Get Updates
Get notified of breaking news, exclusive insights, and must-see stories!

ಹುಬ್ಬಳ್ಳಿಯಲ್ಲಿ 20 ವರ್ಷಗಳ ಬಳಿಕ ಅದ್ಧೂರಿಯಾಗಿ ನಡೆದ ದ್ಯಾಮವ್ವದೇವಿ ಜಾತ್ರಾ, ಭಂಡಾರದಲ್ಲಿ ಮಿಂದ್ದೆದ್ದ ಭಕ್ತಗಣ

ಹುಬ್ಬಳ್ಳಿಯ ಯಲ್ಲಾಪುರದಲ್ಲಿ ಸುಮಾರು 20 ವರ್ಷಗಳ ಬಳಿಕ ದ್ಯಾಮವ್ವ ದೇವಿ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಈ ಜಾತ್ರೆಯ ವಿಶೇಷತೆಯನ್ನು ಇಲ್ಲಿ ತಿಳಿಯಿರಿ.

ಹುಬ್ಬಳ್ಳಿ, ಮಾರ್ಚ್‌, 22: ಹುಬ್ಬಳ್ಳಿಯ ಯಲ್ಲಾಪುರದಲ್ಲಿ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಸುಮಾರು 20 ವರ್ಷಗಳ ಬಳಿಕ ದ್ಯಾಮಮ್ಮ ದೇವಿ ಜಾತ್ರೆ ಮಾಡಿದ್ದು, ಇಡೀ ಯಲ್ಲಾಪುರವೇ ಬಂಡಾರಮಯವಾಗಿತ್ತು.

ಒಂದು ಕಡೆ ಕಣ್ಣು ಹಾಯಿಸದಲ್ಲೆಲ್ಲಾ ಬಂಡಾರ‌ ಕಾಣಿಸಿದರೆ, ಮತ್ತೊಂದೆಡೆ ಬಂಡಾರದಲ್ಲಿ‌ ಮಿಂದೆದ್ದ ಭಕ್ತ ಸಾಗರ‌ ಕಂಡುಬಂತು. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ಯಲ್ಲಾಪೂರ ಓಣಿಯಲ್ಲಿ. ಯಲ್ಲಾಪುರ ಓಣಿ ಹುಬ್ಬಳ್ಳಿಯ ಪ್ರಮುಖ ಓಣಿಯಾಗಿದೆ. ಇಲ್ಲಿ ರಂಗಪಂಚಮಿ ಅಂಗವಾಗಿ ಭರ್ಜರಿಯಾಗಿ ಬಣ್ಣದೋಕಳಿ ಆಡಲಾಗುತ್ತದೆ.

Dyamavva devi Jatra Mahatsava in Hubballi, know details

ಯಲ್ಲಾಪುರ ಓಣಿಯಲ್ಲಿ ಜಾತ್ರೆ ಸಂಭ್ರಮ

ಬುಧವಾರ (ಮಾರ್ಚ್‌ 22) ಇದೇ ಯಲ್ಲಾಪುರದ ಓಣಿಯಲ್ಲಿ ಎಲ್ಲಿ ನೋಡಿದರೂ ಬಂಡಾರವೇ ಕಾಣುತ್ತಿತ್ತು. ಇನ್ನು ಭಕ್ತರು ಗುರುತು ಸಿಗದಷ್ಟು ಬಂಡಾರದಲ್ಲಿ ಮಿಂದೆದ್ದರು‌. ಇದಕ್ಕೆಲ್ಲ ಕಾರಣ ಯಲ್ಲಾಪುರ ಓಣಿಯಲ್ಲಿ ದ್ಯಾಮಮ್ಮ ದೇವಿ ಜಾತ್ರೆಯಾಗಿದೆ. ಕಳೆದ 20 ವರ್ಷಗಳಿಂದ ದ್ಯಾಮಮ್ಮದೇವಿ ಜಾತ್ರೆಯನ್ನು ಅದ್ಧೂರಿಯಾಗಿ ಮಾಡಿರಲಿಲ್ಲ. ಆದರೆ ಈ ವರ್ಷ ದ್ಯಾಮಮ್ಮ ದೇವಿ ಜಾತ್ರೆಯನ್ನು ಓಣಿಯ ಹಿರಿಯರೆಲ್ಲರೂ ಸೇರಿ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

