ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಸಿರು ರೈಲ್ವೆಯತ್ತ ನಿರ್ಮಾಣದತಚಿತ್ತ ನೆಟ್ಟ ನೈರುತ್ಯ ರೈಲ್ವೇ; 46 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್‌, 29: ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈರುತ್ಯ ರೈಲ್ವೆ ವಲಯ ಇದೀಗ ಮತ್ತೊಂದು ಐತಿಹಾಸಿಕ ಹೆಜ್ಜೆಯತ್ತ ದಾಪುಗಾಲು ಇಟ್ಟಿದೆ. ಐದು ತಿಂಗಳ ಆದಾಯ ಗಳಿಕೆಯಲ್ಲಿ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿರುವ ನೈರುತ್ಯ ರೈಲ್ವೇ ವಲಯ ಹಸಿರು ಕ್ರಾಂತಿಯತ್ತ ಸಾಗಿದ್ದು, ಉಳಿದೆಲ್ಲ ಸಾರಿಗೆ ವ್ಯವಸ್ಥೆಗಳಿಗೂ ಮಾದರಿ ಆಗಿದೆ.

ನೈರುತ್ಯ ರೈಲ್ವೇ ವಲಯ ಏಪ್ರಿಲ್​ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿಯೇ ಪ್ಯಾಸೆಂಜರ್ ರೈಲು ಸಂಚಾರದ ಮೂಲಕ 1,048 ಕೋಟಿ ಆದಾಯವನ್ನು ಗಳಿಸಿದ್ದು, ಈ ಮೂಲಕ ನೈಋತ್ಯ ರೈಲ್ವೇ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಉತ್ತಮವಾದ ರೈಲು ಸಂಪರ್ಕ, ಪ್ರಯಾಣಿಕರಿಗೆ ಎಲ್ಲ ರೀತಿಯಲ್ಲೂ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ನೀಡಲು ಸರ್ಕಾರಗಳು ಹೆಣಗಾಡುತ್ತಿವೆ. ಇದರಲ್ಲೂ ಸೌರಶಕ್ತಿ ಮೂಲಕ ರೈಲು ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆ ಮಾಡಿ ನೂರು ಕೋಟಿ ರೂಪಾಯಿಗೂ ಹೆಚ್ಚು ಉಳಿತಾಯ ಮಾಡಿ ಮೆಚ್ಚುಗೆ ಪಾತ್ರವಾಗಿದೆ.

ನೈರುತ್ಯ ರೈಲ್ವೇ ಇದೀಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನ ಕಲ್ಲಿದ್ದಲು, ಡೀಸೆಲ್ ಮೂಲಕ ರೈಲು ಚಾಲನೆ ಮಾಡಿದ್ದ ಭಾರತೀಯ ರೈಲ್ವೇ, ಇದೀಗ ವಿದ್ಯುತ್ ಚಾಲಿತ ರೈಲು ಚಾಲನೆ ಮಾಡಲು ಮುಂದಾಗಿದೆ. ಈ ಮೂಲಕ ಇಂಧನ ಉಳಿತಾಯದೊಂದಿಗೆ ಪರಿಸರ ರಕ್ಷಣೆಯ ಹೊಣೆ ಹೊತ್ತಿದೆ. ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಚಿಂತನೆ ನಡೆಸಿದ್ದು, ಈಗಾಗಲೇ ದ್ವಿಪಥ ಕಾಮಗಾರಿ ಜೊತೆಗೆ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

 ಪರಿಸರ ಸ್ನೇಹಿ ರೈಲ್ವೆಯತ್ತ ನೈರುತ್ಯ ರೈಲ್ವೇ

ಪರಿಸರ ಸ್ನೇಹಿ ರೈಲ್ವೆಯತ್ತ ನೈರುತ್ಯ ರೈಲ್ವೇ

ಹೆಚ್ಚುತ್ತಿರುವ ಇಂಧನ ಬೆಲೆಯಿಂದ ಸಂಕಷ್ಟ ಎದುರಾಗಿದೆ. ಈ ಸಂಕಷ್ಟ ಎದುರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರದಾಡುತ್ತಿವೆ. ಇದರ ನಡುವೆ ಇಂಧನದ ಮೇಲಿನ ಅವಲಂಬನೆ ಕೈ ಬಿಟ್ಟು ಪರಿಸರ ಸ್ನೇಹಿ ರೈಲ್ವೆಯಾಗುವತ್ತ ನೈರುತ್ಯ ರೈಲ್ವೇ ವಲಯ ಸಾಗುತ್ತಿದೆ. ಈಗಾಗಲೇ 3,600 ಕಿಲೋ ಮೀಟರ್ ರೈಲ್ವೇ ರೂಟ್ ಟ್ರ್ಯಾಕ್​ನಲ್ಲಿ ಸುಮಾರು ಶೇಕಡಾ 50% ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. 2024ರ ಮಾರ್ಚ್ ತಿಂಗಳ ಅವಧಿಗೆ ಸಂಪೂರ್ಣ ವಿದ್ಯುದ್ದೀಕರಣ ಆಗುವ ಮೂಲಕ ಪರಿಸರ ಸ್ನೇಹಿಯಾಗಿ ನೈರುತ್ಯ ರೈಲ್ವೇ ಹೊರ ಹೊಮ್ಮಲಿದೆ. ನೈಋತ್ಯ ರೈಲ್ವೇ ವಲಯದಲ್ಲಿರುವ ಕರ್ನಾಟಕ ಹಾಗೂ ಗೋವಾ ರಾಜ್ಯದ ವ್ಯಾಪ್ತಿಯಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಗುಣಮಟ್ಟದ ಸೇವೆಯ ಜೊತೆಗೆ ಪ್ರಯಾಣಿಕರ ಸಮಯಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಜೊತೆಗೆ ನೈರುತ್ಯ ರೈಲ್ವೆಯು ವಿದ್ಯುದ್ದೀಕರಣದಲ್ಲಿ ದಾಖಲೆ ಸಾಧಿಸಿದೆ. 2021-22ನೇ ಆರ್ಥಿಕ ವರ್ಷದಲ್ಲಿ 1,750 ರೂಟ್ ಕೀಲೋ ಮೀಟರ್‌ಗಳ ವಿದ್ಯುದ್ದೀಕರಣವನ್ನು ಪೂರ್ಣಗೊಳಿಸಿದ್ದು, ಹಸಿರು ರೈಲ್ವೆಯಾಗಿ ಮಾಡಲು ನಿರ್ಧರಿಸಿದೆ.

