್ಯರ್ಥಿಗೆ ಆಮಿಷವೊಡ್ಡಿ 59 ಲಕ್ಷ ವಂಚಿಸಿದವ ಅಂದರ್!ಕೆಎಎಸ್ ಅಭ್ಯರ್ಥಿಗೆ ಆಮಿಷವೊಡ್ಡಿ 59 ಲಕ್ಷ ವಂಚಿಸಿದವ ಅಂದರ್!

   ಈಗ ಅದೇ ಆನ್‌ಲೈನ್ ಗೇಮ್ ನಲ್ಲಿ ಕೋಟ್ಯಂತರ ರೂಪಾಯಿ ಗೆದ್ದಿದ್ದ ಇಂಜನಿಯರಿಂಗ್ ವಿದ್ಯಾರ್ಥಿಗೆ ಕ್ಯಾಸಿನೋ ಮುಳುವಾಗಿತ್ತು. ಹೌದು, ತನ್ನ ಸ್ನೇಹಿತರೊಂದಿಗೆ ಆನ್ ಲೈನ್ ಗೇಮ್ ನಲ್ಲಿ ಆಟ ಆಡಿ‌ ಕೋಟ್ಯಂತರ ರೂಪಾಯಿ ಗೆದ್ದಿದ್ದ ಯುವಕನಿಗೆ ಅವನ ಸ್ನೇಹಿತರೇ ಕಿಡ್ನಾಪ್ ಮಾಡಿ 1 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಕಿಡ್ನಾಪ್ ಮಿಸ್ಟರಿ ಪ್ರಕರಣ ಸುಖಾಂತ್ಯ ಕಂಡಿದೆ.

   ಆನ್‌ಲೈನ್‌ ಗೇಮ್‌ನಲ್ಲಿ ಹಣ ಗೆದ್ದಿದ್ದ ಹುಬ್ಬಳ್ಳಿಯ ಮಂಟೂರ ರಸ್ತೆಯ ನ್ಯಾಷನಲ್ ಟೌನ್ ನಿವಾಸಿ ಗರೀಬ್ ನವಾಜ್ ಮುಲ್ಲಾ ಅಪಹರಣ‌‌‌ ಪ್ರಕರಣ ಸುಖಾಂತ್ಯ ಕಂಡಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಮುಲ್ಲಾನನ್ನು ಆಗಸ್ಟ್ 6 ರಂದು ಅಪಹರಿಸಿ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಏಳು ಮಂದಿ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಕಳೆದ ರಾತ್ರಿ ಬೆಳಗಾವಿಯ ಕಿತ್ತೂರು ಬಳಿ ಬಂಧಿಸಿ ಕರೆ ತಂದಿದ್ದಾರೆ. ಹುಬ್ಬಳ್ಳಿಯ ಮಹ್ಮದ್ ಆರಿಫ್, ಇಮ್ರಾನ್, ಅಬ್ದುಲ್ ಕರೀಮ್, ಹುಸೇನ್ ಸಾಬ್, ಇಮ್ರಾನ್ ಮದರಲಿ, ತೌಸಿಫ್ ಮತ್ತು ಮಹಮ್ಮದ್ ರಜಾಕ್ ಬಂಧಿತ ಆರೋಪಿಗಳು.

   ಗರೀಬ್ ನವಾಜ್ ಅಪಹರಣ ಆಗಿರುವ ಕುರಿತು ಆಗಸ್ಟ್ 6ರಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಆತನ ತಂದೆ ದೂರು ದಾಖಲಿಸಿದ್ದರು. ಅಪಹರಣಕಾರರು ಗರೀಬ್ ನವಾಜ್ ತಂದೆಗೆ ಕರೆ ಮಾಡಿ ಒಂದು ಕೋಟಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪದಿದ್ದಾಗ 15 ಲಕ್ಷ ನೀಡಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ‌ ಹಾಕಿದ್ದರು.