ಬಂಡಾರದ ಜಾತ್ರೆಯನ್ನು ಮಾಡುವ ಮೂಲಕ ದ್ಯಾಮಮ್ಮನ ಹರಕೆ ತೀರಿಸಿದ್ದಾರೆ. ಯಲ್ಲಾಪುರ ಓಣಿ, ಸಿದ್ದಿಪೇಟೆ ಮಾರ್ಗವಾಗಿ ಬಂಡಾರದ ಜಾತ್ರೆ ಅದ್ಧೂರಿಯಾಗಿ ಸಾಗಿತ್ತು. 20 ವರ್ಷಗಳ ಬಳಿಕ ನಡೆದ ಜಾತ್ರೆಯಲ್ಲಿ ಸುಮಾರು 4 ರಿಂದ ಐದು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದು ಇನ್ನೂ ವಿಶೇಷವಾಗಿತ್ತು.

Dyamavva devi Jatra Mahatsava in Hubballi, know details

ಕಟ್ಟುನಿಟ್ಟಿನಿಂದ ಜಾತ್ರೆ ಆಚರಣೆ

ಇನ್ನು ದ್ಯಾಮಮ್ಮದೇವಿ ಅದ್ಧೂರಿ ಜಾತ್ರೆ ಹಿನ್ನೆಲೆ, ಯಲ್ಲಾಪುರ ಓಣಿಯಲ್ಲಿ ಬಹಳ ಕಟ್ಟುನಿಟ್ಟಿನ ಕ್ರಮ ಆಚರಣೆ ಮಾಡಲಾಗುತ್ತದೆ. ಒಂದು ತಿಂಗಳುಗಳ ಕಾಲ ಮನೆಯಲ್ಲಿ ಯಾರೂ ಒಲೆ ಮೇಲೆ ಹಂಚನ್ನು ಇಡುವುದಿಲ್ಲ. ಅಷ್ಟೇ ಅಲ್ಲದೆ ಇವತ್ತು ಯಾರೂ ಚಪ್ಪಲಿ ಧರಿಸುವುದಿಲ್ಲ. ದೇವಸ್ಥಾನದ ಬಳಿ ಚಪ್ಪಲಿ ಧರಿಸಿ ಬರುವ ಹಾಗಿಲ್ಲ. ಅಷ್ಟು ಕಟ್ಟುನಿಟ್ಟಾಗಿ ದ್ಯಾಮಮ್ಮದೇವಿ ಜಾತ್ರೆಯನ್ನು ಆಚರಣೆ ಮಾಡಲಾಗುತ್ತದೆ.

ಬಂಡಾರದಲ್ಲಿ ಮಿಂದೆದ್ದ ಭಕ್ತರು

ಇನ್ನು ಈ ವರ್ಷ ದ್ಯಾಮಮ್ಮದೇವಿ ಮೂರ್ತಿಗೆ ಬಣ್ಣವನ್ನು ಕೂಡ ಮಾಡಿಸಲಾಗಿದೆ. ಪ್ರತಿ ವರ್ಷ ಸಾಂಕೇತಿಕವಾಗಿ ನಡೆಯುತ್ತಿದ್ದ ಜಾತ್ರೆ ಈ ಬಾರಿ ಅದ್ಧೂರಿಯಾಗಿ ನಡೆಯಿತು. ಕಟ್ಟುನಿಟ್ಟಿನ ನಿಯಮ‌ ಪಾಲಿಸಿ ಭಕ್ತರು ಬಂಡಾರದಲ್ಲಿ ಮಿಂದೆದ್ದರು. ಒಟ್ಟಾರೆ ಯಲ್ಲಾಪುರ ಓಣಿಯಲ್ಲಿ ಇಂದು ಎಲ್ಲಿ ನೋಡಿದರೂ ಬಂಡಾರವೇ ಕಾಣುತ್ತಿತ್ತು. ಕಳೆದ ಒಂದು ತಿಂಗಳಿಂನಿಂದ ಕಟ್ಟುನಿಟ್ಟಿನ ನಿಯಮ ಪಾಲಿಸಿದ ಯಲ್ಲಾಪುರ ಓಣಿಯ ಜನ ಇಂದು ಬಂಡಾರದಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸಿ ಗಮನ ಸೆಳೆದಿದ್ದಾರೆ.

