ಸಿದ್ದರಾಮಯ್ಯ ಕ್ಷೇತ್ರ ಹುಡುಕುತ್ತಾ ಕೋಲಾರಕ್ಕೆ; ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಲೇವಡಿ

ಹುಬ್ಬಳ್ಳಿ, ನವೆಂಬರ್‌, 13: ''ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಏನು ಕೆಲಸ ಮಾಡಲಿಲ್ಲ. ಹೀಗಾಗಿ ಚಾಮುಂಡೇಶ್ವರಿಯ ಜನ ಸಿದ್ದರಾಮಯ್ಯ ಅವರನ್ನು ಸೋಲಿಸಿದರು. ಈಗ ಕೋಲಾರಕ್ಕೆ ಹೋಗಿದ್ದಾರೆ, ಕೋಲಾರದ ಜ‌ನ ಸಿದ್ದರಾಮಯ್ಯ ಅವರನ್ನು ಸೋಲಿಸಿ ಮನೆಗೆ ಕಳಿಸುವುದು ಒಳಿತು'' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಲೇವಡಿ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಏನು ಕೆಲಸ ಮಾಡಲಿಲ್ಲ. ಹೀಗಾಗಿ ಚಾಮುಂಡೇಶ್ವರಿಯ ಜನ ಸಿದ್ದರಾಮಯ್ಯ ಅವರನ್ನು ಸೋಲಿಸಿದರು. ಕೋಲಾರದ ಜ‌ನ ಸಿದ್ದರಾಮಯ್ಯ ಅವರನ್ನು ಸೋಲಿಸಿ ಮನೆಗೆ ಕಳಿಸುವುದು ಒಳಿತು. ಸಿದ್ದರಾಮಯ್ಯನವರು ಮೊದಲು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುತ್ತಿದ್ದರು. ಅಲ್ಲಿ ಅವರು ಏನು ಕೆಲಸ ಮಾಡಲಿಲ್ಲ. ಅಲ್ಲಿನ ಜನ ಅವನ್ನು ಸೋಲಿಸಿದರು. ಬಾದಾಮಿಯಲ್ಲಿ ಏನೋ ಅದೃಷ್ಟದಿಂದ ಕೇವಲ ಒಂದೆರಡು ಸಾವಿರ ಮತಗಳಿಂದ ಗೆದ್ದಿದ್ದರು.

ಬಾದಾಮಿಯಲ್ಲಿ ಅವರು ಏನೂ ಕೆಲಸವನ್ನು ಮಾಡಿಲ್ಲ. ಈಗ ಬಾದಾಮಿ ಬಿಟ್ಟು ಕೋಲಾರಕ್ಕೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರು ಹೀಗೆ ಅಬ್ಬೆಪರಿ ಥರ ಕ್ಷೇತ್ರ ಹುಡುಕಿಕೊಂಡು ರಾಜ್ಯದಲ್ಲಿ ತಿರುಗಾಡುತ್ತಿದ್ದಾರೆ. ಕೋಲಾರದ ಜನರಿಗೆ ಇವತ್ತೇ ಹೇಳಲು ಬಯಸ್ತೇನೆ. ಸಿದ್ದರಾಮಯ್ಯ ಅವರನ್ನು ಸೋಲಿಸಿ ಮನೆಗೆ ಕಳುಹಿಸುವುದು ಒಳಿತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.

ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಜೋಶಿ ಕಿಡಿ

ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಜೋಶಿ ಕಿಡಿ

ರಾಜ್ಯದಲ್ಲಿ ಅವರು ಐದು ವರ್ಷ ಸಿಎಂ ಆಗಿದ್ದಾಗ 10, 12 ಬಜೆಟ್ ಮಂಡಿಸಿದ್ದರು. ತಾವೊಬ್ಬರೇ ದೊಡ್ಡ ನಾಯಕ ಅಂತಾ ಹೇಳಿಕೊಳುತ್ತಿದ್ದಾರೆ. ಆದರೆ ಒಂದು ಕ್ಷೇತ್ರದಲ್ಲಿ ಅವರಿಗೆ ನೆಲೆಯೂರಲು ಸಾಧ್ಯವಾಗಿಲ್ಲ. ಒಂದು ಕ್ಷೇತ್ರದಲ್ಲೂ ಸರಿಯಾಗಿ ಕೆಲಸ ಮಾಡಿಲ್ಲ. ಅದರ ಪರಿಣಾಮ ಕ್ಷೇತ್ರ ಬದಲಿಸುತ್ತಾ ಇರುತ್ತಾರೆ. ಜನರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್‌ ವಿರುದ್ಧ ಜಗದೀಶ್‌ ಶೆಟ್ಟರ್‌ ವಾಗ್ದಾಳಿ

