NWKRTC: ಬಸ್ ದರ ಏರಿಕೆ, ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳ ಪ್ರಯಾಣ ದರ
ಹುಬ್ಬಳ್ಳಿ, ಜನವರಿ 05: ಕರ್ನಾಟಕ ಸರ್ಕಾರ ಜನವರಿ 5ರ ಭಾನುವಾರದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದೆ. ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿವೆ. ಭಾನುವಾರ ಬೆಳಗ್ಗೆಯಿಂದಲೇ ಎಲ್ಲಿಂದ?, ಎಲ್ಲಿಗೆ? ಎಷ್ಟು ದರ? ಎಂಬ ಚರ್ಚೆಗಳು ಜೋರಾಗಿವೆ. ಪ್ರಯಾಣ ದರ, ಚಿಲ್ಲರೆ ಸಮಸ್ಯೆ ಮುಂದಿಟ್ಟುಕೊಂಡು ಪ್ರಯಾಣಿಕರು ನಿರ್ವಾಹಕರ ಜೊತೆ ವಾಗ್ವಾದ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸ) ಭಾನುವಾರದಿಂದಲೇ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಹುಬ್ಬಳ್ಳಿಯಿಂದ ವಿವಿಧ ಸ್ಥಳಗಳಿಗೆ ತೆರಳುವ ಬಸ್‌ಗಳ ದರದಲ್ಲಿ ಬದಲಾವಣೆಯಾಗಿದೆ.

ಕರ್ನಾಟಕ ಸರ್ಕಾರ ತನ್ನ ಶನಿವಾರದ ಆದೇಶದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ. ಈ ಆದೇಶವನ್ನು ಸಚಿವ ಸಂಪುಟವು ದಿನಾಂಕ 02.01.2025ರಲ್ಲಿ ನೀಡಿರುವ ಅನುಮೋದನೆಯನ್ವಯ ಹೊರಡಿಸಿದೆ ಎಂದು ತಿಳಿಸಿದೆ.
ಹುಬ್ಬಳ್ಳಿಯಿಂದ ಬೆಂಗಳೂರು, ಬೆಳಗಾವಿ, ವಿಜಯಪುರ, ಹೈದರಾಬಾದ್, ಪಣಜಿ, ಧರ್ಮಸ್ಥಳ, ಕೊಪ್ಪಳ, ಕಲಬುರಗಿ, ಹಾವೇರಿ, ದಾವಣಗೆರೆ, ಮಂತ್ರಾಲಯ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳುವ ಬಸ್‌ಗಳ ಪ್ರಯಾಣ ದರಗಳು ಭಾನುವಾರದಿಂದಲೇ ಬದಲಾಗಿದೆ. ಯಾವ ಸ್ಥಳಕ್ಕೆ ಎಷ್ಟು ದರ? ಎಂಬ ಮಾಹಿತಿ ಇಲ್ಲಿದೆ.
ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಿಗೆ ಮೂಲ ಪ್ರಯಾಣ ದರ, ಟೋಲ್ ಫೀ, ಅಪಘಾತ ಪರಿಹಾರ ನಿಧಿ ಶುಲ್ಕ ಸೇರಿ ಒಟ್ಟು ಪ್ರಸ್ತುತ ಮತ್ತು ಪರಿಷ್ಕೃತ ಪ್ರಯಾಣ ದರ ಎಷ್ಟು?.....
* ಹುಬ್ಬಳ್ಳಿ - ಬೆಂಗಳೂರು: 499 ರಿಂದ 563 ರೂ.ಗಳಿಗೆ ಏರಿಕೆ
* ಹುಬ್ಬಳ್ಳಿ - ವಿಜಯಪುರ: 223 ರಿಂದ 256 ರೂ.ಗಳು
* ಹುಬ್ಬಳ್ಳಿ - ಬೆಳಗಾವಿ: 129 ರಿಂದ 146 ರೂ.ಗಳು
* ಹುಬ್ಬಳ್ಳಿ - ಗದಗ: 77 ರಿಂದ 86 ರೂ.ಗಳು
* ಹುಬ್ಬಳ್ಳಿ - ಶಿರಸಿ: 109 ರಿಂದ 126 ರೂ.ಗಳು
* ಹುಬ್ಬಳ್ಳಿ - ಕಾರವಾರ: 200 ರಿಂದ 228 ರೂ.ಗಳು
* ಹುಬ್ಬಳ್ಳಿ - ಹಾವೇರಿ: 94 ರಿಂದ 106 ರೂ.ಗಳು
* ಹುಬ್ಬಳ್ಳಿ - ಬಾಗಲಕೋಟೆ: 154 ರಿಂದ 177 ರೂ.
* ಹುಬ್ಬಳ್ಳಿ - ಇಲಕಲ್: 179 ರಿಂದ 206 ರೂ.ಗಳು
* ಹುಬ್ಬಳ್ಳಿ - ಹೈದರಾಬಾದ್: 604 ರಿಂದ 697 ರೂ.ಗಳು
* ಹುಬ್ಬಳ್ಳಿ - ಪಣಜಿ: 199 ರಿಂದ 219 ರೂ.ಗಳು
* ಹುಬ್ಬಳ್ಳಿ - ಮಂತ್ರಾಲಯ: 449 ರಿಂದ 508 ರೂ.ಗಳು
* ಹುಬ್ಬಳ್ಳಿ - ಪುಣೆ: 592 ರಿಂದ 622 ರೂ.ಗಳು
* ಹುಬ್ಬಳ್ಳಿ - ಧರ್ಮಸ್ಥಳ: 519 ರಿಂದ 592 ರೂ.ಗಳು
* ಹುಬ್ಬಳ್ಳಿ - ಕೊಪ್ಪಳ: 157 ರಿಂದ 176 ರೂ.ಗಳು
* ಹುಬ್ಬಳ್ಳಿ - ಕಲಬುರಗಿ: 427 ರಿಂದ 488 ರೂ.ಗಳು
* ಹುಬ್ಬಳ್ಳಿ - ಕಲಘಟಗಿ: 37 ರಿಂದ 43 ರೂ.ಗಳು
* ಹುಬ್ಬಳ್ಳಿ - ಕುಂದಗೋಳ: 32 ರಿಂದ 37 ರೂ.ಗಳು
* ಹುಬ್ಬಳ್ಳಿ - ಲಕ್ಷ್ಮೇಶ್ವರ: 61 ರಿಂದ 70 ರೂ.ಗಳು
* ಹುಬ್ಬಳ್ಳಿ - ನವಲಗುಂದ: 45 ರಿಂದ 53 ರೂ.ಗಳು
* ಹುಬ್ಬಳ್ಳಿ - ಹಾವೇರಿ: 94 ರಿಂದ 106 ರೂ.ಗಳು
* ಹುಬ್ಬಳ್ಳಿ - ದಾವಣಗೆರೆ: 182 ರಿಂದ 205 ರೂ.ಗಳು
* ಹುಬ್ಬಳ್ಳಿ - ಶಿವಮೊಗ್ಗ: 226 ರಿಂದ 260 ರೂ.ಗಳು
* ಹುಬ್ಬಳ್ಳಿ- ಬೆಳಗಾವಿ: 130 ರಿಂದ 150 ರೂ.ಗಳು.












Click it and Unblock the Notifications