ಸಿಎಂ ಹುದ್ದೆಯನ್ನು ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತೆಗೆದುಕೊಂಡಿದ್ದಾರಾ..?: ಶ್ರೀರಾಮುಲು
ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಸಿಎಂ ಹುದ್ದೆ ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ ಎಂದು ಸಚಿವ ಶ್ರೀರಾಮುಲು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ 10: ಬ್ರಾಹ್ಮಣರು ಕೂಡ ಸಿಎಂ ಆಗಬಹುದು. ಆಗಬಾರದು ಅಂದರೆ ಹೇಗೆ. ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ. ಸಿಎಂ ಹುದ್ದೆ ಕುಮಾರಸ್ವಾಮಿ ಕುಟುಂಬದವರು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ ಎಂದು ಸಚಿವ ಶ್ರೀರಾಮುಲು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಇವರೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ಏನು ಇಲ್ಲ. ಸಂವಿಧಾನದಲ್ಲಿ ಯಾವ ಜಾತಿ ಅವರು ಕೂಡಾ ಸಿಎಂ ಆಗಬಹುದು. ಪರಿಶಿಷ್ಟ ಪಂಗಡದವರು, ಬ್ರಾಹ್ಮಣರು ಸಿಎಂ ಆಗಬಹುದು ಎಂದರು.
ಕುಮಾರಸ್ವಾಮಿ ಪ್ರಹ್ಲಾದ್ ಜೋಶಿ ಪೇಶ್ವೆ ಸಂಸ್ಕೃತಿ ಎಂದು ಹೇಳ್ತಾರೆ ಎಂಬುವಂತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಈ ರೀತಿ ಮಾತನಾಡುತ್ತಾರೆ ಎಂದು ನಾವು ಯಾರೂ ತಿಳಿದುಕೊಂಡಿರಲಿಲ್ಲ. ಕುಮಾರಸ್ವಾಮಿ ಈ ರೀತಿ ಮಾತನಾಡುವುದು ಬಿಡಬೇಕು. ವೈಯಕ್ತಿಕವಾದ ಟೀಕೆ ಮಾಡಬಾರದು ಎಂದು ಅವರು ಹೇಳಿದರು.

ಪ್ರಹ್ಲಾದ್ ಜೋಶಿ ಮುಖ್ಯಮಂತ್ರಿಯಾಗುತ್ತಾರಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ, ರಾಜ್ಯ ರಾಜ್ಯ ಕಾರಣದಲ್ಲಿ ಚರ್ಚೆ ಆಗಿಲ್ಲ. ಜೋಶಿ ಇವತ್ತು ಬಹಳ ಶಕ್ತಿವಂತ ನಾಯಕರು. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುವುದು ಸರಿ ಅಲ್ಲ. ಜೋಶಿ ಅವರನ್ನು ಕೇವಲ ಬ್ರಾಹ್ಮಣರೆಂದು ನಾವು ನೋಡುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಪ್ರಹ್ಲಾದ್ ಜೋಶಿ ನಮ್ಮ ಜೊತೆ ನಿಂತಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಪರ ಕುಮಾರಸ್ವಾಮಿ ಒಲೈಕೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಪರಿಸ್ಥಿತಿ ದುರಪಯೋಗ ಮಾಡಿಕೊಳ್ಳೊದು ಸರಿಯಲ್ಲ ಎಂದರು. ಇನ್ನು ನಾನು ಬಳ್ಳಾರಿ ಇಂದ ಸ್ಪರ್ದೆ ಮಾಡುತ್ತೇನೆ ಎಂದ ಸಚಿವ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರು ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. ಇನ್ನೇನಿದ್ದರೂ ಚುನಾವಣೆ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದು ಮಾಹಿತಿ ನೀಡಿದರು.












Click it and Unblock the Notifications