ಗೋಪಾಲಸ್ವಾಮಿ ಬೆಟ್ಟದಲ್ಲಿ ಜಾತ್ರೆ

ಹಾಗೆಯೇ ಹಿಮಮಳೆ ಸುರಿಸುವ ಬೆಟ್ಟವೆಂದೇ ಹೆಸರುವಾಸಿಯಾಗಿರುವ ಪ್ರಕೃತಿ ಸುಂದರ ಪ್ರವಾಸಿ ತಾಣ ಮತ್ತು ಪವಿತ್ರ ಯಾತ್ರಾ ಸ್ಥಳವೂ ಆಗಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಇತ್ತೀಚೆಗಷ್ಟೇ ಜಾತ್ರೆಯ ಸಂಭ್ರಮ ಮನೆಮಾಡಿತ್ತು. ಆರು ದಿನಗಳ ಕಾಲ ನಡೆದ ಜಾತ್ರೆಯಲ್ಲಿ ದೇವರ ವಿವಿಧ ಪೂಜಾ ಕೈಂಕರ್ಯಗಳು ನಡೆದಿದ್ದು, ರಥೋತ್ಸವ ಬಹುಮುಖ್ಯ ಮತ್ತು ಆಕರ್ಷಣೀಯವಾಗಿತ್ತು.

ರಥೋತ್ಸವ ಶನಿವಾರ (ಮಾರ್ಚ್‌ 18) ನಡೆದಿದ್ದು, ರಥೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಭಕ್ತರ ದಂಡೇ ನೆರೆದಿತ್ತು. ಮಾರ್ಚ್‌ 16ರಿಂದ ಆರಂಭವಾದ ಈ ಜಾತ್ರೆ ಮಾರ್ಚ್‌ 21ರಂದು ಸಮಾರೋಪಗೊಂಡಿದೆ. ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆದವು. ಕಳೆದ ಎರಡು ವರ್ಷಗಳಿಂದ ಕೋವಿಡ್ ಭಯದಿಂದಾಗಿ ಜಾತ್ರೆಗಳು ಸಂಪ್ರದಾಯಕ್ಕೆ ಸೀಮಿತವಾಗಿದ್ದವು. ಆದರೆ ಈ ಬಾರಿ ಜಾತ್ರೆ ಕಳೆಕಟ್ಟಿದ್ದು, ಸ್ಥಳೀಯರಲ್ಲದೆ ದೂರದೂರುಗಳಿಂದ ಭಕ್ತರು ಆಗಮಿಸಿ ಗೋಪಾಲಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.

ಮಾರ್ಚ್ 16ರಂದು ಬೆಳಗ್ಗೆ ಉತ್ಸವ, ಪಷ್ಪಬಲಿ, ಧ್ವಜಾರೋಹಣ, ಸಂಜೆ ಭೇರಿತಾಡನ ಯಾಗಶಾಲಾ ಪ್ರವೇಶದೊಂದಿಗೆ ಜಾತ್ರೆ ಆರಂಭವಾಗಿದ್ದರೆ, ಮಾರ್ಚ್ 17ರಂದು ಶ್ರೀಯವರ ಉತ್ಸವ, ಸಂ 4ಗಂಟೆಗೆ ಕಾಶಿಯಾತ್ರಾ ಉತ್ಸವ, ಸಂಬಂಧ ಮಾಲಾಪೂರ್ವಕ ಶ್ರೀ ರುಕ್ಮಿಣಿ ಸತ್ಯಭಾಮ ಸಹಿತ ಶ್ರೀ ಹಿಮವದ್ ಗೋಪಾಲಸ್ವಾಮಿಯವರ ದಿವ್ಯಕಲ್ಯಾಣೋತ್ಸವ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+