ಶೀರೂರು ಶ್ರೀಗಳ ಅಂತಿಮ ಕ್ರಿಯೆಗೆ ಹೋಗುವುದಿಲ್ಲವೆಂದ ಪೇಜಾವರ ಶ್ರೀ

Recommended Video

      Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಅಂತ್ಯಸಂಸ್ಕಾರದಲ್ಲಿ ಪೇಜಾವರ ಶ್ರೀಗಳು ಇರೋದಿಲ್ವಂತೆ

      ಹುಬ್ಬಳ್ಳಿ, ಜುಲೈ 19: ಅಷ್ಟಮಠದಲ್ಲಿ ಒಂದಾದ ಶೀರೂರು ಮಠದ ಶ್ರೀಗಳ ಅಂತಿಮ ಕಾರ್ಯಕ್ಕೆ ಅಷ್ಟಮಠದ ಹಿರಿಯ ಶ್ರೀಗಳಾದ ಪೇಜಾವರ ಶ್ರೀಗಳು ಹೋಗಲು ನಿರಾಸಕ್ತಿ ತೋರಿದ್ದಾರೆ.

      ಹುಬ್ಬಳ್ಳಿಯಲ್ಲಿರುವ ಪೇಜಾವರ ಶ್ರೀಗಳು, ವೈಯಕ್ತಿಕವಾಗಿ ನಾನು ಅಂತ್ಯಕ್ರಿಯೆಯಲ್ಲಿ ಹೋಗುವುದಿಲ್ಲ ಎಂದಿರುವ ಅವರು, ಆಹ್ವಾನ ಬಂದರೆ ನೋಡುವೆ ಎಂದು ನಿರಾಸಕ್ತಿ ತೋರಿದ್ದಾರೆ.

      ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲೇ ಬೇಕು ಎಂಬ ನಿಯಮ ಇಲ್ಲ ಎಂದ ಅವರು, ಇಲ್ಲಿಂದಲೇ ಅವರ ಆತ್ಮಕ್ಕೆ ಶಾಂತಿ ಕೋರುವುದಾಗಿ ಹೇಳಿದ್ದಾರೆ.

      Pejawara Seer not participating in Shiroor Seers cremation

      ಶೀರೂರು ಶ್ರೀಗಳ ವಿರುದ್ಧ ಪೇಜಾವರ ಶ್ರೀಗಳು ಸೇರಿದಂತೆ ಇನ್ನೂ 5 ಶ್ರೀಗಳಿಗೆ (ಪುತ್ತಿಗೆ ಶ್ರೀಗಳು ಹೊರತುಪಡಿಸಿ) ಅಸಮಾಧಾನವಿತ್ತು. ಶೀರೂರು ಶ್ರೀಗಳು ನಿಧನರಾದ ನಂತರವೂ ಅಸಮಾಧಾನ ಆರಿಲ್ಲವೆಂಬುದು ಪೇಜಾವರ ಶ್ರೀಗಳ ಮಾತಿನಿಂದ ತಿಳಿಯುತ್ತಿದೆ.

      ಶೀರೂರು ಶ್ರೀಗಳ ಕೊಲೆ ಆಗಿರಬಹುದು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು, ಅವರನ್ನು ಕೊಲ್ಲುವ ಅವಶ್ಯಕತೆ ಯಾರಿಗಾದರೂ ಏಕೆ ಇರಲು ಸಾಧ್ಯ, ಅವರ ಸಹೋದರರೇ ಅವರಿಗೆ ಫುಡ್ ಫಾಯ್ಸನ್ ಆಗಿದೆಯೆಂದು ಹೇಳಿದ್ದಾರೆ ಎಂದ ಅವರು ಕೊಲೆಯ ಸದ್ದಿಯನ್ನು ತಳ್ಳಿಹಾಕಿದ್ದಾರೆ.

      ಶೀರೂರು ಮಠವು ಅಷ್ಟ ಮಠಗಳಲ್ಲಿ ಒಂದಾಗಿದ್ದು ಅಷ್ಟಮಠಗಳ ಶ್ರೀಗಳಲ್ಲಿ ಪೇಜಾವರ ಶ್ರೀಗಳು ಪ್ರಮುಖರೂ, ಹಿರಿಯರೂ ಆಗಿದ್ದಾರೆ. ಆದರೆ ಈಗ ನಿಧನರಾಗಿರುವ ಶೀರೂರು ಶ್ರೀಗಳು ಈ ಮುಂಚೆ ಪೇಜಾವರ ಶ್ರೀಗಳನ್ನು ಸೇರಿದಂತೆ ಅಷ್ಟಮಠದ ಆರು ಶ್ರೀಗಳ (ಪುತ್ತಿಗೆ ಮಠ ಹೊರತುಪಡಿಸಿ) ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+