National Youth Festival 2023 : ಹುಬ್ಬಳ್ಳಿ- ಧಾರವಾಡ ನಡುವೆ ವಿಶೇಷ ರೈಲು ಸಂಚಾರ, ವೇಳಾಪಟ್ಟಿ

ಹುಬ್ಬಳ್ಳಿ, ಜನವರಿ 11: ಹುಬ್ಬಳ್ಳಿಯಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಜನರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನಡೆಯುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಧಾರವಾಡ ಅವಳಿ ನಗರ ನಿಲ್ದಾಣಗಳ ನಡುವೆ ರಿಸರ್ವ್‌ ಮಾಡದ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ನಗರದಲ್ಲಿ ಖಾಸಗಿ ವಾಹನಗಳ ಸಂಚಾರದ ದಟ್ಟಣೆ ಇರದೇ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರ ದರದಲ್ಲಿ ಪ್ರಯಾಣ ಸೌಲಭ್ಯ ದೊರೆಯುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

07369/07370 ರೈಲು ಸಂಖ್ಯೆ ಗಾಡಿಯು ಧಾರವಾಡ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ- ಧಾರವಾಡ (ಒಂದು ಬಾರಿ) ಜನವರಿ 11ರಂದು ಧಾರವಾಡ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ಗಾಡಿ ಸಂಖ್ಯೆ 07369 ವಿಶೇಷ ರೈಲು ಮಧ್ಯಾಹ್ನ 12.30ಕ್ಕೆ ಹೊರಟು ಅದೇ ದಿನ 1.05 ಗಂಟೆಗೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿಗೆ ತಲುಪಲಿದೆ. ಅದೇ ರೀತಿ ಮರಳಿ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ - ಧಾರವಾಡ ಗಾಡಿ ಸಂಖ್ಯೆ 07370 ವಿಶೇಷ ರೈಲು ಹುಬ್ಬಳ್ಳಿಯಿಂದ ಸಂಜೆ 4 ಗಂಟೆಗೆ ಹೊರಟು ಸಂಜೆ 4.28ಕ್ಕೆ ಧಾರವಾಡ ತಲುಪಲಿದೆ.

ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುತ್ತದೆ

ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುತ್ತದೆ

ಗಾಡಿ ಸಂಖ್ಯೆ 07371/ 07372 ಧಾರವಾಡ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ- ಧಾರವಾಡ ಒಂದು ಬಾರಿ ಜನವರಿ 12ರಂದು ಧಾರವಾಡ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ 07371 ವಿಶೇಷ ರೈಲು ಮಧ್ಯಾಹ್ನ 12 ಗಂಟೆಗೆ ಧಾರವಾಡದಿಂದ ಹೊರಟು 12.30ಕ್ಕೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ರೈಲು ಸಂಖ್ಯೆ 07372 ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ಧಾರವಾಡ ವಿಶೇಷ ರೈಲು ಸಂಜೆ 6 ಗಂಟೆಗೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿಯಿಂದ ಹೊರಟು ಸಂಜೆ 6.30ಕ್ಕೆ ಧಾರವಾಡ ತಲುಪಲಿದೆ.

ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಗೆ ಬರುತ್ತದೆ

ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಗೆ ಬರುತ್ತದೆ

ಗಾಡಿ ಸಂಖ್ಯೆ 07373/07373 ಧಾರವಾಡ- ಎಸ್‌.ಎಸ್‌.ಎಸ್‌ ಹುಬ್ಬಳ್ಳಿ-ಧಾರವಾಡ ಒಂದು ಬಾರಿ ಜನವರಿ 12ರಂದು ಧಾರವಾಡ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ಗಾಡಿ ಸಂಖ್ಯೆ 07373 ವಿಶೇಷ ರೈಲು ಮಧ್ಯಾಹ್ನ 12.30ಕ್ಕೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 1 ಗಂಟೆಗೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಹಿಂದುರುಗುವಾಗ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ಧಾರವಾಡ ಗಾಡಿ ಸಂಖ್ಯೆ 07374 ವಿಶೇಷ ರೈಲು ಹುಬ್ಬಳ್ಳಿಯಿಂದ ಸಾಯಂಕಾಲ 6.30 ಗಂಟೆಗೆ ಹೊರಟು ಅದೇ ದಿನ ಸಂಜೆ 7 ಗಂಟೆಗೆ ಧಾರವಾಡ ತಲುಪಲಿದೆ.

1.30 ಗಂಟೆಗೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿಗೆ

1.30 ಗಂಟೆಗೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿಗೆ

ಗಾಡಿ ಸಂಖ್ಯೆ 07375/07376 ಧಾರವಾಡ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ - ಧಾರವಾಡ ಒಂದು ಬಾರಿ ಜನವರಿ 12ರಂದು ಧಾರವಾಡ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ಗಾಡಿ ಸಂಖ್ಯೆ 07375 ವಿಶೇಷ ರೈಲು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 1.30 ಗಂಟೆಗೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಹಿಂದುರುಗುವಾಗ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ಧಾರವಾಡ ಗಾಡಿ ಸಂಖ್ಯೆ 07376 ವಿಶೇಷ ರೈಲು ಹುಬ್ಬಳ್ಳಿಯಿಂದ ಸಾಯಂಕಾಲ 7 ಗಂಟೆಗೆ ಹೊರಟು ಅದೇ ದಿನ ಸಂಜೆ 7.30 ಗಂಟೆಗೆ ಧಾರವಾಡ ತಲುಪಲಿದೆ.

ಅಂಗವಿಕಲಸ್ನೇಹಿ ಸೇರಿದಂತೆ 18 ಬೋಗಿ

ಅಂಗವಿಕಲಸ್ನೇಹಿ ಸೇರಿದಂತೆ 18 ಬೋಗಿ

ಈ ವಿಶೇಷ ರೈಲುಗಳು ಸ್ಲೀಪರ್‌ ಕೋಚ್‌, ಸಾಮಾನ್ಯ, ದ್ವಿತೀಯ ದರ್ಜೆ ಬೋಗಿಗಳು ಮತ್ತು ದ್ವಿತೀಯ ದರ್ಜೆ ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ಗಳೊಂದಿಗೆ ಅಂಗವಿಕಲಸ್ನೇಹಿ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ. ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಸಂಚರಿಸುವ ಈ ರೈಲುಗಳು ತಡೆರಹಿತವಾಗಿದೆ. ಹಾಗಾಗಿ ರೈಲು ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+