ಪ್ರಧಾನಿ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ಎನ್ನಲು ಇವರಿಗೆ ಹೆದರಿಕೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಏಪ್ರಿಲ್ 09: ಕಾಂಗ್ರೆಸ್‌ನ ರಾಹುಲ್ ಗಾಂಧಿ ಬಳಿಯೇ ಕಾಂಗ್ರೆಸ್ ನಾಯಕರು ಮಾತನಾಡುವುದಿಲ್ಲ. ಮುಖ್ಯಮಂತ್ರಿ ಪದವಿ ಹೋಗಿ ಬಿಡುತ್ತದೆ ಎಂಬ ಭಯಕ್ಕೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಲು ಸಿದ್ಧರಾಮಯ್ಯ ಹೆದರುತ್ತಾರೆ ಎಂದು ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಸಿದ್ದರಾಮಯ್ಯಗೆ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಎಲ್ಲ ಸಂಸದರ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ಟಾಂಗ್ ಕೊಟ್ಟರು. ಅಭಿವೃದ್ದಿ ಹಾಗೂ ಬರ ಪರಿಹಾರದ ವಿಚಾರವಾಗಿ ಈವರೆಗೂ ಯಾವುದೇ ವರದಿ ನೀಡಲು ಸರ್ಕಾರಕ್ಕೆ‌ ಸಾಧ್ಯವಾಗಿಲ್ಲ. ಬಹಿರಂಗ ಚರ್ಚೆಯ‌ ಮೂಲಕ‌ ಈಗಾಗಲೇ ಕಾಂಗ್ರೆಸ್ ನವರಿಗೆ ಉತ್ತರ ನೀಡಲಾಗಿದೆ ಎಂದರು.

CM Siddaramaiah have not Daire For will Say Mallikarjun Kharge As PM Candidate Pralhad Joshi

ವಿಧಾನಸಭೆಯ ಗುಂಗಿನಿಂದ ಸಿಎಂ ಹೊರ ಬಂದಿಲ್ಲ

ಸಿಎಂ ಸಿದ್ಧರಾಮಯ್ಯ ಅವರು ವಿಧಾನಸಭೆಯ ಮೂಡ್ ನಿಂದ ಇನ್ನೂ ಹೊರ ಬಂದಿಲ್ಲ. ಅವರಿನ್ನು ವಿಧಾನಸಭೆ ಚುನಾವಣೆಯ ಮೂಡಿನಲ್ಲಿಯೇ ಇದ್ದಾರೆ. ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಯಾವುದೋ ಒಂದು ರಾಜಕಾರಣದ ವಿಷಯ ಇಟ್ಟುಕೊಂಡು ಮಾತನಾಡುತ್ತಾರೆ ಎಂದು ದೂರಿದರು.

ಕಾಂಗ್ರೆಸ್‌ನವರು ಯಾವುದೇ ಚರ್ಚೆಗಳನ್ನು ಮಾಡುವುದಿಲ್ಲ. 75 ವರ್ಷದ ಇತಿಹಾಸದಲ್ಲಿ 50 ವರ್ಷ ಬಹುಮತ‌ದೊಂದಿಗೆ 8 ವರ್ಷ ಬಹುಮತ ಇಲ್ಲದ‌ ಸರ್ಕಾರ ನಡೆಸಿದ್ದಾರೆ. ಆದರೂ ಆದ್ರೆ ಸದ್ಯದ ಸ್ಥಿತಿಯಲ್ಲಿ‌ ಅರ್ಧಕ್ಕಿಂತ ಕಡಿಮೆ ಸ್ಪರ್ಧೆ ಮಾಡುತ್ತಿದ್ದಾರೆ. ಯಾಕೆ ಈ ಸ್ಥಿತಿ ಬಂದಿದೆ ಅನ್ನೋದನ್ನ ಕಾಂಗ್ರೆಸ್ಸಿಗರು‌ ಮನವರಿಕೆ ಮಾಡಿಕೊಳ್ಳಬೇಕು. ಸನಾತನ ಧರ್ಮದ ವಿರುದ್ಧ ಹಿಂದುತ್ವದ ವಿರುದ್ಧ ಮಾತನಾಡು ಸರಿಯಲ್ಲ ಎಂದು ಹೇಳಿದರು.

