ಜಗದೀಶ್ ಶೆಟ್ಟರ್‌ಗೆ ಬಿಜೆಪಿ 'ಟಿಕೆಟ್' ಬಗ್ಗೆ ಪ್ರಹ್ಲಾದ್ ಜೋಶಿ ಅಪ್ಡೇಟ್
ಹುಬ್ಬಳ್ಳಿ, ಮಾರ್ಚ್ 14: ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಇಲ್ಲವೇ ಹಾವೇರಿಯಿಂದ ಟಿಕೆಟ್ ಬಯಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ನಿರಾಸೆಯಾಗಿದೆ. ಹಾಗಾದರೆ ಅವರಿಗೆ ಯಾವ ಕ್ಷೇತ್ರದ ಟಿಕೆಟ್ ಫೈನಲ್ ಆಗುವ ಸಾಧ್ಯತೆ ಇದೆ. ಅವರಿಗೆ ಟಿಕೆಟ್ ಮಿಸ್ ಆಗಿದ್ದರ ಕುರಿತು ಪ್ರಹ್ಲಾದ್ ಜೋಶಿಯವರು ಅಪ್ಡೇಟ್ ಕೊಟ್ಟಿದ್ದಾರೆ.
ಧಾರವಾಡದ ಟಿಕೆಟ್ ತಮಗೆ ಘೋಷಣೆ ಆಗಿದ್ದರ ಸಂತಸದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಗುರುವಾರ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಗದ್ದುಗೆ ದರ್ಶನ ಪಡೆದರ. ಬಳಿಕ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಜಗದೀಶ್ ಶೆಟ್ಟರ್ ಟಿಕೆಟ್, ಸ್ಪರ್ಧೆ ಕುರಿತು ಅವರು ಮಾತನಾಡಿದರು.

ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಬಯಸಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹೆಸರು ಮೂರನೇ ಕ್ಷೇತ್ರವಾದ ಬೆಳಗಾವಿ ಲೋಕಸಭೆಗೆ ಕೇಳಿ ಬರುತ್ತಿದೆ. ಅವರನ್ನು ಬೆಳಗಾವಿಯಿಂದ ಅವರ ಜೊತೆಗೆ ಬೇರೆ ಅಭ್ಯರ್ಥಿಗಳ ಹೆಸರು ಇದೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಲೋಕಸಭಾ ಚುನಾವಣೆ ಪ್ರಯುಕ್ತ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಂಡು ಪ್ರಚಾರ ನಡೆಸುತ್ತಾರೆ ಎನ್ನಲಾಗಿತ್ತು. ಆದರೆ ಪ್ರವಾಸ ಮುಂದೂಡಲಾಗಿದೆ. ಬಿಜೆಪಿಯ 28 ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಪ್ರವಾಸ ಸಮಯ, ಕಾರ್ಯಕ್ರಮ ನಿಗದಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಬೇಜಾರಲ್ಲಿ ಈಶ್ವರಪ್ಪ ಆರೋಪ: ಬಂಡಾಯ ಇಲ್ಲ
ನನ್ನ ಕಾರ್ಯದ ವಿಚಾರಕ್ಕೆ ನನಗೆ ನೆಮ್ಮದಿ. ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನಿಷ್ಠಾವಂತರ ಕಾರ್ಯಕರ್ತರ ಕಡೆಗಣನೆ ಮಾಡಿದ್ದಾರೆ ಎಂಬುದು ಕೇವಲ ಈಶ್ವರಪ್ಪನವರ ಆರೋಪ. ಅವರ ಪುತ್ರನಿಗೆ ಟಿಕೇಟ್ ಸಿಗದ ಕಾರಣಕ್ಕೆ ಬೇಜಾರು ಆಗಿದೆ. ನನಗೆ ವಿಶ್ವಾಸ ಇದೆ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಎಲ್ಲವನ್ನು ಸರಿ ಮಾಡತಾರೆ. ನಮ್ಮಲ್ಲಿ ಬಂಡಾಯ ಏಳುವುದಿಲ್ಲ. ನೀವು ಹೇಳಿ ಬಂಡಯ ಎಬ್ಬಿಸಬೇಡಿ ಎಂದು ಮನವಿ ಮಾಡಿದರು.
ಶ್ರೀಗಳ ಆಶೀರ್ವಾದದೊಂದಿಗೆ ಪ್ರಚಾರ ಆರಂಭ
ಇನ್ನು ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ದೆಹಲಿ ಮಟ್ಟದಲ್ಲಿ ವರಿಷ್ಠರು ಟಿಕೆಟ್ ಫೈನಲ್ ಕುರಿತು ಚರ್ಚಿಸಿ ತೀರ್ಮಾನಿಸಲಿದ್ದಾರೆ. ನೆನ್ನೆ ನನಗೆ ಟಿಕೆಟ್ ಘೋಷಣೆ ಆಗಿದ್ದು, ಇಂದು ನಾನು ಶ್ರೀ ಸಿದ್ಧಾರೂಢರು, ಶ್ರೀ ಮೂರು ಸಾವಿರ ಮಠದ ಜಗದ್ಗುರು ಗದ್ದುಗೆ ದರ್ಶನ ಪಡೆಯಲು ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಉಭಯ ಶ್ರೀಗಳ ಆರ್ಶೀವಾದ ಪಡೆಯುವ ಮೂಲಕ ಇಂದಿನಿಂದ ಕ್ಷೇತ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯ ಆರಂಭ ಮಾಡಿದ್ದೇನೆ. ಐದನೇ ಬಾರಿಗೆ ನಾನು ಜನರ ಆರ್ಶೀವಾದ ಕೇಳಲು ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಬಿ.ಎಸ್ ಯಡಿಯೂರಪ್ಪ, ವಿಜೇಯಂದ್ರ ಸಹಕಾರದಿಂದ ನನಗೆ ಟಿಕೆಟ್ ಸಿಕ್ಕಿದೆ ಎಂದು ಅವರು ಧನ್ಯವಾದ ತಿಳಿಸಿದರು.
ಈ ಹಿಂದೆ ನಾಲ್ಕು ಬಾರಿ ನಾನು ಆಯ್ಕೆ ಆಗಿ, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಕಾಮಗಾರಿಗಳಿಗೆ ಶ್ರಮಿಸಿದ್ದೇನೆ ಪ್ರಧಾನಿ ಮೋಚಿಯವರ ಕೈ ಬಲಪಡಿಸಿದ್ದೇನೆ. ದೇಶ ಅಭಿವೃದ್ಧಿ ಸಾಕಷ್ಟು ಆಗಿದೆ. ನಾನು ಸಾಕಷ್ಟು ಧಾರವಾಡ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ ಎಂದು ತಮ್ಮ ಕಾರ್ಯಗಳ ಕುರಿತು ಅವರು ಮಾತನಾಡಿದರು.












Click it and Unblock the Notifications