ಹುಬ್ಬಳ್ಳಿಯ ಸ್ವಿಮ್ಮಿಂಗ್ ಪೂಲ್ ನಲ್ಲಿ ನೋಡನೋಡುತ್ತಲೇ ಸತ್ತ ಯುವಕ
ಹುಬ್ಬಳ್ಳಿ, ಮಾರ್ಚ್ 12: ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಫ್ಲ್ಯಾಶ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಈ ಘಟನೆ ನಡೆದಿದ್ದು, ಯುವಕ ಮುಳುಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿರಾಜ್ ಅಣ್ಣಿಗೇರಿ (24) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ. ಈಜಾಡುತ್ತಲೆ ಯುವಕ ಮುಳುಗಿದ್ದಾನೆ. ಎಷ್ಟೇ ಕೈ ಬಡಿಯುತ್ತಿದ್ದರೂ ಯಾರಿಗೂ ಗೊತ್ತಾಗಿಲ್ಲ. ಸ್ವಿಮ್ ಟ್ರೈನರ್ ಇದ್ದರೂ ಅವರಿಗೆ ಈ ಸಂಗತಿ ತಕ್ಷಣ ಗಮನಕ್ಕೆ ಬಂದಿಲ್ಲ. ನಂತರ ಗಮನಿಸಿದ ಟ್ರೇನರ್ ಆ ಯುವಕನನ್ನು ನೀರಿನಿಂದ ಹೊರಗೆ ತಂದಿದ್ದಾರೆ.

ಆದರೆ ಅದಾಗಲೇ ಸಿರಾಜ್ ಪ್ರಾಣ ಹೋಗಿತ್ತು. ನವಲಗುಂದ ನಿವಾಸಿ ಸಿರಾಜ್ ತನ್ನ ಸ್ನೇಹಿತರೊಡನೆ ಈಜಾಡಲು ಬಂದಿದ್ದ. ಆದರೆ ಯಾರೊಬ್ಬರು ಆತನ ಜೊತೆ ಇರಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಅನುಮಾನ ವ್ಯಕ್ತಗೊಂಡಿದೆ. ಸಿರಾಜ್ ಮದ್ಯಪಾನ ಮಾಡಿರಲಿಲ್ಲ ಎಂದು ಸ್ವಿಮ್ಮಿಂಗ್ ಪೂಲ್ ಸಿಬ್ಬಂದಿ ದೃಢಪಡಿಸಿದ್ದಾರೆ












Click it and Unblock the Notifications