 ಕಳೆದ ವರ್ಷದಲ್ಲಿ ವಿದ್ಯುತ್‌ ಉತ್ಪಾದನೆ ಎಷ್ಟು?

ಕಳೆದ ವರ್ಷದಲ್ಲಿ ವಿದ್ಯುತ್‌ ಉತ್ಪಾದನೆ ಎಷ್ಟು?

ನೈರುತ್ಯ ರೈಲ್ವೆಯು ತನ್ನ ಸೇವಾ ಕಟ್ಟಡಗಳು, 120 ನಿಲ್ದಾಣಗಳು, ಲೆವೆಲ್‌ ಕ್ರಾಸಿಂಗ್ ಗೇಟ್‌ಗಳು ಸೇರಿದಂತೆ ವಿವಿಧೆಡೆ ಅಳವಡಿಸಿರುವ 4656.60 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರ ಫಲಕಗಳಿಂದ ಕಳೆದ ಆರ್ಥಿಕ ವರ್ಷದಲ್ಲಿ 46.11 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆ ಆಗಿದೆ. ಇದರಿಂದಾಗಿ ರೈಲ್ವೆಗೆ ವಿದ್ಯುತ್‌ ಬಿಲ್‌ನಲ್ಲಿ 1.96 ಕೋಟಿ ರೂಪಾಯಿ ಉಳಿತಾಯ ಆಗಿದೆ.

 ರೈಲ್‌ ಸೌಧದಲ್ಲಿ ಸೌರಫಲಕಗಳ ಅಳವಡಿಕೆ

ರೈಲ್‌ ಸೌಧದಲ್ಲಿ ಸೌರಫಲಕಗಳ ಅಳವಡಿಕೆ

ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್‌ ಅಗತ್ಯತೆಯ ಶೇಕಡಾ 70ರಷ್ಟು ಸೌರಶಕ್ತಿಯಿಂದಲೇ ಪೂರೈಕೆ ಆಗಿದೆ. ಕಾರ್ಯಗಾರದ ಶೇಕಡಾ 83ರಷ್ಟು ವಿದ್ಯುತ್ (ಅಗತ್ಯವಿರುವ ಒಟ್ಟು ವಿದ್ಯುತ್‌ 13.51 ಲಕ್ಷ ಯುನಿಟ್‌) ಹಾಗೂ ಇಎಂಡಿ ಶೆಡ್‌ನ ವಾರ್ಷಿಕ 1.13 ಲಕ್ಷ ಯುನಿಟ್‌ಗಳ ವಿದ್ಯುತ್‌ ಬಳಕೆಯ ಪೈಕಿ, ಶೇಕಡಾ 60ರಷ್ಟು ವಿದ್ಯುತ್ ಅನ್ನು ಸೌರಶಕ್ತಿಯಿಂದ ಪಡೆದುಕೊಳ್ಳಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ರೈಲ್‌ ಸೌಧದಲ್ಲಿ ಅಳವಡಿಸಲಾಗಿರುವ ಸೌರಫಲಕಗಳಿಂದ 2.75 ಲಕ್ಷ ಯುನಿಟ್‌ ವಿದ್ಯುತ್‌, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 84,294 ಯುನಿಟ್‌, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 94,115 ಯುನಿಟ್‌ ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಿರುವ ಸೌರಫಲಕಗಳಿಂದ 1.28 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆ ಆಗಿದೆ.

 ಸೌರಶಕ್ತಿ ಬಳಸಿಕೊಳ್ಳುತ್ತಿರುವ ನೈರುತ್ಯ ರೈಲ್ವೇ

ಸೌರಶಕ್ತಿ ಬಳಸಿಕೊಳ್ಳುತ್ತಿರುವ ನೈರುತ್ಯ ರೈಲ್ವೇ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗುವುದು. ನೈರುತ್ಯ ರೈಲ್ವೆಯು ಪರಿಸರ ಸ್ನೇಹಿ ಸೌರಶಕ್ತಿ ಬಳಸಿಕೊಳ್ಳುತ್ತಿದೆ. 2030ರ ಒಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆಯಾಗಿ ಹೊರ ಹೊಮ್ಮುವ ಗುರಿ ಹೊಂದಿದೆ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

English summary
South Western Railway sector now taken another historic step. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X