ಹುಬ್ಬಳ್ಳಿಯ ಕಟುಗರ ಓಣಿಯಲ್ಲಿ 2 ಚೀಲದಲ್ಲಿ ಮನುಷ್ಯರ ತಲೆಬುರುಡೆ ಪತ್ತೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಏಪ್ರಿಲ್ 13: ಇಲ್ಲಿನ ಇಸ್ಲಾಂಪುರದ ಕಟುಗರ ಓಣಿಯಲ್ಲಿ ಮನುಷ್ಯರ ತಲೆ ಬುರುಡೆ ಹಾಗೂ ಎಲುಬುಗಳು ತುಂಬಿದ್ದ ಎರಡು ಚೀಲಗಳು ಬುಧವಾರ ಪತ್ತೆಯಾಗಿವೆ. ಈ ಓಣಿಯಲ್ಲಿ ಜಾನುವಾರುಗಳ ಎಲುಬು-ತಲೆ ಬುರುಡೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮನುಷ್ಯರ ತಲೆಬುರುಡೆ-ಎಲುಬುಗಳು ಸಿಕ್ಕಿರುವುದರಿಂದ ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

ಕಸಬಾ ಪೇಟೆ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ತಲೆಬುರುಡೆ-ಎಲುಬುಗಳು ಇದ್ದ ಚೀಲಗಳನ್ನು ಪರಿಶೀಲಿಸಿ, ವಶಕ್ಕೆ ಪಡೆದರು. ವಾಮಾಚಾರಕ್ಕೆ ಬೇಕಾಗುವ ತಲೆಬುರುಡೆ-ಎಲುಬುಗಳನ್ನು ಸ್ಮಶಾನದಿಂದ ತಂದು ಇಲ್ಲಿ ಮಾರಲು ಯತ್ನಿಸಿರಬಹುದು ಎಂಬ ಅನುಮಾನವನ್ನು ಕೂಡ ಜನರು ವ್ಯಕ್ತಪಡಿಸಿದರು.[ಬೆಳ್ಳಂಬೆಳಗ್ಗೆ ವಧು ನಾಪತ್ತೆ, ಅನಿವಾರ್ಯ ಕಾರಣದಿಂದ ಮದುವೆ ಮುಂದಕ್ಕೆ]

Skull and bones found in gunnybag at Hubballi Katugara Oni

ಇನ್ನು ಎಲುಬು ಹಾಗೂ ತಲೆ ಬುರುಡೆಗಳನ್ನು ಚೀಲಗಳಲ್ಲಿ ಸಂಗ್ರಹಿಸಿ, ಹಣಕ್ಕಾಗಿ ಕಟುಗರ ಓಣಿಯಲ್ಲಿ ಮಾರಾಟ ಮಾಡಲು ಸಹ ತಂದಿರಬಹುದು. ಈ ಬಗ್ಗೆ ಸಮಗ್ರವಾದ ತನಿಖೆ ನಡೆಸಿ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಎಲು-ತಲೆಬುರುಡೆ ತಂದವರು ಯಾರು, ಯಾಕೆ ತಂದರು ಎಂಬುದನ್ನು ಕಂಡುಹಿಡಿಯಬೇಕು ಎಂದು ಆಗ್ರಹಿಸಲಾಗಿದೆ. ಕಸಬಾ ಪೇಟೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Skull and bones found in two gunnybag at Hubballi Katugara Oni on Wednesday. Local people informed Kasaba pete police station. Two gunnybag seized by police.
Please Wait while comments are loading...