Kiccha Sudeep: ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚನಿಂದ ಮತಬೇಟೆ ಶುರು: ಶೆಟ್ಟರ್‌ಗೆ ಠಕ್ಕರ್ ಕೊಡಲು ಬಿಜೆಪಿ ಪ್ಲಾನ್
ಹುಬ್ಬಳ್ಳಿ, ಏಪ್ರಿಲ್, 28: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಪರ ಕಿಚ್ಚ ಸುದೀಪ್ ರೋಡ್ ಶೋ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಠಕ್ಕರ್ ಕೊಡಲು ಮುಂದಾದ ಬಿಜೆಪಿ ಮುಂದಾಗಿದೆ. ಅಲ್ಲದೆ ಕಿಚ್ಚ ಸುದೀಪ್ ಮೂಲಕ ಮೂಲಕ ಯುವ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಭರ್ಜರಿ ಪ್ಲಾನ್ ರೂಪಿಸಿದಂತೆ ಕಾಣುತ್ತಿದೆ.

ರಾಜ್ಯಾದ್ಯಂತ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿರುವ ಕಿಚ್ ಸುದೀಪ್ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ. ರಾಜಾಜಿನಗರದ ದೇವಾಂಗ ಪೇಟೆಯಿಂದ ಬೆಂಗೇರಿಯ ಕಲ್ಲೇಶ್ವರ ದೇವಸ್ಥಾನದವರೆಗೆ ಈ ರೋಡ್ ಶೋ ನಡೆಯಲಿದೆ. ಇನ್ನು ರೋಡ್ ಶೋ ಆರಂಭವಾಗುತ್ತಿದ್ದಂತೆ ನಟ ಸುದೀಪ್ ನೋಡಲು ಅಭಿಮಾನಿಗಳು ಕಿಕ್ಕಿರಿದು ಆಗಮಿಸಿದ್ದು, ಅವರ ಮೇಲೆ ಪುಷ್ಪ ಮಳೆಯನ್ನೇ ಹರಿಸಿದರು.
ಏ. 29ರಂದು ಪ್ರೀಯಾಂಕ್ ಗಾಂಧಿ ರೋಡ್ ಶೋ
ವಿಧಾನಸಭೆ ಚುನಾವಣೆ ಹಿನ್ನೆಲೆ ಏಪ್ರೀಲ್ 29ರಂದು ಶಾಸಕಿ ಕುಸುಮಾವತಿ ಪರ ಮತಯಾಚನೆ ಮಾಡಲು ಕುಂದಗೋಳ ಪಟ್ಟಣಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೀಯಾಂಕ್ ಗಾಂಧಿ ವಾದ್ರಾ ಅವರು ಆಗಮಿಸಲಿದ್ದಾರೆ. ಅಲ್ಲದೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಅಲ್ಲಿನ ಜನರ ಬಳಿ ಚರ್ಚೆ ನಡೆಸಲಿದ್ದಾರೆ ಎಂದು ಕುಂದಗೋಳ ಚುನಾವಣೆ ಉಸ್ತುವಾರಿ ಪಿ.ವಿ.ಮೋಹನ್ ಮಾಹಿತಿ ನೀಡಿದ್ದಾರೆ.
ಕುಂದಗೋಳ ಪಟ್ಟಣದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿ.ವಿ.ಮೋಹನ್, ಏಪ್ರೀಲ್ 29ರಂದು ಬೆಳಗ್ಗೆ 11 ಗಂಟೆಗೆ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಜೆ.ಎಸ್.ಎಸ್.ವಿದ್ಯಾಪೀಠದಿಂದ ಮಾರ್ಕೇಟ್‌ವರೆಗೆ 2 ಕಿಲೋ ಮೀಟರ್ ರೋಡ್ ಶೋ ನಡೆಯಲಿದ್ದು, ಈ ವೇಳೆ 15 ಸಾವಿರಕ್ಕೂ ಅಧಿಕ ಜನ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಮ್.ಎಸ್.ಅಕ್ಕಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮೇಶ್ ಹೆಬಸೂರು, ಗೌಡಪ್ಪಗೌಡ ಪಾಟೀಲ್, ಷಣ್ಮುಖಪ್ಪ ಶಿವಳ್ಳಿ, ಅರವಿಂದಪ್ಪ ಕಟಗಿ, ಜಿ.ಡಿ.ಘೋರ್ಪಡೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.
