ವರಸೆಯಲ್ಲಿ ಅಣ್ಣ-ತಂಗಿ; ಮದುವೆಗೆ ಒಪ್ಪದ್ದಕ್ಕೆ "ಅಶ್ಲೀಲ"ಬ್ಲಾಕ್ ಮೇಲ್

ಹುಬ್ಬಳ್ಳಿ, ಜನವರಿ 11: ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡದಿದ್ದರೆ ಆಕೆಯೊಂದಿಗಿನ ಖಾಸಗಿ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಕುಟುಂಬವೊಂದಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ ಯುವ ಮುಖಂಡನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪಾಂಡಿಚೇರಿಯ ಬಿಜೆಪಿಯ ಯುವ ಮುಖಂಡ ರಾಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹುಬ್ಬಳ್ಳಿಯ ದೂರದ ಸಂಬಂಧಿಯೊಬ್ಬರ ಮಗಳನ್ನು ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ ರಾಕಿ ಆಕೆಯೊಂದಿಗೆ ಸರಸ ಸಲ್ಲಾಪಗಳಲ್ಲಿ ತೊಡಗಿದ್ದನ್ನು ವೀಡಿಯೋ ಮಾಡಿಕೊಂಡಿದ್ದಾನೆ.

ಯುವತಿಯನ್ನು ಮದುವೆ ಮಾಡಿಕೊಡುವಂತೆ ಅನೇಕ ಬಾರಿ ಆ ಕುಟುಂಬವನ್ನು ಒತ್ತಾಯಿಸಿದ್ದಾನೆ. ವರಸೆಯಲ್ಲಿ ರಾಕಿ ಮತ್ತು ಆ ಯುವತಿ ಅಣ್ಣ-ತಂಗಿ ಆಗಬೇಕಿದ್ದ ಕಾರಣದಿಂದ ವಿವಾಹಕ್ಕೆ ಯುವತಿ ಮನೆಯವರು ನಿರಾಕರಿಸಿದ್ದಾರೆ. ಆದರೆ ಮದುವೆಯಾದರೆ ಆಕೆಯನ್ನೇ ಮದುವೆಯಾಗುವುದಾಗಿ ಪಟ್ಟುಹಿಡಿದಿದ್ದ ರಾಕಿ ಯುವತಿಯ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಲು ಆರಂಭಿಸಿದ್ದಾನೆ.

Pondicherry Bjp Youth Leader Arrester For Blackmailing Girl

ಕೆಲ ವಿಡಿಯೋ ಮತ್ತು ಚಿತ್ರಗಳನ್ನು ಯುವತಿಯ ತಂದೆ ಮೊಬೈಲ್‌ಗೆ ಹರಿಬಿಟ್ಟಿದ್ದಾನೆ. ಅಲ್ಲದೇ, ಹಲವು ವ್ಯಾಟ್ ಆಪ್ ಗ್ರೂಪ್‌ ನಲ್ಲಿಯೂ ವಿಡಿಯೋ ಫೋಟೋಗಳನ್ನು ಹರಿಬಿಟ್ಟಿದ್ದಾನೆ. ಇದರಿಂದ ನೊಂದ ಯುವತಿಯ ತಂದೆ ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಯುವತಿಯ ತಂದೆಯೂ ಪಾಂಡಿಚೇರಿ ಮೂಲದವರಾಗಿದ್ದು, ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದುಳಿದಿದ್ದಾರೆ. ಅವರ ಕುಟುಂಬ ಪಾಂಡಿಚೇರಿಯಲ್ಲಿಯೇ ವಾಸವಾಗಿದ್ದು, ಘಟನೆ ನಂತರ ಇಡೀ ಕುಟುಂಬ ಹುಬ್ಬಳ್ಳಿಗೆ ಬಂದಿದೆ. ರಾಕಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಯುವತಿಯ ತಂದೆ ಮತ್ತು ಕುಟುಂಬಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+