NWKRTC New Bus: ಇಂದಿನಿಂದ ಉತ್ತರ ಕರ್ನಾಟಕದಲ್ಲಿ 127 ಆಧುನಿಕ ಹೊಸ ಬಸ್‌ಗಳ ಸಂಚಾರ, ವಿಶೇಷತೆಗಳು
ಹುಬ್ಬಳ್ಳಿ, ನವೆಂಬರ್ 15: ಕರ್ನಾಟಕದ 'ವಾಯುವ್ಯ ಕರ್ನಾಟ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) ಅತ್ಯಧಿಕ ಬಸ್‌ಗಳು ಬೇಕು. ಉತ್ತಮವಾದ ಹೊಸ ಬಸ್‌ಗಳಿಗೆ ಬಹುದಿನಗಳಿಂದ ಬೇಡಿಕೆ ಇತ್ತು. ಅದೀಗ ನೆರವೇರಿದ್ದು, ಸಾರಿಗೆ ಸಚಿವರು ಶುಕ್ರವಾರ ಉತ್ತರ ಕರ್ನಾಟಕ ಭಾಗದಲ್ಲಿ 127 ಹೊಸ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಇವುಗಳ ವಿಶೇಷತೆಗಳೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯ ಎಚ್.ಡಿ.ಬಿ.ಆರ್.ಟಿ.ಎಸ್. ಘಟಕದಲ್ಲಿ ಶುಕ್ರವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ನಡೆಸಲಾಯಿತು. ಈ ವೇಳೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೊಸ ಆಧುನಿಕ ಬಸ್‌ಗಳಿಗೆ ಚಾಲನೆ ನೀಡಿದರು.

ರಾಜ್ಯದ ಜನರಿಗೆ ಅತ್ಯುತ್ತಮ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಅವಧಿ ಮೀರಿದ ಬಸ್‌ಗಳನ್ನು ಸ್ಥಗಿತಗೊಳಿಸಿ ಹೊಸ ಬಸ್‌ಗಳನ್ನು ಖರೀದಿಸಲಾಗುತ್ತದೆ. ಈ ವರ್ಷವು ಹಳೇ ಬಸ್‌ಗಳನ್ನು ಸ್ಕ್ರಾಪ್ಗೆ ಹಾಕಿ, ಬೇಡಿಕೆ ಮತ್ತು ಸಂಚಾರ ದಟ್ಟಣೆಗೆ ಅನುಗುಣವಾಗಿ ಹೊಸ ಬಸ್‌ಗಳು ಸಂಚರಿಸಲಿವೆ ಎಂದು ರಾಮಲಿಂಗಾರೆಡ್ಡಿ ಅವರು ಮಾಹಿತಿ ನೀಡಿದರು.
ಬಸ್ ವಿಶೇಷತೆಗಳು ಏನು?
ಇಂದಿನಿಂದ ಹುಬ್ಬಳ್ಳಿಯಿಂದ ವಿವಿಧ ಜಿಲ್ಲೆಗಳಿಗೆ, ಬೇರೆ ಭಾಗಗಳಿಗೆ ಈ ವಿನೂತನ ಬಸ್‌ಗಳು ಸಂಚರಿಸಲಿವೆ. ಭಾರತ್ ಸ್ಟೇಜ್ 6 ಮಾದರಿ ಬಸ್‌ಗಳು ಇವಾಗಿವೆ. ಇದರಲ್ಲಿ ಸಿಸಿ ಕ್ಯಾಮರಾಗಳು, ಎಲ್‌ಇಡಿ ಸ್ಕ್ರೀನ್ಗಳು ಮತ್ತು ಸುರಕ್ಷತಾ ಬಟನ್‌ಗಳು ಒಳಗೊಂಡಿವೆ. ಒಳಾಂಗಣ ವಿಶಿಷ್ಟವಾಗಿದೆ.
ಉತ್ತರ ಕರ್ನಾಟಕ ಭಾಗಕ್ಕೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಹೊಡೆದು ಬಿಟ್ಟ ಬಸ್‌ಗಳನ್ನೇ ಕೊಡುತ್ತಾರೆ. ಯಾವಾಗಲೂ ಇಲ್ಲಿಗೆ ಹಳೇಯ ಬಸ್‌ಗಳನ್ನು ನೀಡುತ್ತಾರೆ. ಇದರಿಂದ ಹಳ್ಳಿ ಭಾಗದಲ್ಲಿ ಬಸ್‌ಗಳು ಕೆಟ್ಟು ನಿಲ್ಲುವ ಆರೋಪಗಳು ಮೊದಲಿಂದಲೂ ಕೇಳಿ ಬರುತ್ತಿವೆ. ವಿದ್ಯಾರ್ಥಿಗಳು, ಮಹಿಳೆಯರಿಗೆ, ಮಕ್ಕಳಿಗೆ ಸಮರ್ಪಕ ಬಸ್ ಸಂಚಾರ, ಹೊಸ ಬಸ್ ಗಳ ಅಗತ್ಯವಿತ್ತು. ಸದ್ಯ ಒಂದ ಹಂತದಲ್ಲಿ ಹೊಸ ಬಸ್ ಬಿಟ್ಟಿರುವುದು ಈ ಭಾಗದ ಜನರಲ್ಲಿ ಖುಷಿ ಹೆಚ್ಚಿಸಿದೆ.












Click it and Unblock the Notifications