LS Polls: ರಾಹುಲ್ ಗಾಂಧಿಗೆ ಸೋಲಿನ ಕನಸು ಬೀಳುತ್ತಿದೆ: ಪ್ರಹ್ಲಾದ್ ಜೋಶಿ ಭವಿಷ್ಯ
ಹುಬ್ಬಳ್ಳಿ, ಏಪ್ರಿಲ್ 01: ಲೋಕಸಭಾ ಚುನಾವಣೆಗೆ ರಣಕಣ ಸಿದ್ಧವಾಗುತ್ತಿದೆ. ಒಂದೆಡೆ ಪ್ರಚಾರದ ಅಬ್ಬರ ಶುರುವಾದರೆ ಮತ್ತೊಂದೆಡೆ ರಾಜಕೀಯ ಪಕ್ಷಗಳ ನಾಯಕರು ಆರೋಪ, ಪ್ರತ್ಯಾರೋಪ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಚುನಾವಣಾ ಭವಿಷ್ಯ ನುಡಿಸಿದ್ದಾರೆ.
ಸದರಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಈಗಾಗಲೇ ಸೋಲಿನ ಕನಸು ಬೀಳುತ್ತಿದೆ ಎನ್ನುವ ಮೂಲಕ ಈ ಬಾರಿ ಅವರ ಪರಭಾವಗೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಎದುರಾಳಿ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದ ಭಾಗವಾದ ಟಿಎಂಸಿ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ಸತ್ಯವು ಗೊತ್ತಾಗಿ ಬಿಟ್ಟಿದೆ. ಜೊತೆಗೆ ಮೈತ್ರಿಯಿಂದ ಹೊರ ಬಂದು 40-50 ಸೀಟು ಗೆಲಲಿ ಎಂದಿರುವುದು ಕಾಂಗ್ರೆಸ್ ಗೂ ಅರ್ಥವಾಗಿದೆ ಎಂದು ಅವರು ಲೇವಡಿ ಮಾಡಿದರು.
ಕಾಂಗ್ರೆಸ್‌ಗೆ ಕಳೆದ ಬಾರಿಗಿಂತ ಕಡಿಮೆ ಸೀಟು?
ಕಳೆದ ಬಾರಿ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ 52 ಸ್ಥಾನಗಳು ಬಂದವು. ಈಗ ಅದರಕ್ಕಿಂತ ಕಡಿಮೆ ಸ್ಥಾನಗಳು ಬರಲಿವೆ ಎಂದು ಗೊತ್ತಾಗಿದೆ. ಹೀಗಾಗಿಯೇ ಅವರು ಚುನಾವಣಾ ಆಯೋಗದ ಮೇಲೆ ಗೋಬೆ ಕೂರಿಸುತ್ತಿದ್ದಾರೆ.

ಇನ್ನೂ ಕಾಂಗ್ರೆಸ್ ಲೀಡರ್ ಲಾಯರ್ ಇದ್ದಾರೆ. ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇವಿಎಂ ಮೇಲೆ ವಕೀಲರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ತಿರುಗೇಟು ನೀಡಿದರು.
ಕಾಂಗ್ರೆಸ್‌ನದ್ದು ದ್ವಂದ್ವ ನೀತಿ
ಕಾಂಗ್ರೆಸ್ ಪಕ್ಷ ದ್ವಂದ್ವ ನೀತಿ ಅನುಸರಿಸುತ್ತಿದೆ. ಕರ್ನಾಟಕದಲ್ಲಿ ಗೆದ್ದರೆ ಇವಿಎಂ ತೊಂದರೆ ಇಲ್ಲ. ತೆಲಾಂಗಣದಲ್ಲಿ ಗೆದ್ದರೆ ಇವಿಎಂ ಮೇಲೆ ಯಾವುದೇ ಅನುಮಾನ ಪಡೆದ ಅವರು, ಹಿಮಾಲಯ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಾಗ ಯಾವುದೇ ರೀತಿಯ ಇವಿಎಂ ತೊಂದರೆ ಇಲ್ಲ ಎನ್ನುತ್ತಾರೆ.
ಅದೇ ರೀತಿ ರಾಜಾಸ್ಥಾನದಲ್ಲಿ ಸೋತರು, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಸೋತರು, ದೇಶದಲ್ಲಿ ಇರುವಂತಹ ಮೂರು ರಾಜ್ಯಗಳಲ್ಲಿ ಆಯ್ಕೆ ಆಗಿ ಬಂದರು. ಗೆದ್ದರೆ ಕಾಂಗ್ರೆಸ್ ನಾಯಕರಿಗೆ ಇವಿಎಂ ನಲ್ಲಿ ಸಮಸ್ಯೆ ಇಲ್ಲ. ಸೋತರೆ ಮಾತ್ರ ಇವಿಎಂ ನಲ್ಲಿ ಸಮಸ್ಯೆ ಎನ್ನುತ್ತಾರೆ.
ಬಿಜೆಪಿ ಸೋತಾಗ ಹೀಗೆ ಆರೋಪಿಸಲಿಲ್ಲ
2004 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇತ್ತು. 2009ರಲ್ಲಿ ಅವರದ್ದೆ ಕಾಂಗ್ರೆಸ್ ಸರ್ಕಾರ ಇತ್ತು. ಅಂದು ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಗಿತ್ತು. ಕಾಂಗ್ರೆಸ್ ಪಕ್ಷದ ಗೆಲುವು ಬಗ್ಗೆ ಇವಿಎಂ ಬಗ್ಗೆ ತಕರಾರು ಅಂದು ಬಿಜೆಪಿ ತೆಗೆಯಲಿಲ್ಲ. ಜನರು ಕೊಟ್ಟ ತೀರ್ಪಿಗೆ ಸಹಮತ ವ್ಯಕ್ತಪಡಿಸಿ, ಒಪ್ಪಿ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಂಡೆವು ಎಂದು ಹಳೆಯದನ್ನು ಅವರು ನೆನಪಿಸಿದರು.
ಕಾಂಗ್ರೆಸ್ ಪಕ್ಷ ತನ್ನ ಆಂತರಿಕ ವ್ಯವಸ್ಥೆ ಬಲಾಢ್ಯ ಮಾಡಿಕೊಳ್ಳಬೇಕು ಇದನ್ನ ಬಿಟ್ಟು ಇವಿಎಂ, ಸುಪ್ರೀಂ ಕೋರ್ಟ್ , ಚುನಾವಣಾ ಆಯೋಗ ಈ ರೀತಿಯಾಗಿ ಮಾಡೋದು ಸರಿಯಲ್ಲ ಅತ್ಯಂತ ಹಳೆ ಪಕ್ಷ ಎನ್ನವುದು ಸೂಕ್ತವಲ್ಲ. ಏನೇ ಇದ್ದರೂ ಜನರು ತೀರ್ಮಾನ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೊಡ್ಡ ಬದಲಾವಣೆ ಮಾಡಿದ್ದಾರೆ. ಈ ಭಾರಿಯು ಅವರು ಮತ್ತೆ ಪ್ರಧಾನಿ ಆಗಿ ಆಯ್ಕೆ ಆಗಲಿದ್ದಾರೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications