ಕೇಜ್ರಿವಾಲ್ ಬೇಲ್ ಸಿಕ್ಕಿದ್ದೇ ಕೊನೆಯಲ್ಲ: ಲಾಲೂ ಪ್ರಸಾದ್‌ಗೆ ಏನಾಯಿತು: ಪ್ರಹ್ಲಾದ್ ಜೋಶಿ ಹೀಗಂದಿದ್ದೇಕೆ
ಹುಬ್ಬಳ್ಳಿ, ಸೆಪ್ಟಂಬರ್ 13: ದೆಹಲಿ ಅಬಕಾರಿ ನೀತಿ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದು ಜಾಮೀನು, ಅಷ್ಟೇ ಆರೋಪ ಮುಕ್ತವಾಗಿಲ್ಲ. ಬಿಹಾರದ ಲಾಲೂ ಪ್ರಸಾದ್ ಯಾದವ್‌ಗೂ ಜಾಮೀನು ಸಿಕ್ಕಿತ್ತು, ಕೊನೆಗೆ ಏನಾಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದರು.
ದೆಹಲಿ ಮುಖ್ಯಮಂತ್ರಿ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕ ವಿಚಾರದ ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತದ ನ್ಯಾಯಾಂಗ ವ್ಯವಸ್ಥೆ ಶ್ರೇಷ್ಠವಾಗಿದೆ ಎನ್ನುವುದಕ್ಕೆ ನಿದರ್ಶನ ಇವೆ. ಇಂದು ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದೆ ಅಷ್ಟೆ. ಬಿಹಾರ ಸಿಎಂ ಆಗಿದ್ದ ಲಾಲು ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣದಲ್ಲಿ ಜಾಮೀನು ಸಿಕ್ಕಿತ್ತು. ಸಮಗ್ರ ವಿಚಾರಣೆ ಬಳಿಕ ಆರೋಪ ಸಾಬೀತಾಗಿ ಶಿಕ್ಷೆಗೆ ಅವರು ಗುರಿಯಾದರು ಎಂದು ತಿಳಿಸಿದರು.

ಆರೋಪ ಮುಕ್ತವಾಗಿಲ್ಲ: ಜೋಶಿ ಟಾಂಗ್
ನ್ಯಾಯಾಂಗ ವ್ಯವಸ್ಥೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ, ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ, ನ್ಯಾಯಾಲಯ ಅವರನ್ನು ಇನ್ನೂ ಆರೋಪಮುಕ್ತ ಮಾಡಿಲ್ಲ. ಬಿಜೆಪಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು ವಿವರಿಸಿದರು.
ಮೊದಲ ಬೇಲ್ ಪಡೆದುಕೊಂಡಿದ್ದ ಲಾಲೂ ಪ್ರಸಾದ ಯಾದವ್ ಅವರು ತಪ್ಪು ಸಾಬೀತಾಗುತ್ತಿದ್ದಂತೆ ಶಿಕ್ಷೆಗೆ ಗುರಿ ಆದರು ಇದು ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಅತ್ಯುನ್ನತವಾಗಿದೆ ಮತ್ತು ಅತ್ಯಂತ ಶ್ರೇಷ್ಠವಾಗಿದೆ ಎಂಬುದಕ್ಕೆ ನಿದರ್ಶನ ಎಂದು ಸಚಿವ ಪ್ರಹ್ಲಾದದ್ ಜೋಶಿ ವ್ಯಾಖ್ಯಾನಿಸಿದರು.
ದೇಶದಲ್ಲಿ ನ್ಯಾಯಾಲಯಗಳು ನ್ಯಾಯಯುತವಾಗಿ, ಅತ್ಯಂತ ನಿಷ್ಪಕ್ಷವಾಗಿ ಕೆಲಸ ಮಾಡುತ್ತಿವೆ ಎಂದು ಸಚಿವರು, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅರಿಯಲಿ ಎಂದು ತೀಕ್ಷ್ಣವಾಗಿ ಹೇಳಿದರು.

ಕೇಜ್ರಿವಾಲ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು
ಈಗಾಗಲೇ ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಜಾಮೀನು ಪಡೆದಿದ್ದರು. ಆದರೆ ಅವರ ಮೇಲೆ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅಕ್ರಮ ಆರೋಪ ಇತ್ತು. ಇದರಿಂದ ಬಂಧಿತರಾಗಿದ್ದ ಅವರಿಗೆ ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಸಿಬಿಐ ಪ್ರಕರಣದಲ್ಲೂ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಇಂದು ಸಂಜೆಯೊಳಗೆ ಅವರು ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ.
ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು, ಪ್ರಕರಣ ಸಂಬಂಧ ಬಹಿರಂಗವಾಗಿ ಹೇಳಿಕೆ ನೀಡದಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದೆ.












Click it and Unblock the Notifications