ನನ್ನ ಅಜ್ಜಿಯ ಸಂಕಷ್ಟದ ಕಾಲದಲ್ಲಿ ಚಿಕ್ಕಮಗಳೂರು ಜನ ನನ್ನ ಅಜ್ಜಿಯ ಕೈ ಹಿಡಿದಿದ್ದರು, ಈಗ ರಾಜ್ಯದ ಜನ ಕಾಂಗ್ರೆಸ್ ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಕೈ ಹಿಡಿಯಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಚಿಕ್ಕಮಗಳೂರು ಜನತೆಯಲ್ಲಿ ಇತ್ತೀಚೆಗಷ್ಟೇ ಮನವಿ ಮಾಡಿದ್ದರು.
ಚಿಕ್ಕಮಗಳೂರಿನಲ್ಲಿ ಬಾಳೆಹೊನ್ನೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶದಲ್ಲಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ಮಾತನಾಡಿದ ಅವರು, ಅಂದು ಸಂಕಷ್ಟದಲ್ಲಿದ್ದಾಗ ಚಿಕ್ಕಮಗಳೂರು ಜನರು ನನ್ನ ಅಜ್ಜಿಯ ಕೈ ಹಿಡಿದಿದರು. ಈಗಲೂ ನಮ್ಮ ಕುಟುಂಬ ಸಂಕಷ್ಟದ ಸಮಯವನ್ನು ಅನುಭವಿಸುತ್ತಿದೆ. ಚಿಕ್ಕಮಗಳೂರನ್ನು ನಾನು ಯಾವತ್ತಿಗೂ ಮರೆಯಲ್ಲ ಎಂದಿದ್ದರು.
ಅಜ್ಜಿ ಬಂದಾಗ ಹೇಗಿತ್ತೋ, ಅದೇ ರೀತಿ ಸೌಂದರ್ಯ ಈಗಲೂ ಇದೆ. ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದು ಹೇಳಿದ್ದರು. ಪ್ರಿಯಾಂಕಾ ಗಾಂಧಿ ಭಾಷಣದ ವೇಳೆ ಮಳೆ ಬಂದಿದ್ದು, ಜನರು ಮಳೆ ಲೆಕ್ಕಿಸದೇ ಭಾಷಣ ಕೇಳಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ನನ್ನ ಸಹೋದರಿಯರು ಮಳೆಯಲ್ಲಿ ನೆನೆದರೂ ಇಲ್ಲೇ ಇದ್ದೀರಾ. ನಿಮಗೆ ತುಂಬಾ ಧನ್ಯವಾದಗಳು ತಿಳಿಸುತ್ತೇನೆ ಎಂದಿದ್ದರು.
ರಾಹುಲ್ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿ ಲೋಕಸಭೆಯಿಂದ ಹೊರಹಾಕಿದ್ದಾರೆ ಎಂದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತೆ ಲೋಕಸಭಾ ಸದಸ್ಯರಾಗಿ ಬರುತ್ತಾರಡ ಎನ್ನುವ ವಿಶ್ವಾಸ ನಮಗೆ ಇದೆ. ಪರಶಿವನ ಆಶೀರ್ವಾದ ಇದೆ. ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಕರ್ನಾಟಕದ ಚುನಾವಣೆ ಸತ್ಯ ಮತ್ತು ಜಯದ ಹೋರಾಟ. ಒಂದು ಮಾತು ಹೇಳ್ತೇನೆ, ನಮಗೆ ಎಲ್ಲ ಕಡೆ ಮೋಸ ಆಗ್ತಿದೆ. ನಿಮ್ಮ ಮತವನ್ನು ನೀಡಿ ವಿಶ್ವಾಸ ತುಂಬಿ. ಕರ್ನಾಟಕದಲ್ಲಿ ಹೇಳುವವರು ಕೇಳುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರಲ್ಲಿ ಮನವಿ ಮಾಡಿದ್ದರು.
ಇದು ಕರ್ನಾಟಕ ಸ್ವಾಭಿಮಾನ ಪರಿಚಯ ಮಾಡುವಂತಹ ಸಮಯ ಎಂದ ಪ್ರಿಯಾಂಕಾ ಗಾಂಧಿ, ಕರ್ನಾಟಕ ಸ್ವಾಭಿಮಾನದ ರಾಜ್ಯ. ಈ ರಾಜ್ಯದ ಪರಿಸ್ಥಿತಿ ಏನು ಅಂತಾ ಪ್ರತಿಯೊಬ್ಬರಿಗೂ ಗೊತ್ತಿದೆ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸುತ್ತೇವೆ. ನಾವು ನಿಮ್ಮಿಂದ ಲೂಟಿ ಮಾಡುವುದಿಲ್ಲ, ನಾವು ನಿಮ್ಮ ಹಣವನ್ನ ನಿಮಗೆ ವಾಪಸ್ ನೀಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ. ಕರ್ನಾಟಕವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ಹೇಳಿದ್ದರು.












Click it and Unblock the Notifications