ಪ್ರಕಾಶ್ ರಾಜ್ ಒಬ್ಬ ಅಸಂತುಷ್ಟ ಜೀವಿ: ಜೋಶಿ

ಪ್ರಧಾನಿ ಮೋದಿಯವರಿಗೆ ಎರಡು ನಾಲಿಗೆ ಇದೆ ಎಂಬ ಪ್ರಕಾಶ ರಾಜ್ ಹೇಳಿಕೆ ವಿಚಾರ, ಪ್ರಕಾಶ ರಾಜ್ ಅವರಂತವರಿಗೆ ಉತ್ತರ ಕೊಡುವ ಅಗತ್ಯ‌ಇಲ್ಲ. ಅವರೊಬ್ಬ ಅಸಂತುಷ್ಟ ಜೀವಿ ಅವರ‌ ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದರು.

CM Siddaramaiah have not Daire For will Say Mallikarjun Kharge As PM Candidate Pralhad Joshi

ಕರ್ನಾಟಕದಲ್ಲಿನ ಬರ ಹಾಗೂ ಅನುದಾನ ವಿಚಾರವಾಗಿ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡಿಲ್ಲ ಎಂದು ಕೇಂದ್ರ ನಡೆ ಸಮರ್ಥಿಸಿಕೊಂಡರು. ನ್ಯಾಯಾಲವೇ ಸೌಹಾರ್ದಯುವಾಗಿ ಕೆಲಸ ಮಾಡುವಂತೆ ತಿಳಿಸಿದೆ ಎಂಬುದನ್ನು ಮಾಧ್ಯಮದವರ ಗಮನಕ್ಕೆ ತಂದರು.

ಕೇಂದ್ರ ಬಿಜೆಪಿ ಸರ್ಕಾರ ಯಾವಾಗಲೂ ಸೌಹಾರ್ದಯುತವಾಗಿ ವರ್ತನೆ ಮಾಡಿದೆ. ಆದರೆ ರಾಜ್ಯ ಸರ್ಕಾರ ವಿಷಯಾಂತರ ಮಾಡಲು ಈ‌ ರೀತಿ‌ ನ್ಯಾಯಾಲಯ ಮೊರೆ ಹೋಗಿದೆ ಎಂದು ಅವರು ಕಿಡಿ ಕಾರಿದರು.

ಸ್ವಾಮೀಜಿ ವಿರುದ್ಧ ಅಸಮಾಧಾನ ಬಗ್ಗೆ ಗೊತ್ತಿಲ್ಲ

ಧಾರವಾಡದಲ್ಲಿ ಪಕ್ಷೇತರವಾಗಿ ಕಣಕ್ಕಿಳಿದ ಶಿರಹಟ್ಟಿ ಮಠ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಪ್ರಹ್ಲಾದ್ ಜೋಶಿ‌ ಅಭಿಮಾನಿಗಳ ಅಸಮಾಧಾನ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಸಾಮಾಜಿಕ ಜಾಲತಾಣ ಎಂಬುದು ತೆರೆದ ಸಂವಹನ. ಅಲ್ಲಿ‌ ಯಾರು ಅವರ ಬಗ್ಗೆ ಅಸಮಾಧಾನ‌ ವ್ಯಕ್ತಪಡಿಸಿದ್ದಾರೋ ನನಗೆ ಗೊತ್ತಿಲ್ಲ. ನಾನು ಯಾವ ಜಾಲತಾಣದಲ್ಲೂ ಈ‌ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+