ರೋಗಿ ವೃದ್ಧೆಗೆ ನೆಲದ ಮೇಲೆಯೇ ಚಿಕಿತ್ಸೆ ನೀಡಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು

ವೃದ್ಧೆಯೊಬ್ಬರಿಗೆ ಬೆಡ್‌ ನೀಡದೆ ನೆಲದ ಮೇಲೆಯೇ ಚಿಕಿತ್ಸೆ ನೀಡಿರುವ ಅಮಾನವೀಯ ಘಟನೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದ್ದು, ಅಲ್ಲಿನ ಜನರು ವೈದ್ಯರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ, ಫೆಬ್ರವರಿ, 23: ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಾ ಇದ್ದಾರೆ. ಕಿಮ್ಸ್ ವೈದ್ಯರು ಬಡ ರೋಗಿ ವೃದ್ಧೆಯೊಬ್ಬರಿಗೆ ಬೆಡ್ ನೀಡದೆ ಚಿಕಿತ್ಸೆ ನೀಡುತ್ತಿದ್ದು, ಇದು ಜನಾಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯನ್ನು ವಿಶ್ವದರ್ಜೆಯ ನಗರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಮಾತ್ರ ಇನ್ನೂ ಬಡರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಕೆಳಹಂತಕ್ಕೆ ಇಳಿದಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬಡವರ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲದೆ ಕಿಮ್ಸ್ ವೈದ್ಯರು ನಿರ್ಲಕ್ಷ್ಯ ದೋರಣೆಯನ್ನು ತೋರುತ್ತಿದ್ದಾರೆ.

Hubballi Kims Hospital Doctors treated without giving bed to old woman

ಕಿಮ್ಸ್‌ ವೈದ್ಯರ ವಿರುದ್ಧ ಜನಾಕ್ರೋಶ

ಹಿರಿಯ ನಾಗರಿಕರ ಮೇಲೆ ಕಿಮ್ಸ್ ವೈದ್ಯರಿಗೆ ಯಾಕಿಷ್ಟು ನಿರ್ಲಕ್ಷ್ಯ ಅಂತಾ ಜನರು ಪ್ರಶ್ನೆ ಮಾಡುವಂತಾಗಿದೆ. ಹಾಗೆಯೇ ದೂರದ ಊರಿನಿಂದ ಚಿಕಿತ್ಸೆ ಪಡೆಯಲು ವೃದ್ಧರೊಬ್ಬರು ಕಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಈ ಸಮಯದಲ್ಲಿ ಅಲ್ಲಿನ ವೈದ್ಯರು ವೃದ್ಧೆಗೆ ಬೆಡ್ ನೀಡದೆ ನೆಲೆದ ಮೇಲೆ ಕೂರಿಸಿ ಚಿಕಿತ್ಸೆ ನೀಡಿದ ಘಟನೆ ನಡೆದಿದೆ.

ನೆಲದ ಮೇಲೆಯೇ ವುದ್ಧೆಗೆ ಚಿಕಿತ್ಸೆ

ಕುಂದಗೋಳ ತಾಲೂಕಿನ ಚೆನ್ನವ್ವ ಎಂಬ 67 ವರ್ಷದ ವೃದ್ಧೆ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಬಂದಿದ್ದರು. ವೃದ್ಧೆ ನರಳಾಡುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಕಿಮ್ಸ್ ವೈದ್ಯರು ನೆಲದ ಮೇಲೆಯೇ ಕೂರಿಸಿ ಚಿಕಿತ್ಸೆ ನೀಡಿದ್ದಾರೆ. ಗ್ಲೂಕೋಸ್‌ ಬಾಟಲಿ ಹಾಕಲು ಸ್ಟಾಂಡ್ ಸಹ ನೀಡಿರಲಿಲ್ಲ. ಇದರಿಂದಾಗಿ ಚೆನ್ನವ್ವ ಸಂಬಂಧಿಕರು ಗ್ಲೂಕೋಸ್‌ ಬಾಟಲಿಯನ್ನು ಕೈಯಲ್ಲಿ ಹಿಡಿದು ನಿಲ್ಲಬೇಕಾಯಿತು. ಕಿಮ್ಸ್ ವೈದ್ಯರ ಈ ಅನಾಗರಿಕತೆ ಪ್ರದರ್ಶನದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Hubballi Kims Hospital Doctors treated without giving bed to old woman

ವೈದ್ಯೋ ನಾರಾಯಣ ಹರಿ ಅನ್ನುವ ಮಾತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ವಾಕ್ಯಕ್ಕೆ ತಕ್ಕಂತೆ ಕೆಲವು ವೈದ್ಯರು ನಡೆದುಕೊಳ್ಳುತ್ತಿಲ್ಲ. ರೋಗಿಗಳ ಬಳಿ ನಿರ್ಲಕ್ಷ್ಯ ದೋರಣೆ ತೋರುತ್ತಾ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಜನರ ಜೀವ ಉಳಿಸಬೇಕಾದವರೇ ಹೀಗೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆಗಳು ಕೂಡ ಹುಟ್ಟಿಕೊಳ್ಳುತ್ತಲೇ ಇವೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ

ಸರ್ಕಾರ ಮಾತ್ರ ಕಿಮ್ಸ್ ಆಸ್ಪತ್ರೆಗೆ ಸೌಲಭ್ಯಗಳನ್ನು ನೀಡುತ್ತಲೇ ಇದೆ. ಆದರೆ ಇಲ್ಲಿನ ವೈದ್ಯರು ಮಾತ್ರ ರೂಗಿಗಳುಗೆ ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ ತೋರಿಸುತ್ತಿದ್ದಾರೆ. ಆದ್ದರಿಂದ ಆರೋಗ್ಯ ಸಚಿವರು ಇತ್ತ ಗಮನಸಿ ವೈದ್ಯರಿಗೆ ತಿಳಿ ಹೇಳಬೇಕಿದೆ ಎನ್ನುವುದು ಜನರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+