ಕಾಂಗ್ರೆಸ್‌ ವಿರುದ್ಧ ಜಗದೀಶ್‌ ಶೆಟ್ಟರ್‌ ವಾಗ್ದಾಳಿ

ದೇಶದಲ್ಲಿ ಕಾಂಗ್ರೆಸ್ ಹೆಸರು ಹೇಳದಷ್ಟು ಅಧೋಗತಿಗೆ ಹೋಗಿದೆ. ಕಾಂಗ್ರೆಸ್‌ ಭವಿಷ್ಯ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ವ್ಯಂಗ್ಯವಾಡಿದರು. ಹಾಗೆಯೇ ಕರ್ನಾಟಕದಲ್ಲೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದ್ದು, ಯಾವುದೇ ಕಾರಣಕ್ಕೋಸ್ಕರ ಜನರು ಕಾಂಗ್ರೆಸ್ ಅನ್ನು ನಂಬುವುದಿಲ್ಲ. ಆದ್ದರಿಂದ ಈಗ ಕಾಂಗ್ರೆಸ್ ಒಡೆದ ಮನೆಯಾಗಿದೆ. ಮೊದಲು ಕಾಂಗ್ರೆಸ್‌ನಲ್ಲಿ ಎರಡು ಪವರ್ ಸೆಂಟರ್ ಇತ್ತು. ಇವಾಗ ಮೂರು ಪವರ್ ಸೆಂಟರ್ ಆಗಿವೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿ ಮೂರು ಪವರ್ ಸೆಂಟರ್ ಆಗಿವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಪವರ್ ಸೆಂಟರ್‌ಗಳಿಂದಲೇ ಕಾಂಗ್ರೆಸ್‌ಗೆ ಅಧೋಗತಿ

ಪವರ್ ಸೆಂಟರ್‌ಗಳಿಂದಲೇ ಕಾಂಗ್ರೆಸ್‌ಗೆ ಅಧೋಗತಿ

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ನವರು ಟಿಕೆಟ್‌ಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಹೋಗುತ್ತಿದಾರೆ. ಈಗ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಸೆಂಟರ್‌ನ ಮಹತ್ವ ಆಗಿದ್ದು, ಪವರ್ ಸೆಂಟರ್‌ಗಳಿಂದಲೇ ಕಾಂಗ್ರೆಸ್ ಅಧೋಗತಿಗೆ ಹೋಗುತ್ತದೆ. ಚುನಾವಣೆ ಬರುವ ಮುಂಚೆಯೇ ಸಿದ್ದರಾಮಯ್ಯ ಎಲ್ಲಿ ಚೇಂಜ್ ಮಾಡುತ್ತಾರೆಯೋ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲಿ ಅಥವಾ ಬದಾಮಿಯಲ್ಲಿ ನಿಲ್ಲಲಿ, ಅದು ಅವರಿಗೆ ಬಿಟ್ಟಿರುವ ವಿಚಾರವಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಆದರೂ ಸ್ಪರ್ಧೆ ಮಾಡಲಿ. ಏನೇ ಆಗಲಿ ಕೋಲಾರದಲ್ಲಿ ಪಕ್ಷದ ಸ್ಥಿತಿ ಏನಾಗಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಲಿ. ಅದಕ್ಕೆ ಅವರು ಸಹ ಯೋಚನೆ ಮಾಡಲು ಸಮರ್ಥರು ಇದ್ದಾರೆ ಎಂದರು.

ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್‌ ಟಾಂಗ್‌

ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್‌ ಟಾಂಗ್‌

ಸ್ಪರ್ಧೆಗೆ ನಿಲ್ಲುವುದಾದರೆ ಅಲ್ಲಿ ನಿಲ್ಲಲಿ, ಅದು ಅವರಿಗೆ ಬಿಟ್ಟಿರುವ ವಿಚಾರ. ಈ ಕುರಿತು ನಾನು ಹೆಚ್ಚಿಗೆ ಏನು ಹೇಳುವುದಿಲ್ಲ. ಬಾದಾಮಿಯಲ್ಲಿ 500,1000 ವೋಟ್‌ನಿಂದ ಆರಿಸಿ ಬಂದವರಾಗಿದ್ದರು. ಆದರೆ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜನ ಸಿದ್ದರಾಮಯ್ಯ ಅವರನ್ನು ರಿಜೆಕ್ಟ್ ಮಾಡಿದ್ದರು. ಇದು ಸಹ ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದರೂ ಸೋತಂತೆ.

ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದವರಿಗೆ ಹೆದರಿಕೆ ಇದೆ ಅಂದರೆ, ಅವರ ವ್ಯಕ್ತಿತ್ವ ಅರ್ಥ ಆಗತ್ತದೆ. ಇದು ಅವರ ಅಸಮರ್ಥತೆಯನ್ನು ತಿಳಿಸಿಕೊಡುತ್ತದೆ. ಭಾರತೀಯ ಜನತಾ ಪಕ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಈ ನಾಡಿನ ಜನತೆಗೆ ಕೊಟ್ಟಿದೆ.‌ ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ನಡೆದಿದ್ದು, ಮುಂದಿನ ಚುನಾಚಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+