ಹುಬ್ಬಳ್ಳಿ ಪಾಲಿಕೆಯ ಅಧ್ಯಯನ ಪ್ರವಾಸದ ದಾಖಲೆಗಳೇ ನಾಪತ್ತೆ!

Posted By: Basavaraj
Subscribe to Oneindia Kannada

ಹುಬ್ಬಳ್ಳಿ, ಜುಲೈ 13: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಯನ ಪ್ರವಾಸ ಅಂದರೆ ಕೇವಲ ಮೋಜು-ಮಸ್ತಿಗೆ ಸೀಮಿತ ಎಂಬ ಆರೋಪಗಳ ಮಧ್ಯೆಯೇ ಇದಕ್ಕೆ ಸಂಬಂಧಿಸಿದ ಕಡತಗಳೇ ನಾಪತ್ತೆಯಾಗಿರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

ಸ್ಥಾಯಿ ಸಮಿತಿಗಳ ಅಧ್ಯಯನ ಪ್ರವಾಸಕ್ಕೆ ಸಂಬಂಧಿಸಿದ ಕೆಲ ವರ್ಷಗಳ ದಾಖಲೆಗಳು ಮಾತ್ರ ಪತ್ತೆಯಾಗಿದ್ದು, ಉಳಿದಂತೆ ಬಹುತೇಕ ಕಡತಗಳು ಪಾಲಿಕೆ ಕಚೇರಿಯಿಂದಲೇ ನಾಪತ್ತೆಯಾಗಿವೆ. ಈ ಮೂಲಕ ಅಧ್ಯಯನ ಪ್ರವಾಸವೇ ಕೈಗೊಳ್ಳದೇ ಹಣ ಪಾವತಿಸಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ: ಅಧ್ಯಯನ ಪ್ರವಾಸ ಅಂದ್ರೆ ಮೋಜು-ಮಸ್ತಿ ನಾ?

Standing committee’s study documents goes missing in HDMC

ದಾಖಲೆ ಹುಟುಕಾಟದಲ್ಲಿ ಪಾಲಿಕೆ

ಈಗಿರುವ ಅಧಿಕಾರಿಗಳು ಪ್ರವಾಸದ ದಾಖಲೆಗಳಿಗಾಗಿ ತಡಕಾಟ ನಡೆಸಿದ್ದರೂ ಈವರೆಗೂ ಅವು ಪತ್ತೆಯಾಗಿಲ್ಲ. ಪಾಲಿಕೆಯ ಬಹುತೇಕ ಸಿಬ್ಬಂದಿ ವರ್ಗಾವಣೆಯಾಗಿದ್ದರೆ, ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಹಾಗಾಗಿ ಹಿಂದಿನ ಸ್ಥಾಯಿ ಸಮಿತಿಗಳು ಕೈಗೊಂಡಿದ್ದ ದಾಖಲೆಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಲು ಈಗಿನ ಸಿಬ್ಬಂದಿ ತಲೆ ಬಿಸಿ ಮಾಡಿಕೊಂಡಿದ್ದಾರೆ.

ಅಧ್ಯಯನ ಪ್ರವಾಸಕ್ಕೆ ಅನುಮತಿ, ಹಣಕಾಸು, ಖರ್ಚು-ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಗಳುಳ್ಳ ದಾಖಲೆಗಳನ್ನು ಕೇಳಿದರೆ ಪಾಲಿಕೆಯ ಅಧಿಕಾರಿಗಳು ತಬಡಾಯಿಸುವುದಂತೂ ಗ್ಯಾರಂಟಿ.

ಅವಳಿ ನಗರಕ್ಕೇನು ಪ್ರಯೋಜನ

ಮುಖ್ಯವಾಗಿ ಪ್ರವಾಸ ಉದ್ದೇಶ ಬೇರೆ ನಗರಗಳಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಸ್ವಚ್ಛತೆ, ಆರೋಗ್ಯ, ಸಂಪನ್ಮೂಲ ಕ್ರೂಢಿಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಉತ್ತಮವಾದುದನ್ನು ಅವಳಿಡಿಸಿಕೊಳ್ಳುವುದು. ನಗರಗಳ ಅಭಿವೃದ್ಧಿಗೆ ಅಳವಡಿಸಿಕೊಳ್ಳಲು ಸಾಧ್ಯವಿರುವ ವಿಷಯಗಳನ್ನು ಶಿಫಾರಸು ಮಾಡಬೇಕು.

ಆದರೆ, ಪ್ರವಾಸ ಕೈಗೊಂಡಿದ್ದ ಬಹುತೇಕ ಸ್ಥಾಯಿ ಸಮಿತಿ ಸದಸ್ಯರಿಗೆ ಪ್ರವಾಸದ ಉದ್ದೇಶವೇ ಗೊತ್ತಿಲ್ಲದಿರುವುದು ವಿಪರ್ಯಾಸ. ಇದುವರೆಗೆ ತೆರಳಿದ್ದ ಸ್ಥಾಯಿ ಸಮಿತಿಗಳು ಪ್ರವಾಸ ಮುಗಿಸಿಕೊಂಡು ಬಂದಿದ್ದು ಆಯ್ತು, ಮೋಜು ಮಸ್ತಿ ಮಾಡಿದ್ದನ್ನು ಮರೆತಿದ್ದು ಆಯ್ತು ಎನ್ನುವಂತಾಗಿದೆ. ಹೆಚ್ಚಿನವರು ವರದಿ ನೀಡದ್ದೇ ಇಲ್ಲ. ಇನ್ನು ಕೆಲವು ವರದಿ ನೀಡಿದ್ದರೂ ಻ಅಧ್ಯಯನ ವರದಿಗಳೇ ನಾಪತ್ತೆಯಾಗಿವೆ. ಹೀಗಾಗಿ ಯಾವ ಪುರುಷಾರ್ಥಕ್ಕೆ ಪ್ರವಾಸ ಮಾಡಿದ್ದೋ ದೇವರೇ ಬಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
HDMC yet to be received report of standing committee’s study tour since several years. Along with this documents regarding study tour of standing committee members are not available in HDMC office. Several documents were missed from the office, staff were struggling to find out such documents.
Please Wait while comments are loading...