Hubballi Anjali Murder: ಸರ್ಕಾರದಲ್ಲಿನ ಸಮನ್ವಯ ಕೊರತೆಯಿಂದ ಹುಬ್ಬಳ್ಳಿಯಲ್ಲಿ ಕೊಲೆ: ಶೆಟ್ಟರ್

ಹುಬ್ಬಳ್ಳಿ, ಮೇ 16: ನೇಹಾ ಹಿರೇಮಠ ಅವರ ಕೊಲೆಯಾದ ನಂತರ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು. ಪೊಲೀಸರು ಮತ್ತು ರಾಜ್ಯ ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲ. ಪೊಲೀಸ್ ಇಲಾಖೆಯಲ್ಲಿನ ಲೋಪದೋಷದ ಕಾರಣದಿಂದ ಅಂಜಲಿ ಕೊಲೆಯಗಿದೆ. ಕಾನೂನು ಸುವ್ಯವಸ್ಥೆ ಹಾಳಾಗಲು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರೇ ಕಾರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಆಡಳಿತದ ಬಿದ್ದು ಹೋಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲವಾಗುತ್ತಿಲ್ಲ. ನೇಹಾ ಹಿರೇಮಠ ಕೊಲೆಯಾದ ನಂತರ ಪೊಲೀಸರು ಎಚ್ಚೆತ್ತುಕೊಂಡಿದ್ದರೆ, ಅಂಜಲಿ ಕೊಲೆ ಆಗುತ್ತಿರಲಿಲ್ಲ. ಪೊಲೀಸರು ಇದೆಲ್ಲವನ್ನು ಸುಲಭವೆಂದು ಪರಿಗಣಿಸಿದ್ದಾರೆ ಎಂದು ಆರೋಪಿಸಿದರು.

Hubballi Anjali Murder Law and Order Crisis in Hubballi Ex-CM Shettar Blames Govt-Police Disconnect

ಕಾಂಗ್ರೆಸ್‌ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹಾಳು

ಈ ಸರ್ಕಾರದ ಆಡಳಿತದಲ್ಲಿ ಜನರು ಭಯ ಭೀತರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಂಜಲಿ ಹತ್ಯೆ ಮಾಡಿದವರಿಗೆ ಶಿಕ್ಷೆಯಾಗಬೇಕು. ಈ ಸರ್ಕಾರದಲ್ಲಿ ಆಡಳಿತವು ಬಿಗಿ ಇಲ್ಲ. ಅಂಜಲಿ ಕುಟುಂಬ ಮೊದಲೇ ದೂರು ನೀಡಿದ್ದರು ಪೊಲೀಸರು ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಮೇಲಿನ ಅಧಿಕಾರಿಗಳ ಮಾತು ಕೇಳುತಿಲ್ಲ. ಪೊಲೀಸ್ ವ್ಯವಸ್ಥೆಯಲ್ಲಿ ಲೋಪದೋಷಗಳು ಇವೆ ಎಂದು ಅವರು ದೂರಿದರು.

ಅಂಜಲಿ ಕುಟುಂಬಸ್ಥರಿಗೆ ರಕ್ಷಣೆ ಕೊಡಿ

ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಹೀಗೆ ಮುಂದುವರಿದರೆ ದೊಡ್ಡ ಪ್ರಮಾಣದ ಕಾನೂನು ಸುವ್ಯವಸ್ಥೆ ಹಾಳಾಗಬಹುದು. ಇದೆಲ್ಲ ನೋಡಿದರೆ ಸರ್ಕಾರಿ ಅಧಿಕಾರಿಗಳ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತದೆ. ಅಂಜಲಿ ಕುಟುಂಬಸ್ಥರಿಗೆ ರಕ್ಷಣೆ ಕೊಡಿ. ಮುಂಜಾಗೃತ ಕ್ರಮವಾಗಿ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಇದರಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಹೆಚ್ಚಾಗಿದ್ದು, ಇದು ಸರ್ಕಾರದ ಪತನಕ್ಕೂ ಕಾರಣವಾಗಬಹುದು ಎಂದು ಮಹಾರಾಷ್ಟ್ರದ ಏಕನಾಥ ಶಿಂಧೆ ಇತ್ತೀಚೆಗೆ ಹೇಳಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಆಪರೇಶನ್ ಕಮಲ ಮಾಡೋ ಅವಶ್ಯಕತೆ ಇಲ್ಲ.

Hubballi Anjali Murder Law and Order Crisis in Hubballi Ex-CM Shettar Blames Govt-Police Disconnect

ಕಾಂಗ್ರೆಸ್ ನವರ ಕಚ್ಚಾಟದಿಂದಲೇ ಸರ್ಕಾರ ಬಿದ್ದು ಹೋಗಬಹುದು ಎಂದು ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದಾರೆ.

ಸಿಎಂ-ಡಿಸಿಎಂ ಮಧ್ಯ ಸಮನ್ವಯ ಕೊರತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ಸಮನ್ವಯತೆ ಕೊರತೆ ಇದೆ. ಕಾಂಗ್ರೆಸ್‌ನಿಂದ ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳತ್ತಿದ್ದಾರೆ. ಈ ಹಿಂದೆ 17 ಜನ ಬಿಜೆಪಿಗೆ ಬಂದಾಗ ಸಿಎಂ ಇದೇ ರೀತಿ ಹೇಳಿದ್ದರು.

ಇನ್ನೂ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ನಿಲುವು ಸರಿಯಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಹೀಗಾಗಿ ನಾವು ಸಿಬಿಐಗೆ ವರ್ಗಾವಣೆ ಮಾಡಿ ಎಂದು ಹೇಳಿದ್ದೇವೆ. ಇದರಲ್ಲಿ ರಾಜರಾಕರಣ ಮಾಡುವುದು ಸರಿಯಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+