ಹುಬ್ಬಳ್ಳಿಯ ಪೊಲೀಸರಿಗೆ ಆತನೇ ಯಾಕೆ ಬೇಕು?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ನವೆಂಬರ್ 16: ನಗರದ ಗಿರಣಿ ಚಾಲನ ವ್ಯಕ್ತಿಯೊಬ್ಬ ಪೊಲೀಸರು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಬುಧವಾರ ಯತ್ನಿಸಿದ್ದಾನೆ.

ಸಾಕಷ್ಟು ಅಪರಾಧ ಕೃತ್ಯದ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಚಂದ್ರ ಮನಗುಂಡ (30) ಎಂಬಾತನು ವಿಚಾರಣೆಗೆಂದು ಪೊಲೀಸರು ಪದೇ ಪದೇ ಕರೆಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ವಿಷ ಸೇವಿಸಿದ್ದಾನೆ.

ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಈತನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಮೂವರು ಸರಗಳ್ಳರು]

Hubli Police Enquiry again and again he atempt to death

ಮನೆಗಳ್ಳತನ:
ಧಾರವಾಡ ಜಿಮುದ್ದಿನ ಕಾಲೋನಿ ವಿದ್ಯಾರಣ್ಯ ಹೈಸ್ಕೂಲ್ ಬಳಿಯ ಶಕೀಲಾ ಬೇಗಂ ಮೈಹುದ್ದೀನ ಮುಸ್ತಾಫ್ ಎಂಬುವವರು ಮನೆ ಕೀಲಿ ಹಾಕಿಕೊಂಡು ಕೊಲ್ಹಾಪುರಕ್ಕೆ ಹೋದಾಗ ಇವರ ಮನೆ ಕಳ್ಳತನವಾದ ಪ್ರಕರಣ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮನೆ ಕೀಲಿ ಮುರಿದು 53 ಗ್ರಾಂ ತೂಕದ ಬಂಗಾರದ ಆಭರಣ, 60 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಹಾಗೂ ಮನೆ ಹೊರಗಡೆ ಇದ್ದ ಹೋಂಡಾ ಆಕ್ವೀವಾ ಸ್ಕೂಟರ್ ನ್ನು ಕಳ್ಳರು ಇವರ ಮನೆಯಿಂದ ತೆಗೆದುಕೊಂಡು ಹೋಗಿದ್ದಾರೆ.

ಇನ್ನು ಮೆನಯವರಿಗೆ ಗೊತ್ತಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ದಂಡ:
ಸಂಚಾರ ನಿಯಮ ಉಲ್ಲಂಘನೆ ಮಾಡಿದ 516 ಕೇಸ್ ಗಳನ್ನು ದಾಖಲಿಸಿ 63,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubli Police again and again calling chandra manugunda for Enquiry, offededly he atempt to death.another crime Home Burglary in house owner lose golden jewlary golden jewelry
Please Wait while comments are loading...