ಬಡ್ಡಿ ಆಸೆಗೆ ಬೀಳಿಸಿ ಅಗ್ದಿ ಅಸಲಿಗೇ ಮುಂಡಾಯಿಸುವ ಸ್ಕೀಮುಗಳಿವು

Posted By:
Subscribe to Oneindia Kannada

ಕಲಘಟಗಿ, ಏಪ್ರಿಲ್ 17: ಧಾರವಾಡದ ಕಲಘಟಗಿಯಲ್ಲಿ ನಡೆದಿರುವ ಈ ವಂಚನೆ ಅದೆಷ್ಟನೇ ಬಾರಿಗೆ ಆಗುತ್ತಿರುವ ಮೋಸದ ಮಾದರಿಯೋ! ಏಕೆಂದರೆ ಎಫ್ ಡಿಯಲ್ಲಿ ಬಡ್ಡಿ ಕಡಿಮೆ ಆಗಿದೆ. ತಾವೇ ಯಾರಿಗಾದರೂ ಬಡ್ಡಿ ಕೊಡಬೇಕು ಅಂದುಕೊಂಡರೂ ಅದಕ್ಕೆ ಕೆಲವು ಅನುಮತಿ ಪಡೆಯಬೇಕು. ಅದಕ್ಕಾಗಿಯೇ ಜನರು ಹೆಚ್ಚಿನ ಬಡ್ಡಿ ಕೊಡುವವರಿಗೆ ಬಲಿ ಬೀಳ್ತಾರೆ.

ಈಗ ಕಲಘಟಗಿಯಲ್ಲಿ ಆಗಿರುವ ನೂರಾರು ಕೋಟಿ ವಂಚನೆಯ ಉದಾಹರಣೆಯನ್ನೇ ಹೇಳೋದಾದರೆ, ಶೇ 5, ಶೇ 8 ಹೀಗೆ ಬಾಯಿಗೆ ಬಂದ ಬಡ್ಡಿಯನ್ನು ಕೊಡುವ ಮಾತು ಕೊಟ್ಟಿದೆ ವಂಚಕ ಕಂಪೆನಿ. ಹ್ಞಾಂ ನೆನಪಿರಲಿ ಇದೆಲ್ಲ ತಿಂಗಳ ಲೆಕ್ಕದ ಬಡ್ಡಿ. ಯಾರಾದರೂ 10 ಲಕ್ಷ ರುಪಾಯಿ ಹಣವಿಟ್ಟರೆ ಶೇ 8ರ ದರದಲ್ಲಿ ತಿಂಗಳಿಗೆ 80 ಸಾವಿರ ರುಪಾಯಿ ಬಡ್ಡಿ ಹಣವನ್ನು ಕೊಟ್ಟೂ ಕೊಟ್ಟಿದ್ದಾರೆ.[ಚಿಟ್ ಫಂಡ್, ನೂರಾರು ಜನರಿಗೆ ಸಾವಿರಾರು ಕೋಟಿ ದೋಖಾ]

How people cheated by companies luring highest rate of interest

ಕೆಲವರಂತೂ ಕೋಟಿಗಟ್ಟಲೆ ಹಣ ಹಾಕಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಪರಿಚಯಸ್ಥರು, ಸ್ನೇಹಿತರಿಂದಲೂ ಹಣ ಹಾಕಿಸಿದ್ದಾರೆ. ಒಂದು ಲಕ್ಷ ರುಪಾಯಿ ಇದ್ದರೆ, ಅದನ್ನು ಇಂಥ ಕಂಪೆನಿಗೆ ಹಾಕಿದರೆ ತಿಂಗಳಿಗೆ ಎಂಟು ಸಾವಿರ ನೀಡುತ್ತದೆ. ಆದರೆ ಬಡ್ಡಿ ಹಣಾ ಎಷ್ಟು ತಿಂಗಳು ಬರುತ್ತದೋ ಅಷ್ಟೇ ಪುಣ್ಯ. ಏಕೆಂದರೆ ಆ ನಂತರ ಟೆಂಟು ಕಿತ್ತುಕೊಂಡು ಕಂಪೆನಿಗಳೇ ಖಾಲಿಯಾಗುತ್ತವೆ.

ನಿಮಗೆ ಇನ್ನೂ ಚೆನ್ನಾಗಿ ಗೊತ್ತಾಗಬೇಕು ಅಂದರೆ ಈಗ ಕಲಘಟಗಿಯಲ್ಲಿ ಜನರ ಹಣ ಮುಂಡಾಯಿಸಿರುವ ಹರ್ಷ ಎಂಟರ್ ಪ್ರೈಸಸ್ ಎಂಬುದು ಬೆಂಗಳೂರಿನಲ್ಲಿದ್ದ ವಿನಿವಿಂಕ್ ಕಂಪೆನಿಯ ತಾತನೋ ಮುತ್ತಾತನೋ ಅನ್ನಬೇಕು. ಏಕೆಂದರೆ ವಂಚನೆ ಮೊತ್ತದ ಪ್ರಮಾಣ ಅಷ್ಟಿದೆ. ಯಾವುದೇ ಹಣಕಾಸು ವ್ಯವಹಾರದ ಕಂಪೆನಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾನುಸಾರ ನೋಂದಣಿ ಆಗಿರಬೇಕು.[ಪೆಟ್ರೋಲ್ ಬಂಕಲ್ಲಿ ಗ್ರಾಹಕರ ಜೇಬಿಗೆ ಕತ್ತರಿ, ವಂಚನೆಗೆ ನಾನಾ ದಾರಿ]

ಜತೆಗೆ ಆರ್ ಬಿಐ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಬಡ್ಡಿ ನೀಡುವಂತಿಲ್ಲ. ಚೀಟಿ ವ್ಯವಹಾರವೇ ಆದರೂ ನೋಂದಣಿ ಮಾಡಿಕೊಳ್ಳದೆ ನಡೆಸುವಂತಿಲ್ಲ. ಆದರೂ ಜನರು ಹೆಚ್ಚಿನ ಬಡ್ಡಿಯ ಆಸೆಗೆ ಬಲಿ ಬಿದ್ದು ಮೋಸ ಹೋಗುತ್ತಾರೆ. ಗೂಗಲ್ ನಲ್ಲಿ ಜಾಹೀರಾತು ಕ್ಲಿಕ್ ಮಾಡಿದ್ದರೆ ಇಷ್ಟು ಹಣ ಬರುತ್ತದೆ. ಅದಕ್ಕೂ ಮುಂಚೆ ಇಷ್ಟು ಡಿಪಾಸಿಟ್ ಮಾಡಬೇಕು ಅನ್ನೋವಂಥ ವಂಚನೆ ಜಾಲಗಳೂ ಇವೆ.

ಯಾವುದೇ ಹಣಕಾಸಿನ ವ್ಯವಹಾರವಿರಲಿ, ಮೊದಲಿಗೆ ಪೂರ್ವಾಪರ ತಿಳಿದುಕೊಳ್ಳಿ. ಅನುಮಾನ ಬಲವಾಗಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಇಲ್ಲದಿದ್ದರೆ ಹೀಗೇ ಕೋಟ್ಯಂತರ ರುಪಾಯಿ ನಾಮ ತಿಕ್ಕುವವರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People usually prefer highest rate of interest schemes for their deposits. But, interest rate should be according to RBI norms. If any company offers highest rate of interest rate, beware of it. Such cheating done by a finance institution in Kalaghatagi, Dharwad.
Please Wait while comments are loading...