Bigg Boss Hanumantha: ಫೆ.20, 21ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ, ಕ್ರೀಡೆ- ಸಾಂಸ್ಕೃತಿಕ ಮಹೋತ್ಸವ

ಹುಬ್ಬಳ್ಳಿ, ಫೆಬ್ರವರಿ 15: ರಾಜ್ಯದ ಅವಳಿ ನಗರಗಳು ಮಹತ್ವ ಕ್ಷಣಗಳಿಗೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ. 'ಅಂತರಾಷ್ಟ್ರೀಯ ಗಾಳಿಪಟ ಉತ್ಸವ' ಆಗಸದಲ್ಲಿ ಬಣ್ಣ ಬಣ್ಣದ ವಿದೇಶಿ ಗಾಳಿಪಟಗಳ ಹಾರಾಟ, ಅಂಗಳದಲ್ಲಿ ದೇಸಿ ಆಟಗಳು, ಮನಸ್ಸಿಗೆ ಮುದ ನೀಡುವ ಮನರಂಜನೆ-ಸಂಗೀತ ಸಂಜೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡು ಶುಭ ಸಂಜೆಗೆ ಚಾಲನೆ ದೊರೆತಿದೆ. ಹುಬ್ಬಳ್ಳಿಯ ಅತೀ ದೊಡ್ಡ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದ ಕುಸುಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜು ಬಳಿಯ ಮೈದಾನದಲ್ಲಿ 'ಸಂಸದ ಸಾಂಸ್ಕೃತಿಕ ಮಹೋತ್ಸವ-25' ಅಂಗವಾಗಿ ಇದೇ ತಿಂಗಳ 20, 21ರಂದು ನಡೆಯಲಿದೆ. ಈ ಸಂಬಂಧ 'ಹುಬ್ಬಳ್ಳಿ ಅಂತಾರಾಷ್ಟ್ರೀಯ ಗಾಳಿಪಟ ಹಾಗೂ ಸಾಂಸ್ಕೃತಿಕ ಉತ್ಸವ'ದ ವೇದಿಕೆ ನಿರ್ಮಾಣಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಭೂಮಿಪೂಜೆ ನೆರವೇರಿಸಿದರು ಎಂದು ತಿಳಿಸಿದ್ದಾರೆ.

International Kite Festival Sports and Cultural Festival at Hubballi Bigg Boss Hanumantha Program

ಭೂಮಿ ಪೂಜೆ ನಂತರ ಮಾತನಾಡಿದ ಶಾಸಕರು, ದೇಶಿ ಕ್ರೀಡೆಗಳಾದ ಜಂಗಿ ನಿಕಾಲಿ ಕುಸ್ತಿ, ಮೊದಲ ಬಾರಿಗೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಹಾಗೂ ಮಲ್ಲಕಂಬ ಪ್ರದರ್ಶನ ನಡೆಯಲಿದೆ. ಗಾಳಿಪಟ ಉತ್ಸವದಲ್ಲಿ ದೇಶ-ವಿದೇಶಗಳ ಗಾಳಿಪಟುಗಳು ಭಾಗವಹಿಸಲಿದ್ದಾರೆ. ಸ್ಥಳೀಯರಿಗಾಗಿ ಗಾಳಿಪಟ ತಯಾರಿಕೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮಗಳ ಬಗ್ಗೆ ಹೇಳಿದರು.

ದೇಶದ ಸಂಸ್ಕೃತಿ ಬೆಳೆಸಲು ಹಾಗೂ ದೇಶಿ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ 'ಸಂಸದ ಸಾಂಸ್ಕೃತಿಕ ಮಹೋತ್ಸವ' ಮಾಡಲಾಗುತ್ತಿದೆ. ಅದರಂದತೆ ಈ ವರ್ಷವು ಆಯೋಜಿಸಲಾಗಿದೆ. ಇದರೊಂದಿಗೆ ಚಿತ್ರಕಲೆ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ವಿವರಿಸಿದರು.

International Kite Festival Sports and Cultural Festival at Hubballi Bigg Boss Hanumantha Program

ದೇಶಿ ಕ್ರೀಡೆಗೆ ಫೆಬ್ರವರಿ 20ರಂದು ಗುರುವಾರ ಶಾಸಕ ಅರವಿಂದ ಬೆಲ್ಲದ ಹಾಗೂ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ವಿವಿಧ ಕ್ರೀಡೆ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ನಮ್ಮ ಸಂಸ್ಕೃತಿ, ಆಚರಣೆಗಳ ಪ್ರತೀಕವಾಗಿವೆ ಎಂದರು.

ಬಿಗ್ ಬಾಸ್ ಹನುಮಂತ: ಸಂಗೀತ ಸಂಜೆ

ಇನ್ನೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮಗಳಿಗೆ ಆಗಮಿಸಲಿದ್ದಾರೆ. ಅವರು ಫೆಬ್ರವರಿ 20ರಂದು ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 21ರಂದು ಗಾಯಕ ರಘು ದೀಕ್ಷಿತ್ ಹಾಗೂ ರಿಯಾಲಿಟಿ ಶೋ 'ಬಿಗ್‌ಬಾಸ್' 11ನೇ ಆವೃತ್ತಿಯ ವಿಜೇತ ಹನುಮಂತ ಲಮಾಣಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಶಿಗ್ವಾವಿ ಪಟ್ಟಣದ ಹನುಮಂತ ಲಾಮಾಣಿ ಗಾಯಕರು ಹೌದು, ಕುರಿಗಾಯಿಯೂ ಹೌದು. ಇವರು ಬಿಗ್ ಬಾಸ್ ಗೆದ್ದಿದ್ದು, ಇದೀಗ ರಿಯಾಲಿಟಿ ಶೋಗಳಲ್ಲಿ ಬ್ಯೂಸಿ ಯಾಗಿದ್ದಾರೆ. ಹನುಮಂತ ಮತ್ತು ಗಾಯಕ ರಘು ದೀಕ್ಷಿತ್ ಅವರು ಅಂದು ಕಾರ್ಯಕ್ರಮದ ಮೆರಗು ಹೆಚ್ಚಿಸಲಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+