   A Student, who wins crores of Rupees in Online Games Kidnapped by his Friends, 7 Arrested in Hubballi

   ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ:
   ನಗರದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗರೀಬ್ ನವಾಜ್ ಹಾಗೂ ಆತನ ಸ್ನೇಹಿತ ದಿಲ್ವಾರ್, ಆನ್‌ಲೈನ್ ನಲ್ಲಿ ಕ್ಯಾಸಿನೋ ಗೇಮ್ ಆಡಿ, ಸುಮಾರು ಕೋಟ್ಯಾಂತರ ಹಣ ಸಂಪಾದಿಸಿದ್ದರು ಎನ್ನಲಾಗಿದೆ. ಸ್ನೇಹಿತರ ಜೊತೆ ಸೇರಿ ಬೇಕಾಬಿಟ್ಟಿಯಾಗಿ ಹಣ ವೆಚ್ಚ ಮಾಡುತ್ತಿದ್ದ. ಅಲ್ಲದೆ, ಅಷ್ಟೊಂದು ಹಣ ತನ್ನಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ಆತನ ಸ್ನೇಹಿತ ಸಹ ಗರೀಬ್ ನವಾಜ್ ಖಾತೆಗೆ ಒಂದಷ್ಟು ಹಣ ವರ್ಗಾಯಿಸಿದ್ದ. ಈ ವಿಷಯ ತಿಳಿದ ಆರೋಪಿತರು ಅವನ ಸ್ನೇಹಿತ, ಮಹ್ಮದ್ ಆರೀಫ್ ಎಂಬುವವನ ಸಹಾಯ ಪಡೆದು, ಗರೀಬ್ ನವಾಜ್ ನನ್ನು ಗೋಕುಲ ರಸ್ತೆಯ ಡೆಕ್ಲಥಾನ್ ಬಳಿ ಅಪಹರಿಸಿದ್ದರು.

   ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡುವ ಚೋರ್‌ ಇಮ್ರಾನ್ ರೋಚಕ ಸ್ಟೋರಿ!ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡುವ ಚೋರ್‌ ಇಮ್ರಾನ್ ರೋಚಕ ಸ್ಟೋರಿ!

   ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಹುಬ್ಬಳ್ಳಿ ಧಾರವಾಡ ಕಮಿಷನರ್ ಲಾಭೂರಾಮ್ ಅಪಹರಣಕಾರರನ್ನು ಬಲೆಗೆ ಬೀಳಿಸಲು ನಾಲ್ಕು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿದ್ದರು.

   ಕಮಿಷನರ್ ಲಾಭೂರಾಮ್ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತನಿಖಾ‌ ತಂಡಗಳನ್ನು ರಚಿಸಲಾಗಿತ್ತು. ಇನ್‌ಸ್ಪೆಕ್ಟರ್‌ಗಳಾದ ಶ್ಯಾಮರಾಜ ಸಜ್ಜನರ್, ಜಗದೀಶ ಹಂಚನಾಳ, ಜೆ.ಎಂ. ಕಾಲಿಮಿರ್ಚಿ ಮತ್ತು ರವಿಚಂದ್ರ ಬಡಾಫಕ್ಕೀರಪ್ಪನವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ, ಆರೋಪಿಗಳ ಮೊಬೈಲ್ ನೆಟ್‌ವರ್ಕ್ ಜಾಡು ಹಿಡಿದು ಅಪಹರಣಕಾರರನ್ನು ಬಂಧಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ಲಾಭೂರಾಮ್ ಹಾಗೂ ಪೋಲಿಸ್ ಇಲಾಖೆಯ ಈ ಕಾರ್ಯಕ್ಕೆ ಅವಳಿ ನಗರದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   English summary
   Hubballi police have cracked a kidnapping case of an engineering student. The student's friends Kidnapped him and demanded a large ransom for his release. Police arrested 7 people,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X