ಶ್ರೀರಾಮುಲು, ಸುರೇಶ ಬಾಬು ವಿರುದ್ಧ ಜನಾಂದೋಲನಕ್ಕೆ ಹಿರೇಮಠ್ ಆಗ್ರಹ
ಹುಬ್ಬಳ್ಳಿ, ಮೇ 14: ಸಂಸದ ಶ್ರೀರಾಮುಲು ಮತ್ತು ಶಾಸಕ ಸುರೇಶ್ ಬಾಬು ವಿರುದ್ಧ ಜನಾಂದೋಲನ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರಿಗೆ ಇವರಿಬ್ಬರು ಲಂಚದ ಆಮಿಷ ಒಡ್ಡಿದ್ದರು. ಹಾಗಾಗಿ ಇವರ ಉಮೇದುವಾರಿಕೆಯನ್ನು ರದ್ದುಪಡಿಸಬೇಕು ಎಂದು ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಶ್ರೀರಾಮುಲು ಮತ್ತು ಸುರೇಶ್ ಬಾಬು ಮೇಲೆ ಗಂಭೀರ ಪ್ರಕರಣಗಳಿವೆ. "ಇವರು ಮುಖ್ಯ ನ್ಯಾಯಮೂರ್ತಿಯವರಿಗೆ ರೂಪಾಯಿ 160 ಕೋಟಿ ಮೊತ್ತದ ಆಮಿಷ ನೀಡಲು ಮುಂದಾಗಿದ್ದರು," ಎಂದು ಅವರು ಕಿಡಿಕಾರಿದ್ದಾರೆ.

ಇಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಇಂಥವರ ವಿರುದ್ಧ ಜನಾಂದೋಲನ ಬೆಳೆಯಬೇಕು ಎಂದು ಹಿರೇಮಠ್ ಆಗ್ರಹಿಸಿದ್ದಾರೆ.












Click it and Unblock the Notifications