ಬಿಜೆಪಿಗೆ ಮತ ಹಾಕಿ ಋಣ ತೀರಿಸಿ: ಪಂಚಮಸಾಲಿ ಸಮುದಾಯಕ್ಕೆ ಕರೆ ನೀಡಿದ ಸಿ.ಸಿ ಪಾಟೀಲ್
ಹುಬ್ಬಳ್ಳಿ, ಏಪ್ರಿಲ್ 5: ನಾಳೆ( ಏಪ್ರಿಲ್ 6) ಕರ್ನಾಟಕದ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ, ಒಳ ಮೀಸಲಾತಿಯನ್ನು ಬಸವರಾಜ ಬೊಮ್ಮಾಯಿ ಅನುಷ್ಠಾನಕ್ಕೆ ತಂದಿದ್ದಾರೆ. ಇದು ಐತಿಹಾಸಿಕ ನಿರ್ಧಾರ ಎಂದು ಸಚಿವ ಸಿ.ಸಿ ಪಾಟೀಲ್ ಒಳ ಮೀಸಲಾತಿ ಅನುಷ್ಠಾನಕ್ಕೆ ತಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೊಗಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ದಲಿತ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿತ್ತು. ಐದು ವರ್ಷಕ್ಕೊಮ್ಮೆ ಅವರನ್ನ ಬಾವಿಯಿಂದ ಹೊರಗೆ ತಗೆದು ವೋಟ್ ಹಾಕಿಸಿಕೊಂಡು ಮತ್ತೆ ಬಾವಿಯೊಳಗೆ ತಳುತ್ತಿದ್ದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಪರಿಶಿಷ್ಟ ಜಾತಿ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಆಗಿದೆ. ಹೀಗಾಗಿ ಪರಿಶಿಷ್ಟ ಜನಾಂಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅಭಿನಂದನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮೀಸಲಾತಿ ಹೆಚ್ಚಳ ವಿಚಾರ ಚುನಾವಣಾ ಸರಕು ಆಯ್ತಾ.? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಮುಖ್ಯಮಂತ್ರಿಗಳು ಮೀಸಲಾತಿ ನೀಡಿದ್ದಾರೆ. ಕಮಲಕ್ಕೆ ಮತ ಹಾಕುವುದರ ಮೂಲಕ ನಮ್ಮ ಜನ ಋಣ ತೀರಸಬೇಕು ಎಂದು ಸಿ.ಸಿ ಪಾಟೀಲ್ ಹೇಳಿದ್ದಾರೆ.
ವೀರಶೈವ ಲಿಂಗಾಯತರು, ಒಕ್ಕಲಿಗರು, ದಲಿತರು ಇವಿಎಂ ಯಂತ್ರದಲ್ಲಿ ಕಮಲಕ್ಕೆ ಮತ ಒತ್ತಬೇಕು. ಕಮಲಕ್ಕೆ ಮತ ಒತ್ತಿ ಋಣ ತೀರಸಬೇಕು. ನಮ್ಮ ಸಮುದಾಯದವರು ನೂರಕ್ಕೆ ನೂರು ನಮಗೆ ಮತ ಹಾಕುತ್ತಾರೆ ಎಂದು ಪರೋಕ್ಷವಾಗಿ ಮೀಸಲಾತಿ ಕೊಟ್ಟಿದ್ದೇವೆ ನಮಗೆ ಮತ ಹಾಕಬೇಕೆಂದ ಸಿಸಿ ಪಾಟೀಲ್ ಹೇಳಿದ್ದಾರೆ.

2023ರ ಚುನಾವಣೆಯಲ್ಲಿ ಮತ ಹಾಕುವ ಮೂಲಕ ಬಸವರಾಜ ಬೊಮ್ಮಾಯಿಗೆ ಸನ್ಮಾನ ಮಾಡಲಾಗುವುದು. ಹೂವಿನ ಮಾಲೆ ಹಾಕೋದಕ್ಕಿಂತ ಮತ ಹಾಕಬೇಕು. ಹಿಂದೂ ಸಮಾಜದಲ್ಲಿ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯ ಇದೆ. ಉಪಕಾರ ತೆಗೆದುಕೊಂಡಿದ್ದೇವೆ. ಮತ ಹಾಕುದರ ಮೂಲಕ ಕೃತಜ್ಞತೆ ಸಲ್ಲಿಸಬೇಕು ಎಂದು ಸಿ.ಸಿ ಪಾಟೀಲ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಪಂಚಮಸಾಲಿ ಸಮುದಾಯ ಏಪ್ರಿಲ್ 6ರಂದು ಹುಬ್ಬಳ್ಳಿಯಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೀಸಲಾತಿ ಹೆಚ್ಚಳ: ಎಸ್‌ಸಿ, ಎಸ್‌ಟಿ ಸಮುದಾಯದಿಂದ ಬಿಜೆಪಿಗೆ ಅಭಿನಂದನಾ ಸಮಾರಂಭ
ಇನ್ನು ಮೀಸಲಾತಿ ಹೆಚ್ಚಳ ಮಾಡಿರುವ ಬಿಜೆಪಿ ಸರ್ಕಾರಕ್ಕೆಅಭಿನಂದನೆ ಸಲ್ಲಿಸಲು ಎಸ್‌ಸಿ, ಎಸ್‌ಟಿ ಸಮಾಜ ಮುಂದಾಗಿದ್ದು, ಏಪ್ರಿಲ್ 6ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅ ಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದರು.
ಗಂಡು ಮೆಟ್ಟಿದ ನಾಡನಲ್ಲಿ ಅಭಿನಂದನಾ ಸಮಾರಂಭ ಮಾಡಲಾಗುತ್ತಿದೆ. ಇನ್ನು ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಈ ಸಮಾರಂಭದಲ್ಲಿ 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಗೋವಿಂದ ಕಾರಜೋಳ ಈ ಹಿಂದೆ ತಿಳಿಸಿದ್ದರು. ಒಟ್ಟಾರೆ ಒಳ ಮೀಸಲಾತಿ ಹಾಗೂ ಮೀಸಲಾತಿ ಹೆಚ್ಚಳ ಮಾಡಿರುವ ಬಿಜೆಪಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಎಸ್‌ಸಿ, ಎಸ್‌ಟಿ ಹಾಗೂ ಪಂಚಮಸಾಲಿ ಸಮುದಾಯ ಮುಂದಾಗಿದೆ.












Click it and Unblock the Notifications