ಹುಬ್ಬಳ್ಳಿ, ಕಲಬುರಗಿಯಿಂದ ತಿರುಪತಿಗೆ ವಿಮಾನ; ವೇಳಾಪಟ್ಟಿ

ಹುಬ್ಬಳ್ಳಿ, ಡಿಸೆಂಬರ್ 15: ಸ್ಟಾರ್ ಏರ್ ಸಂಸ್ಥೆ ಜನವರಿಯಿಂದ ಹುಬ್ಬಳ್ಳಿ, ಕಲಬುರಗಿ ಯಿಂದ ತಿರುಪತಿಗೆ ವಿಮಾನ ಸೇವೆಯನ್ನು ಆರಂಭಿಸಲಿದೆ. ಈ ವಿಮಾನಕ್ಕಾಗಿ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ.

ಜನವರಿ 11ರಿಂದ ಸ್ಟಾರ್ ಏರ್ ವಿಮಾನಗಳು ಕಲಬುರಗಿ-ತಿರುಪತಿ, ತಿರುಪತಿ-ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿವೆ. ವಿಮಾನ ಹಾರಾಟದ ವೇಳಾಪಟ್ಟಿಯನ್ನು ವಿಮಾನಯಾನ ಸಂಸ್ಥೆ ಬಿಡುಗಡೆ ಮಾಡಿದೆ.

1999 ರೂ.ಗಳಲ್ಲಿ ಜನರು ವಿಮಾನದಲ್ಲಿ ಹೋಗಿ ತಿರುಪತಿಯಲ್ಲಿ ದೇವರ ದರ್ಶನವನ್ನು ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸ್ಟಾರ್ ಏರ್ ಸಂಸ್ಥೆಯ ವೆಬ್ ಸೈಟ್‌ಗೆ ಭೇಟಿ ನೀಡಬಹುದು.

flight

ವೇಳಾಪಟ್ಟಿ; ಕಲಬುರಗಿ-ತಿರುಪತಿ ವಿಮಾನ ಬೆಳಗ್ಗೆ 9.55ಕ್ಕೆ ಹೊರಡಲಿದ್ದು, 11 ಗಂಟೆಗೆ ತಿರುಪತಿ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ, ಭಾನುವಾರ ವಿಮಾನ ಹಾರಾಟ ನಡೆಸಲಿದೆ.

ತಿರುಪತಿ-ಹುಬ್ಬಳ್ಳಿ ವಿಮಾನ ಬೆಳಗ್ಗೆ 11.25ಕ್ಕೆ ಹೊರಡಲಿದ್ದು, 12.30ಕ್ಕೆ ತಿರುಪತಿಗೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರ ನಡೆಸಲಿದೆ.

ಹುಬ್ಬಳ್ಳಿ-ತಿರುಪತಿ ನಡುವಿನ ವಿಮಾನ 12.55ಕ್ಕೆ ಹೊರಡಲಿದ್ದು, 14:00 ಗಂಟೆಗೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸಂಚರಿಸಲಿದೆ.

ತಿರುಪತಿ-ಕಲಬುರಗಿ ನಡುವಿನ ವಿಮಾನ 14:25ಕ್ಕೆ ಹೊರಡಲಿದ್ದು, 15:30ಕ್ಕೆ ತಲುಪಲಿದೆ. ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಈ ವಿಮಾನ ಸಂಚಾರ ನಡೆಸಲಿದೆ ಎಂದು ಪ್ರಕಟಣೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+