ವಿದ್ಯಾರ್ಥಿನಿ ಮೈಮುಟ್ಟಿದ ಶಾಲಾ ವಾಹನ ಡ್ರೈವರ್; ಕ್ರಮಕ್ಕೆ ಪೋಷಕರ ಆಗ್ರಹ

ಹುಬ್ಬಳ್ಳಿ, ಡಿಸೆಂಬರ್ 16: ಹತ್ತನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಖಾಸಗಿ ಶಾಲಾ ವಾಹನದ ಚಾಲಕ ಅನುಚಿತವಾಗಿ ವರ್ತಿಸಿದ್ದು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ವಿವೇಕಾನಂದ ನಗರದಲ್ಲಿರುವ ಬೆನಕ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಜೊತೆ ಶಾಲಾ ವಾಹನ ಚಾಲಕ ಅನುಚಿತವಾಗಿ ವರ್ತಿಸಿದ್ದನೆಂದು ಡೇವಿಡ್ ಎಂಬಾತನನ್ನು ವ್ಯಕ್ತಿಯೊಬ್ಬರು ಥಳಿಸಿದ್ದರು. ಈ ವೀಡಿಯೋ ಅನಾಮಧೇಯ ವ್ಯಕ್ತಿಯಿಂದ ವೈರಲ್ ಆಗಿತ್ತು.

ಇದರ ಹಿನ್ನೆಲೆಯಲ್ಲೇ, ಇಂದು ಬೆಳ್ಳಂಬೆಳಿಗ್ಗೆ ಬೆನಕ ಶಾಲೆಯ ವಾಹನ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪಾಲಕರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಲಕರು ಪಟ್ಟು ಹಿಡಿದರು.

Misbehave With Student By School Vehicle Driver In Hubballi

"ಈ ಬೆಳವಣಿಗೆಯಿಂದ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ" ಎಂದು ಪಾಲಕರು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+